ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಕಣ್ಣೂರು, ಫೆಬ್ರವರಿ 13: ಅಪರಿಚಿತ ವ್ಯಕ್ತಿಗಳು ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಿನ್ನೆ(ಫೆ.12) ರಾತ್ರಿ ನಡೆದಿದೆ.
ಮೃತರನ್ನು ಶುಹೈಬ್(30) ಎಂದು ಗುರುತಿಸಲಾಗಿದ್ದು, ಅವರ ಮೇಲೆ ಮೊದಲು ಕಚ್ಚಾ ಬಾಂಬ್ ಎಸೆದು, ನಂತರ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಈ ಘಟನೆಯ ಹಿಂದೆ ಸಿಪಿಇಎಂ ಕೈವಾಡವಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಜಿಲ್ಲೆಯಾದ್ಯಂತ ಎರಡು ದಿನಗಳ ಹರ್ತಾಳಕ್ಕೆ ಕರೆನೀಡಿದೆ.













Click it and Unblock the Notifications