ಕೊರೊನಾಗೆ ಹೆಪಾಟೈಟಿಸ್ ಔಷಧವೇ ಮದ್ದಾಗುತ್ತಾ? ಝೈಡಸ್ ಕ್ಯಾಡಿಲಾ ಸಂಸ್ಥೆಗೆ ಅನುಮೋದನೆ
ನವದೆಹಲಿ,
ಏಪ್ರಿಲ್ 5: ಕೊರೊನಾ ಚಿಕಿತ್ಸೆಗಾಗಿ ಹೆಪಾಟೈಟಿಸ್ ಸಮಸ್ಯೆಗೆ ತೆಗೆದುಕೊಳ್ಳುವ ಪೆಗಿಲೇಟೆಡ್ ಇಂಟರ್‌ಫೆರಾನ್ ಆಲ್ಫಾ 2ಬಿ ಔಷಧವನ್ನು ಬಳಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ದಿಂದ ಅನುಮೋದನೆ ದೊರೆತಿರುವುದಾಗಿ ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ಸೋಮವಾರ ಘೋಷಣೆ ಮಾಡಿದೆ. id="toptextpromo"> id='are-slot-1' class='oiad oi-axt oiadv'>ಪೆಗಿಹೆಪ್
ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವ ಪೆಗಿಲೇಟೆಡ್ ಇಂಟರ್‌ಫೆರಾನ್ ಆಲ್ಫಾ 2ಬಿ ಔಷಧದ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆದಿದ್ದು, ಈ ಔಷಧ ಕೊರೊನಾಗೆ ಭರವಸೆಯ ಫಲಿತಾಂಶ ತೋರಿಸಿದೆ. ಕೊರೊನಾ ತಡೆಯಲು ಈ ಔಷಧಿ ಪರಿಣಾಮಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಮುಂದೆ ಓದಿ... id='are-slot-2' class='oiad oi-axt oiadv'>
ಮಧ್ಯಂತರ ಫಲಿತಾಂಶದ ವರದಿ
ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲೇ ಈ ಔಷಧವನ್ನು ತೆಗೆದುಕೊಂಡರೆ, ರೋಗಿಯು ಅತಿ ಶೀಘ್ರವೇ ಗುಣಮುಖನಾಗುವನು ಹಾಗೂ ಸೋಂಕಿನ ಗಂಭೀರತೆಯನ್ನು ಈ ಔಷಧಿ ತಗ್ಗಿಸುವುದು ಎಂದು ಪರೀಕ್ಷೆಯ ಮಧ್ಯಂತರ ಫಲಿತಾಂಶದಿಂದ ತಿಳಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಹೆಪಾಟೈಟಿಸ್ ಸಮಸ್ಯೆಗೆ ಹಲವು ವರ್ಷಗಳಿಂದ ಮದ್ದು
ಈ ಔಷಧಿಯು ಒಂದೇ ಡೋಸ್ ಆಗಿರುವುದರಿಂದ ಜನರಿಗೆ ಕೈಗೆಟುಕುವ ದರದಲ್ಲಿಯೂ ಸಿಗಲಿದ್ದು, ಚಿಕಿತ್ಸಾ ಪ್ರಮಾಣ ಕಡಿಮೆ ಇರುತ್ತದೆ ಎಂದು ಸಂಸ್ಥೆ ಖಚಿತಪಡಿಸಿದೆ. ದೀರ್ಘಕಾಲದ ಹೆಪಾಟೈಟಿಸ್ ಬಿ ಹಾಗೂ ಸಿ ರೋಗಿಗಳಗೆ ಹಲವು ವರ್ಷಗಳಿಂದ ಈ ಔಷಧಿ ಸುರಕ್ಷಣೆ ನೀಡುತ್ತಿದೆ. ಕೊರೊನಾ ಸೋಂಕಿಗೂ ಔಷಧಿ ದಕ್ಷತೆ ತೋರಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಉಸಿರಾಟದ ತೊಂದರೆಯನ್ನು ನಿಯಂತ್ರಿಸುತ್ತದೆ
ಔಷಧಿಯ ಪ್ರಯೋಗದ ಸಂದರ್ಭ, ಈ ಔಷಧಿ ತೆಗೆದುಕೊಂಡ ರೋಗಿಗಳು ಬೇಗನೆ ಗುಣಮುಖವಾಗಿದ್ದು ಕಂಡುಬಂದಿದೆ. ರೋಗಿಗಳಲ್ಲಿ ಕಾಣಿಸಿಕೊಳ್ಳುವ, ಸೋಂಕಿನ ಬಹುಮುಖ್ಯ ಲಕ್ಷಣವಾದ ಉಸಿರಾಟದ ತೊಂದರೆಯನ್ನು ನಿಯಂತ್ರಿಸುವಲ್ಲಿಯೂ ಸಮರ್ಥವಾಗಿದೆ. ಈ ಸಕಾರಾತ್ಮಕ ಫಲಿತಾಂಶಗಳೊಂದಿಗೆ ಕೊರೊನಾ ಚಿಕಿತ್ಸೆಗೆ ಅನುಮೋದನೆ ಕೋರಿ ಸಂಸ್ಥೆಯು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದೆ.

250 ಮಂದಿ ಮೇಲೆ ನಡೆದಿರುವ ಪ್ರಯೋಗ
ಭಾರತದ 20-25 ಕೇಂದ್ರಗಳಲ್ಲಿ ಈ ಔಷಧದ ಪ್ರಯೋಗ ನಡೆದಿದೆ. 250 ಮಂದಿ ಮೇಲೆ ಪ್ರಯೋಗ ನಡೆದಿದ್ದು, ಇದರ ವಿಸ್ತೃತ ವರದಿಯನ್ನು ಪ್ರಸ್ತುತಪಡಿಸಲಾಗುವುದು ಎಂದು ಕಂಪನಿ ಹೇಳಿದೆ. ಅಮೆರಿಕ, ಮೆಕ್ಸಿಕೋದಲ್ಲಿಯೂ ಈ ಔಷಧಿಯ ಪ್ರಯೋಗ ನಡೆಸುವುದಾಗಿ ತಿಳಿದುಬಂದಿದೆ.












Click it and Unblock the Notifications