ಹಿಂಸಾಚಾರ ನಡೆಯುವಾಗ ರಾಜಕೀಯ ಲಾಭಕ್ಕಾಗಿ ಸುಮ್ಮನಿದ್ದಿರಿ: ಕೋರ್ಟ್

By: ವಿಕಾಸ್ ನಂಜಪ್ಪ
Subscribe to Oneindia Kannada

"ನಿಮ್ಮ ರಾಜಕೀಯ ಲಾಭಕ್ಕಾಗಿ ನಗರವನ್ನು ಹೊತ್ತಿ ಉರಿಯುವಂತೆ ಮಾಡಿದಿರಿ" ಎಂದು ಪಂಚಕುಲದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಮ್ ರಹೀಮ್ ಗೆ ಶಿಕ್ಷೆ ನೀಡಲು ಹೆಲಿಕಾಪ್ಟರ್ ನಲ್ಲಿ ಪಯಣಿಸಲಿರುವ ಜಡ್ಜ್

ಹಿಂಸಾಚಾರದಲ್ಲಿ ತೊಡಗಿದ್ದವರಿಗೆ ನಿಮ್ಮ ಸರಕಾರ ಶರಣಾಗಿದೆ. ಹಿಂಸಾಚಾರದ ಸನ್ನಿವೇಶದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ವಿಚಾರವನ್ನು ಎತ್ತಿದ ಹೈಕೋರ್ಟ್ ಛೀಮಾರಿ ಹಾಕಿದೆ. ದೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಗೆ ಸಿಬಿಐ ಕೋರ್ಟ್ ಅತ್ಯಾಚಾರ ಆರೋಪದಲ್ಲಿ ಅಪರಾಧಿ ಎಂದು ಘೋಷಣೆ ಮಾಡಿತ್ತು.

You let the city burn for your political gains: HC to Khattar govt

ಆ ನಂತರ ತೀವ್ರ ಸ್ವರೂಪದ ಹಿಂಸಾಚಾರ ಭುಗಿಲೆದ್ದಿತ್ತು. ಈ ನಿರ್ದಿಷ್ಟ ಪ್ರಕರಣದಲ್ಲಿ ಹೈ ಕೋರ್ಟ್ ಕೆಲವು ಮಾತುಗಳನ್ನು ಹೇಳಿದೆ. ಸಿಬಿಐ ಕೋರ್ಟ್ ತೀರ್ಪಿಗೂ ಮುನ್ನ ಕೋರ್ಟ್ ಹೇಳಿತ್ತು. "ಅಗತ್ಯ ಬಿದ್ದಲ್ಲಿ ಸೇನೆಯನ್ನು ಬಳಕೆ ಮಾಡುವುದಕ್ಕೆ ಮುಲಾಜು ನೋಡಬೇಡಿ" ಎಂದಿತ್ತು.

ಶುಕ್ರವಾರ ಗುರ್ಮೀತ್ ರಾಮ್ ರಹೀಮ್ ಅಪರಾಧಿ ಎಂದು ಕೋರ್ಟ್ ಘೋಷಿಸಿದ ನಂತರ ಪ್ರತಿಭಟನಾನಿರತರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದರು. ದೇರಾ ಸಚ್ಛಾ ಸೌಧದ ಆಸ್ತಿಯನ್ನು ವಶಕ್ಕೆ ಪಡೆದು, ಹಿಂಸಾಚಾರದಿಂದ ಆದ ನಷ್ಟವನ್ನು ಭರ್ತಿ ಮಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Punjab and Haryana High Court has pulled up the state government following the violence that erupted in Panchkula on Friday. You allow the city to burn for your political gains, the HC said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ