ಚಿತ್ರ ಸುದ್ದಿ: ದೇಶದ ನಾನಾ ಭಾಗಗಳಲ್ಲಿ ವ್ಯಾಲೆಂಟೈನ್ಸ್ ಡೇ ಹೇಗಾಯ್ತು?

Posted By:
Subscribe to Oneindia Kannada
ಫೆಬ್ರವರಿ 14 ಅಂದರೆ ವ್ಯಾಲೆಂಟೈನ್ಸ್ ಡೇ ಅಂತ. ತಮ್ಮ ಪ್ರೇಯಸಿಯ ಹೃದಯ ಗೆಲ್ಲಲು ಹುಡುಗರು ನಾನಾ ಪಡಿಪಾಟಲುಗಳನ್ನು ಪಟ್ಟು ಪ್ರೇಮ ನಿವೇದನೆ ಮಾಡಲು ಇದು ಶುಭದಿನ.

ಹಾಗಾಗಿಯೇ, ವಿಶ್ವದ ಎಲ್ಲೆಡೆ ಆಚರಿಸಲ್ಪಡುವ ಈ ಪ್ರೇಮಿಗಳ ದಿನಾಚರಣೆಗೆ ಅದರದ್ದೇ ಆದ ಗಮ್ಮತ್ತಿದೆ. ಬಲ್ಲವನೇ ಬಲ್ಲ ಬೆಲ್ಲದ ರುಚಿ ಎಂಬಂತೆ ಪ್ರೇಮಿಗಳು ಮಾತ್ರ ಈ ದಿನ ಅನುಭವಿಸುವ ಮಧುರ ಯಾತನೆ ಕೇವಲ ಅವರಿಗೆ ಮಾತ್ರ ಗೊತ್ತು.[ಪ್ರೇಮ ಗುರು ವ್ಯಾಲೆಂಟೈನ್ ನೆನಪಾಗುವುದೇಕೆ?]

ಅಂದಹಾಗೆ, ಈ ಪ್ರೇಮ ಅರಳುವ ದಿನಕ್ಕೆ ವಿರೋಧ ಕೂಗೆದ್ದಿದ್ದು ಸುಳ್ಳಲ್ಲ. ಅವರ ವಾದದಲ್ಲಿ ತಪ್ಪೇನಿಲ್ಲ. ಅವರ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪುಣ್ಯಸ್ಮರಣೆಯ ಈ ದಿನವನ್ನು ದೇಶಭಕ್ತರ ದಿನವನ್ನಾಗಿ ಆಚರಿಸಬೇಕೆಂಬುದು ಅವರ ವಾದ.

ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಅಭಿಯಾನವನ್ನು ಮಾಡಲಾಗಿತ್ತು. ಅವರ ವಾದ ಯುವ ಪ್ರೇಮಿಗಳಿಗೆ ಕೇಳಲಿಲ್ಲವೇನೋ! ಅಥವಾ ಕೇಳಿದರೂ ಪ್ರೀತಿಯೆಂಬ ಮಧುರ ಮಧುವಿನ ಸರೋವರದಲ್ಲಿ ಬೀಳಲು ಸಿದ್ಧವಾಗಿದ್ದ ಅವರಿಗೆ ಇದೆಲ್ಲಾ ಕೇಳಿಸಿರಲಿಕ್ಕಿಲ್ಲ. 'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಹಾಡೂ ಅವರಿಗೆ ಸ್ಫೂರ್ತಿಯಾಗಿದ್ದಿರಬಹುದು.[ಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನ]

ದೇಶದ ನಾನಾ ಕಡೆ ಪ್ರೇಮಿಗಳು ಈ ಪ್ರೇಮಿಗಳ ದಿನವನ್ನು ಹೇಗೆ ಆಚರಿಸಿದರು.. ಇಲ್ಲಿದೆ ಸುದ್ದಿ ಚಿತ್ರ .

ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನ ನಾ!

ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನ ನಾ!

ನವದೆಹಲಿಯ ಗಿಫ್ಟ್ ಗ್ಯಾಲರಿಯೊಂದರಲ್ಲಿ ಹುಡುಗಿಯೊಬ್ಬಳು ಗುಲಾಬಿಯಿಂದ ತುಂಬಿರುವ ಹೃದಯದಾಕಾರದ ಗಿಫ್ಟ್ ಜತೆ ಫೋಟೋಕ್ಕೆ ಪೋಸು ನೀಡಿದ್ದು ಹೀಗೆ.

ಎಂಜಾಯ್ ಮಾಡಿದ ಹಿರಿಯ ನಾಗರೀಕರು

ಎಂಜಾಯ್ ಮಾಡಿದ ಹಿರಿಯ ನಾಗರೀಕರು

ಕೋಲ್ಕತಾದ ಟ್ರಾಮ್ ಬಂಡಿಯೊಂದರ ಬೋಗಿಯನ್ನು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಚೆಂದವಾಗಿ ಅಲಂಕಾರಗೊಳಿಸಲಾಗಿತ್ತು. ಯುವ ಜನರ ಈ ಉತ್ಸಾಹವನ್ನು ಹಿರಿಯ ನಾಗರಿಕರು ನೋಡಿ ಕಣ್ತುಂಬಿಕೊಂಡರು. ಅವರಿಗೂ ಅವರ ಹಳೇ ಪ್ರೇಮ ಪ್ರಣಯ ನೆನಪಾಗಿರಬೇಕು.

ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು

ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು

ಶಿಮ್ಲಾದ ರಿಡ್ಜ್ ನಲ್ಲಿ ನವ ವಿವಾಹಿತ ವಧು-ವರರು ಪ್ರೇಮಿಗಳ ದಿನ ಆಚರಿಸಿದ ಬಗೆಯಿದು. ಯುವಕರು ತನ್ನ ಸಂಗಾತಿಗಳಿಗೆ ಹೂವು ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡರು.

ಪ್ರೀತಿಗೆ ಗಡಿ ಹಂಗೇನಿಲ್ಲ!

ಪ್ರೀತಿಗೆ ಗಡಿ ಹಂಗೇನಿಲ್ಲ!

ಶಿಮ್ಲಾದ ರಿಡ್ಜ್ ಕ್ಕೆ ಭೇಟಿ ನೀಡಿದ್ದ ವಿದೇಶೀ ಜೋಡಿಗಳೂ ವ್ಯಾಲೆಂಟೈನ್ಸ್ ಡೇಯನ್ನು ಮರೆತಿರಲಿಲ್ಲ. ಅವರೂ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡು ಆನಂದಪಟ್ಟರು.

ಪೆಟಾ ಕಾರ್ಯಕರ್ತರ ವಿಭಿನ್ನ ಸಂದೇಶ

ಪೆಟಾ ಕಾರ್ಯಕರ್ತರ ವಿಭಿನ್ನ ಸಂದೇಶ

ಡೆಹ್ರಾಡೂನ್ ನಲ್ಲಿ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವ 'ಪೆಟಾ' ಸಂಸ್ಥೆಯ ಕಾರ್ಯಕರ್ತರು ವ್ಯಾಲೆಂಟೈನ್ ದೇವತೆಯ ವೇಷ ಧರಿಸಿ ಪ್ರಾಣಿಗಳ ಮೇಲೆ ದಯೆ ತೋರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ಗಮನ ಸೆಳೆದರು.

ಒಪ್ಪಿಕೊಳ್ಳಿ ನಮ್ಮ ಈ ಪ್ರೀತಿಯನ್ನು

ಒಪ್ಪಿಕೊಳ್ಳಿ ನಮ್ಮ ಈ ಪ್ರೀತಿಯನ್ನು

ಸೂರತ್ ನ ಕಾಲೇಜೊಂದರಲ್ಲಿ ಹುಡುಗರು ಸಾಲಾಗಿ ನಿಂತು ತಮ್ಮ ತಮ್ಮ ಪ್ರೇಯಸಿಯರಿಗೆ ಮಂಡಿಯೂರಿ ಕುಳಿತು ಗುಲಾಬಿ ಹೂವು ನೀಡಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಆಕರ್ಷಕವಾಗಿತ್ತು.

ಮತ್ತೊಂದೆಡೆ ಗುಡುಗು

ಮತ್ತೊಂದೆಡೆ ಗುಡುಗು

ದೇಶದ ಹಲವೆಡೆ ಪ್ರೇಮಿಗಳು ಜಾಲಿ ಮೂಡಿನಲ್ಲಿದ್ದರೂ ಜಮ್ಮು ಕಾಶ್ಮೀರದಲ್ಲಿ ಭಜರಂಗ ದಳದ ಕಾರ್ಯಕರ್ತರು ಕೈಯ್ಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪ್ರೇಮಿಗಳ ದಿನಚರಣೆ ಆಚರಿಸಕೂಡದೆಂದು ಘೋಷಣೆ ಕೂಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Valentine's day celebrated by many of the youths across the country on February 14th in spite of opposition from the fundamentalists.
Please Wait while comments are loading...