ಯುವಜನತೆಯಲ್ಲಿ ಆತ್ಮವಿಶ್ವಾಸ ಜಾಗೃತವಾದರೆ, ಆತ್ಮನಿರ್ಭರ ಭಾರತ ಸಾಧ್ಯ: ಮೋದಿ

ನವದೆಹಲಿ, ಮಾರ್ಚ್ 03: ಯುವಜನತೆಯಲ್ಲಿ ಆತ್ಮವಿಶ್ವಾಸವಿದ್ದಾಗ ಮಾತ್ರ ಆತ್ಮನಿರ್ಭರ ಭಾರತ ನಿರ್ಮಾಣ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆತ್ಮ ನಿರ್ಭರ ಕುರಿತು ಸೆಮಿನಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ತಮ್ಮ ಶಿಕ್ಷಣ, ಕೌಶಲ್ಯ ಮತ್ತು ಜ್ಞಾನದಲ್ಲಿ ನಂಬಿಕೆಯಿದ್ದರೆ ಯುವಕರಲ್ಲಿ ತಾನಾಗಿಯೇ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಪ್ರತಿಯೊಂದು ಭಾಷೆಗಳ ತಜ್ಞರು, ವಿಶ್ವದ ಪ್ರಮುಖ ಉತ್ತಮ ವಿಷಯಗಳು ಭಾರತೀಯ ಭಾಷೆಯಲ್ಲಿ ಜನರಿಗೆ ಸಿಗುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದರು. ಹೈಡ್ರೋಜನ್ ವಾಹನಗಳ ಪರೀಕ್ಷೆಯನ್ನು ಭಾರತ ಮಾಡಿದೆ. ಅದನ್ನು ಸಾರಿಗೆಯ ಇಂಧನವಾಗಿ ಬಳಕೆ ಮಾಡಲು ಉದ್ಯಮವನ್ನು ಸಿದ್ಧಗೊಳಿಸುವಂತೆ ನಾವು ಮಾಡಬೇಕು.

Youth Must Have Self-Confidence, Faith In Education: PM Modi

ಇಂಧನವನ್ನು ಸ್ವಾವಲಂಬನೆ ಮಾಡುವ ನಿಟ್ಟಿನಲ್ಲಿ ಹಸಿರು ಇಂಧನವು ಮುಂದಿನ ದಿನಗಳಲ್ಲಿ ದೇಶಕ್ಕೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ಘೋಷಿಸಿರುವ ಹೈಡ್ರೋಜನ್ ಮಿಷನ್ ಬಹುದೊಡ್ಡ ಕ್ರಾಂತಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಈ ವರ್ಷದ ಬಜೆಟ್ ನಲ್ಲಿ ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ಸೃಜನಾತ್ಮಕತೆಗೆ ಒತ್ತು ನೀಡಲಾಗಿದೆ ಎಂದ ಪ್ರಧಾನ ಮಂತ್ರಿ, ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+