ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿದ ಯೋಗಿ ಆದಿತ್ಯನಾಥ್

ಯೋಗಿ ಅಧಿಕಾರಕ್ಕೆ ಬರುತ್ತಲೇ, ರೋಡ್ ರೋಮಿಯೋಗಳ, ಅನಧಿಕೃತ ಕಸಾಯಿಖಾನೆಗಳ ವಿರುದ್ಧ ರಣಕಹಳೆ ಊದಿದ್ದಾರೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಮತ್ತೆ ಸಹಜ ಸ್ಥಿತಿಗೆ ತರುವ ಇರಾದೆ ತಮ್ಮದು ಎಂದು ಅವರು ಈ ಹಿಂದೆಯೇ ಪದೇ ಪದೇ ಹೇಳಿದ್ದಾರೆ.

|
Google Oneindia Kannada News

ಲಕ್ನೋ, ಮಾರ್ಚ್ 23: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಲಕ್ನೋದ ಹಜರತ್ ಗಂಜ್ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಅಧಿಕಾರ ಚುಕ್ಕಾಣಿ ಹಿಡಿಯುತ್ತಲೇ ಅನೇಕ ಕಾನೂನು ಸುವ್ಯವಸ್ಥೆ ಜಾರಿಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡಿರುವ ಸಿಎಂ ಯೋಗಿ, ಇತ್ತೀಚೆಗೆ ತಮ್ಮ ಸಂಪುಟದಲ್ಲಿರುವ 47 ಸಚಿವರಿಗೆ ಖಾತೆಗಳನ್ನು ಹಂಚಿದ್ದರೂ, ಗೃಹ ಇಲಾಖೆಯನ್ನು ತಮ್ಮೊಂದಿಗೇ ಇರಿಸಿಕೊಂಡಿದ್ದಾರೆ.[ನೈತಿಕ ಪೊಲೀಸ್ ಗಿರಿ ಅಲ್ಲ, ಬಗ್ಗುಬಡಿಯುವ ಕಾರ್ಯ: ಉ.ಪ್ರ. ಡಿಐಜಿ]

Yogi Adityanath pays surprise visit to Hazratganj police station

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ, ''ನಾನು ಇತ್ತೀಚೆಗೆ ಜಾರಿಗೊಳಿಸಿರುವ ಹೊಸ ಕಾನೂನು ಕ್ರಮಗಳನ್ನು ಪೊಲೀಸರು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದ್ದಾರೆಂಬುದನ್ನು ಖುದ್ದಾಗಿ ನೋಡಲು ಇಲ್ಲಿಗೆ ಆಗಮಿಸಿದ್ದೆ. ಕಾನೂನು ಸುವ್ಯವಸ್ಥೆಯೇ ನಮ್ಮ ಮೊದಲ ಆದ್ಯತೆ. ಪ್ರಜೆಗಳ ಸೌಖ್ಯಕ್ಕಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಹೆದರುವುದಿಲ್ಲ'' ಎಂದು ತಿಳಿಸಿದರು.[ಪೊರಕೆ ಹಿಡಿದು ಕಚೇರಿ ಸ್ವಚ್ಛಗೊಳಿಸಿದ ಉ.ಪ್ರದೇಶ ಸಚಿವ]

ಯೋಗಿ ಅಧಿಕಾರಕ್ಕೆ ಬರುತ್ತಲೇ, ರೋಡ್ ರೋಮಿಯೋಗಳ, ಅನಧಿಕೃತ ಕಸಾಯಿಖಾನೆಗಳ ವಿರುದ್ಧ ರಣಕಹಳೆ ಊದಿದ್ದಾರೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಮತ್ತೆ ಸಹಜ ಸ್ಥಿತಿಗೆ ತರುವ ಇರಾದೆ ತಮ್ಮದು ಎಂದು ಅವರು ಈ ಹಿಂದೆಯೇ ಪದೇ ಪದೇ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ಹಠಾತ್ ಭೇಟಿ ವೇಳೆ, ಆ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಮಾತನಾಡಿದ ಅವರು, ಕ್ರೈಂ ಬ್ರಾಂಚ್ ಹಾಗೂ ಸೈಬಲ್ ಸೆಲ್ ಗಳ ಬಗ್ಗೆಯೂ ವಿಚಾರಿಸಿದರು.

English summary
UP chief minister Yogi Adityanath on Thursday paid a surprise visit to the Hazratganj Police Station here to check general preparedness and said the rule of law will be established in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X