ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲೆ ವಿದೇಶಿ ಸಂಚು: ಯೂಟ್ಯೂಬ್ ವಿಡಿಯೋ ಡಿಲೀಟ್

|
Google Oneindia Kannada News

ನವದೆಹಲಿ, ಫೆಬ್ರವರಿ 11: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ವಿದೇಶಿ ಸ್ಥಾಪಿತ ಹಿತಾಸಕ್ತಿಗಳ ನಂಟು ಇದೆ ಮತ್ತು ಇದಕ್ಕೆ ಭಾರತದಲ್ಲಿಯೇ ಇರುವ ಕೆಲವು ಮಾಧ್ಯಮ ಹಾಗೂ ಕುತಂತ್ರದ ವೆಬ್‌ಸೈಟ್‌ಗಳು ಜತೆಗೂಡಿವೆ ಎಂಬ ಆರೋಪ ಮಾಡಿದ್ದ ವೈರಲ್ ವಿಡಿಯೋವೊಂದನ್ನು ಗೂಗಲ್ ತನ್ನ ಯೂಟ್ಯೂಬ್ ವೇದಿಕೆಯಿಂದ ಕಿತ್ತುಹಾಕಿದೆ.

ಆಲ್ಟ್‌ನ್ಯೂಸ್ ಸೇರಿದಂತೆ ವಿವಿಧ ವೆಬ್‌ಸೈಟ್‌ಗಳು ಮತ್ತು ಭಾರತದ ವಿರುದ್ಧ ನಡೆಯುತ್ತಿರುವ ಜಾಗತಿಕ ಪ್ರಚಾರ ತಂತ್ರಗಳಲ್ಲಿ ವಿದೇಶಿ ಹಿತಾಸಕ್ತಿಗಳ ಕೈವಾಡ ಮತ್ತು ನಂಟು ಇರುವ ಬಗ್ಗೆ 'ದಿ ಸ್ಟ್ರಿಂಗ್' ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಬುಧವಾರ ವಿಡಿಯೋವೊಂದನ್ನು ಪ್ರಸಾರ ಮಾಡಿತ್ತು.

ಕೇಂದ್ರದ ವಿರುದ್ಧ ಕೂಗು: ಪಂಜಾಬ್ ಮಹಾಪಂಚಾಯತ್ ನಲ್ಲಿ ಲಕ್ಷಲಕ್ಷ ರೈತರು! ಕೇಂದ್ರದ ವಿರುದ್ಧ ಕೂಗು: ಪಂಜಾಬ್ ಮಹಾಪಂಚಾಯತ್ ನಲ್ಲಿ ಲಕ್ಷಲಕ್ಷ ರೈತರು!

ಎಡಪಂಥೀಯ ಸಿದ್ಧಾಂತದ ಕೋಟ್ಯಧಿಪತಿ ಜಾರ್ಜ್ ಸೊರೊಸ್ ಅವರು ಎಡಪಂಥೀಯ ಪರ ವೆಬ್‌ಸೈಟ್‌ಗಳ ಮೂಲಕ ಭಾರತದ ರಾಜಕೀಯ ವ್ಯವಹಾರಗಳ ಮೇಲೆ ಹೇಗೆ ಪರೋಕ್ಷವಾಗಿ ಪ್ರಭಾವ ಬೀರುತ್ತಿದ್ದಾರೆ. ಗ್ರೆಟಾ ಥನ್‌ಬರ್ಗ್ ಹಂಚಿಕೊಂಡಿದ್ದ ವಿವಾದಾತ್ಮಕ ಟೂಲ್‌ಕಿಟ್‌ನಲ್ಲಿ ಇದ್ದ ದಾಖಲೆಗಳು ವಿದೇಶಿ ಸಂಚನ್ನು ಬಹಿರಂಗಪಡಿಸಿದೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿತ್ತು.

 Youtube Removes A Video Of The String That Alleged Foreign Conspiracy Against India

12 ನಿಮಿಷಗಳ ಈ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದು, ವಿದೇಶಿ ಒತ್ತಡದ ಕಾರಣದಿಂದಲೇ ವಿಡಿಯೋವನ್ನು ಅಳಿಸಿಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

English summary
YouTube has removed a video of The String which argued media houses and foreign vested interests conspiracy against India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X