Yogi Adityanath: ಸನಾತನವೇ ಭಾರತದ ರಾಷ್ಟ್ರೀಯ ಧರ್ಮ; ಯೋಗಿ ಆದಿತ್ಯನಾಥ್
ಸನಾತನ ಧರ್ಮವೇ ಭಾರತದ ರಾಷ್ಟ್ರೀಯ ಧರ್ಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಲ್ಲ ಎಂದು ಹೇಳಿದ್ದಾರೆ.
ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮ. ಅದು ಮಾನವೀಯತೆಯ ಧರ್ಮ, ಪೂಜೆಯ ವಿಧಾನ ಬೇರೆಯಾಗಿರಬಹುದು. ಆದರೆ ಅದು ಒಂದೇ ಆಗಿದೆ, ಆ ಧರ್ಮವು ಸನಾತನ ಧರ್ಮವಾಗಿದೆ. ಕುಂಭ ಮೇಳವೂ ಸನಾತನ ಧರ್ಮದ ಪ್ರತಿನಿಧಿಯಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಮಹಾ ಕುಂಭ ಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಆರು ಕೋಟಿ ಭಕ್ತರು ಈವರೆಗೂ ಸ್ನಾನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
"ಈ ಏಕತೆಯ ಸಂದೇಶವನ್ನು ಮಹಾಕುಂಭದಿಂದ ನೀರಲಾಗಿದೆ. ಯಾವುದೇ ತಾರತಮ್ಯವಿರಲಿಲ್ಲ, ಸನಾತನ ಧರ್ಮವನ್ನು ಟೀಕಿಸುತ್ತಿದ್ದ ಜನರಿಗೆ ಇದನ್ನು ನೋಡಲು ಬನ್ನಿ ಎಂದು ನಾವು ಕರೆ ನೀಡುತ್ತೇವೆ. ಧೃತರಾಷ್ಟ್ರರಂತೆ ವರ್ತಿಸಬೇಡಿ ನೀವೇ ಬಂದು ನೋಡಿ" ಎಂದು ಅವರು ಹೇಳಿದರು.
11 ಕೋಟಿ ಭಕ್ತರಿಂದ ಸ್ನಾನ
ತ್ರಿವೇಣಿ ಸಂಗಮದಲ್ಲಿ ಇದುವರೆಗೆ 11 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಮೊದಲ 14 ದಿನಗಳಲ್ಲಿ 11 ಕೋಟಿ ಸಂಗಮದಲ್ಲಿ ಮಿಂದೆದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. ಪ್ರಯಾಗ್ ರಾಜ್‌ಗೆ ಭೇಟಿ ನಿಡಿದ ಅವರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಜನರು ನಂಬಿಕೆಯಿಂದ ಇಲ್ಲಿಗೆ ಬರುತ್ತಾರೆ. ನಾನು 11 ಬಾರಿ ಪವಿತ್ರ ಸ್ನಾನ ಮಾಡಿದ್ದೇನೆ. ಇಲ್ಲಿ ಒಡೆದು ಆಳುವ, ಕೆಟ್ಟ ರಾಜಕೀಯಕ್ಕೆ ಜಾಗವಿಲ್ಲ. ನಾನು ಹರಿದ್ವಾರದಲ್ಲಿ ಹಬ್ಬದ ದಿನ ಸ್ನಾನ ಮಾಡಿದ್ದು, ಇಂದು ಪ್ರಯಾಗ್ ರಾಜ್‌ನಲ್ಲಿ ಸ್ನಾನ ಮಾಡುವ ಅವಕಾಶ ಸಿಕ್ಕಿತು" ಎಂದು ಹೇಳಿದ್ದಾರೆ.
ಮಹಾ ಕುಂಭ ಮೇಳ 44 ದಿನ ನಡೆಯಲಿದ್ದು ಈ ಬಾರಿ 45 ಕೋಟಿಗೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಭಾರತೀಯರು ಮಾತ್ರವಲ್ಲದೆ ವಿದೇಶಿಯರು, ಗಣ್ಯರು, ಉದ್ಯಮಿಗಳು ಕೂಡ ಈ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ.
ಇಸ್ಕಾನ್ ಜೊತೆ ಕೈಜೋಡಿಸಿರುವ ಅದಾನಿ ಫೌಂಡೇಶನ್ ಪ್ರತಿದಿನ 1 ಲಕ್ಷ ಮಂದಿಗೆ ಉಚಿತ ಅನ್ನಪ್ರಸಾದ ವಿತರಣೆ ಮಾಡುತ್ತಿದೆ. ಹಲವು ಪ್ರಮುಖ ಉದ್ಯಮಿಗಳು, ನಾಯಕರು ಮಹಾಕುಂಭ ಮೇಳದಲ್ಲಿ ದಾನ ಧರ್ಮ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡುತ್ತಿದ್ದಾರೆ.












Click it and Unblock the Notifications