ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಎಂಎಲ್ಸಿ ಚುನಾವಣೆಗೆ ಯೋಗಿ ಸ್ಪರ್ಧೆ

ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಯೋಗಿ ಜತೆಗೆ ಅವರ ಸಂಪುಟದ ನಾಲ್ವರು ಸಚಿವರೂ ಸ್ಪರ್ಧೆ.

|
Google Oneindia Kannada News

ಅಲಹಾಬಾದ್, ಆಗಸ್ಟ್ 31: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅವರು ಶೀಘ್ರದಲ್ಲೇ ನಡೆಯಲಿರುವ ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ಬಿಜೆಪಿ ತಿಳಿಸಿದೆ.

ಗೋರಖ್ ಪುರ್ ನಿಮ್ಮ ಪಿಕ್ನಿಕ್ ಸ್ಪಾಟ್ ಅಲ್ಲ, ರಾಹುಲ್ ಗೆ ಯೋಗಿ ಟಾಂಗ್ಗೋರಖ್ ಪುರ್ ನಿಮ್ಮ ಪಿಕ್ನಿಕ್ ಸ್ಪಾಟ್ ಅಲ್ಲ, ರಾಹುಲ್ ಗೆ ಯೋಗಿ ಟಾಂಗ್

ಯೋಗಿ ಅವರು ತಮ್ಮ ಸಂಪುಟದಲ್ಲಿನ ಇತರ ನಾಲ್ವರು ಸಚಿವರ ಜತೆಗೇ ಈ ಚುನಾವಣೆಯನ್ನು ಎದುರಿಸಲಿದ್ದಾರೆಂದು ಬಿಜೆಪಿ ತಿಳಿಸಿದೆ. ಯೋಗಿ, ಕೇಶವ್, ದಿನೇಶ್ ಜತೆಗೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಮತ್ತಿಬ್ಬರು ಸಚಿವರೆಂದರೆ ಸ್ವಂತತ್ರ ದೇವ ಸಿಂಗ್ ಹಾಗೂ ಮೊಹ್ಸಿನ್ ರಾಝಾ.

Yogi Adityanath to contest MLC bypoll in Uttar Pradesh

ಇದೇ ವರ್ಷದ ಆರಂಭದಲ್ಲಿ ನಡೆದಿದ್ದ ಉತ್ತರ ಪ್ರದೇಶ ಉಪ ಚುನಾವಣೆ ಫಲಿತಾಂಶ ಹೊರಬಿದ್ದಾಗ ಬಿಜೆಪಿ ಅಭೂತಪೂರ್ವ ಯಶಸ್ಸನ್ನು ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರ ಗದ್ದುಗೆಯನ್ನು ಹಿಡಿದಿತ್ತು.

ಆಗ, ಗೋರಖ್ ಪುರದಿಂದ ಎಂಪಿ ಆಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ಏಕಾಏಕಿ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿಸಿತು ಬಿಜೆಪಿ ಹೈಕಮಾಂಡ್. ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದ ಯೋಗಿ, ಇದೀಗ ಸಂವಿಧಾನದ ನಿಯಮಗಳ ಪ್ರಕಾರ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆದ್ದು ಉತ್ತರ ಪ್ರದೇಶ ವಿಧಾನ ಮಂಡಲ ಪ್ರವೇಶಿಸಬೇಕಿದೆ.

English summary
Uttar Pradesh Chief Minister Yogi Adityanath and two deputy chief ministers Keshav Prasad Maurya and Dinesh Sharma will contest the forthcoming bypolls to the state legislative council, the BJP announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X