ವಿಶ್ವವಿಖ್ಯಾತ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಚಿನ್ನ ಕಳುವು: ಭಕ್ತರಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧ
ಕಠ್ಮಂಡು, ಜೂನ್. 26: ವಿಶ್ವವಿಖ್ಯಾತ ನೇಪಾಳದ ಪಶುಪತಿ ದೇವಾಲಯದಲ್ಲಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ. ಶಿವಲಿಂಗದ ಮೇಲಿನ 100 ಕೆಜಿ ತೂಕದ ಆಭರಣದಿಂದ 10 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ವರದಿಯನ್ನು ತನಿಖೆ ಮಾಡಲು ನೇಪಾಳದ ಉನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೇವಾಲಯದ ಆವರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ಪಶುಪತಿನಾಥ ದೇವಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಐತಿಹಾಸಿಕ ಪಶುಪತಿನಾಥ ದೇವಾಲಯವು ಕಠ್ಮಂಡುವಿನ ಅತ್ಯಂತ ಹಳೆಯ ಹಿಂದೂ ದೇವಾಲಯವಾಗಿದೆ. ಚಿನ್ನ ಕಳುವಿನ ಕಾರಣದಿಂದ ಭಕ್ತರಿಗೆ ತಾತ್ಕಳಾಇಕ ನಿರ್ಬಂಧ ಹೇರಲಾಗಿದೆ. ಕಳೆದ ವರ್ಷ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಾಲಯದ ಒಳಗೆ ಶಿವಲಿಂಗದ ಸುತ್ತಲೂ ಜಲಹರಿ ಎಂಬ ಹೊಸದಾಗಿ ಮಾಡಲಾಗಿದ್ದ ಚಿನ್ನದ ಆಭರಣವನ್ನು ಹಾಕಲಾಗಿತ್ತು.

ಈ ಜಲಹರಿ ಆಭರಣದಿಂದ 10 ಕಿಲೋಗ್ರಾಂಗಳಷ್ಟು ಚಿನ್ನವು ಕಾಣೆಯಾಗಿದೆ ಎಂಬ ವರದಿಯ ನಂತರ ಸಂಸತ್ತಿನಲ್ಲಿ ಪ್ರಶ್ನೆಗಳು ಎದ್ದ ನಂತರ ತನಿಖೆಯನ್ನು ಪ್ರಾರಂಭಿಸಲು ಸರ್ಕಾರವು ತನಿಖಾ ಆಯೋಗಕ್ಕೆ (ಸಿಐಎಎ) ನಿರ್ದೇಶನ ನೀಡಿತ್ತು. ಅಧಿಕಾರದ ದುರುಪಯೋಗದ ವಿಚಾರಣೆಯ ಆಯೋಗ (ಸಿಐಎಎ) ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನೇಪಾಳ ಸರ್ಕಾರದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾಗಿದೆ.
ಪಶುಪತಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಜಲಹರಿ ಮಾಡಲು 103 ಕಿಲೋಗ್ರಾಂಗಳಷ್ಟು ಚಿನ್ನವನ್ನು ಖರೀದಿಸಿದೆ . ಆದರೆ ಈಗ ಈ ಆಭರಣದಲ್ಲಿ 10 ಕಿಲೋಗ್ರಾಂಗಳಷ್ಟು ಕಾಣೆಯಾಗಿದೆ ಎಂದು ಹೇಳಿಕೊಂಡಿದೆ. ಪಶುಪತಿ ಏರಿಯಾ ಡೆವಲಪ್‌ಮೆಂಟ್ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಘನಶ್ಯಾಮ್ ಖತಿವಾಡ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಾಪತ್ತೆಯಾದ ಚಿನ್ನದ ಬಗ್ಗೆ ಪ್ರಶ್ನೆಗಳು ಎದ್ದ ನಂತರ ಪಶುಪತಿನಾಥನ ಜಲಹರಿಯ ಚಿನ್ನವನ್ನು ಅದರ ಗುಣಮಟ್ಟ ಮತ್ತು ತೂಕವನ್ನು ನಿರ್ಧರಿಸಲು ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ.
ಪಶುಪತಿ ದೇವಸ್ಥಾನದ ಆವರಣದಲ್ಲಿ ನೇಪಾಳ ಸೇನೆಯ ಯೋಧರು ಸೇರಿದಂತೆ ಹತ್ತಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತನಿಖಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಧ್ಯಾಹ್ನ 3.30ರಿಂದ ದೇವಸ್ಥಾನದೊಳಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದೇವಾಲಯವು ಮಧ್ಯರಾತ್ರಿಯವರೆಗೆ ಮುಚ್ಚಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ನೇಪಾಳದ ಮಾಜಿ ಪ್ರಧಾನಿ ಮತ್ತು ನೇಪಾಳದ ಕಮ್ಯುನಿಸ್ಟ್ ಪಕ್ಷದ (ಯುಎಂಎಲ್) ಮುಖ್ಯಸ್ಥ ಕೆಪಿ ಶರ್ಮಾ ಒಲಿ ಅವರು ಫೆಬ್ರವರಿ 2021 ರಲ್ಲಿ, ನೇಪಾಳದ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಜಧಾನಿ ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ 104 ಕೆಜಿ ಚಿನ್ನವನ್ನು ಅರ್ಪಿಸಿದ್ದಾರೆ. ನೇಪಾಳದ ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಓಲೈಸಲು ಅವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಚಿನ್ನದಿಂದ ಶಿವನಿಗೆ 'ಜಲಹರಿ' (ಅಲಂಕಾರ) ಮಾಡಲಾಗಿದ್ದು ಅದು ಈಗ ಪ್ರಶ್ನಾರ್ಹವಾಗಿದೆ.
ನೇಪಾಳದ ಭ್ರಷ್ಟಾಚಾರ-ವಿರೋಧಿ ಸಂಸ್ಥೆ ಸಿಐಎಎ (ಅಧಿಕಾರದ ದುರುಪಯೋಗದ ವಿಚಾರಣೆಯ ಆಯೋಗ) ಭಾನುವಾರ ಚಿನ್ನವನ್ನು ಪರೀಕ್ಷಿಸಲು ದೇವಾಲಯದಿಂದ ಜಲಹರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಪಶುಪತಿ ಏರಿಯಾ ಡೆವಲಪ್‌ಮೆಂಟ್ ಟ್ರಸ್ಟ್‌ನ ಮೂಲಗಳ ಪ್ರಕಾರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಲ್ಪಟ್ಟ ಆಭರಣವನ್ನು ಆಗಿನ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಸೂಚನೆಯ ಮೇರೆಗೆ ಚಿನ್ನದಿಂದ ತಯಾರಿಸಲಾಗಿದೆ.
ಸುದ್ದಿಯ ಪ್ರಕಾರ, ಈ ಚಿನ್ನವನ್ನು ನೇಪಾಳದ ಸೆಂಟ್ರಲ್ ಬ್ಯಾಂಕ್‌ನಿಂದ ಖರೀದಿಸಲಾಗಿದೆ. ಇದಕ್ಕಾಗಿ PADT 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಬಳಿಕ ಬೊಕ್ಕಸದಿಂದ ಇನ್ನೂ 30 ಕೋಟಿ ರೂ. ಈಗ 104 ಕೆಜಿ ಚಿನ್ನದಲ್ಲಿ ಸ್ವಲ್ಪ ಪ್ರಮಾಣದ ಅಂದರೆ ಸುಮಾರು 10 ಕೆಜಿಯಷ್ಟು ಬೆಳ್ಳಿ ಅಥವಾ ತಾಮ್ರದ ಇತರ ಲೋಹಗಳೊಂದಿಗೆ ಬೆರೆಸಲಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ದೂರು ದಾಖಲಾದ ತಿಂಗಳ ನಂತರ ಸಿಐಎಎ ಈ ವಿಷಯವನ್ನು ತನಿಖೆಗೆ ತೆಗೆದುಕೊಂಡಿದೆ. ಕಳೆದ ತಿಂಗಳು ಈ ವಿಷಯ ಸಂಸತ್ತಿನಲ್ಲೂ ಪ್ರಸ್ತಾಪವಾಗಿತ್ತು.
ಪಶುಪತಿನಾಥ ದೇವಾಲಯ ಭಗವಾನ್ ಪಶುಪತಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ . ಇದು ನೇಪಾಳದ ಕಠ್ಮಂಡುವಿನಲ್ಲಿ ಬಾಗ್ಮತಿ ನದಿಯ ಬಳಿ ಇದೆ. ವಿಶ್ವದ ಅತಿ ದೊಡ್ಡ ದೇವಾಲಯಮತ್ತು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 1979 ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೊಷಿಸಲಾಗಿದೆ.












Click it and Unblock the Notifications