ಮಿಜೋರಾಂ ಮುಖ್ಯಮಂತ್ರಿಯಾಗಿ ಝೊರಾಮ್ತಂಗ ಪ್ರಮಾಣ ವಚನ ಸ್ವೀಕಾರ
ಐಜ್ವಲ್, ಡಿಸೆಂಬರ್ 15: ಮಿಜೋ ನ್ಯಾಶನಲ್ ಫ್ರಂಟ್(ಎಂಎನ್ ಎಫ್) ಅಧ್ಯಕ್ಷ ಝೊರಾಮ್ತಂಗ ಅವರು ಮಿಜೋರಾಂ ನ ಮುಖ್ಯಮಂತ್ರಿಯಾಗಿ ಶನಿವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ನವೆಂಬರ್ 28 ರಂದು ಮಿಜೋರಾಂನ 40 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಡಿಸೆಂಬರ್ 11 ರಂದು ಹೊರಬಿದ್ದ ಫಲಿತಾಂಶದಲ್ಲಿ ಒಟ್ಟು 26 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಸಾಧಿಸಿದ್ದ ಎಂಎನ್ ಎಫ್, ಆಡಳಿತಾರೂಡ ಕಾಂಗ್ರೆಸ್ ಅನ್ನು ಸೋಲಿಸಿತ್ತು.

ಮಿಜೋ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಝೊರಾಮ್ತಂ, ಅವರಿಗೆ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಅವರು ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಅವರು ಹತ್ತು ವರ್ಷಗಳ ನಂತರ ಮತ್ತೊಮ್ಮೆ ಈಶಾನ್ಯ ರಾಜ್ಯವಾದ ಮಿಜೋರಾಂನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.












Click it and Unblock the Notifications