ಉತ್ತರ ಪ್ರದೇಶ ಶಾಲೆಗಳಲ್ಲಿ ಯೋಗ, ಸ್ವಯಂ ರಕ್ಷಣಾ ತರಗತಿ ಕಡ್ಡಾಯ
ಇದೇ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಈ ನಿರ್ಧಾರ ಕೈಗೊಂಡಿದ್ದರು. ಅದರ ಆದೇಶ ಈಗ ಜಾರಿಗೊಂಡಿದೆ.
ಲಕ್ನೋ, ಏಪ್ರಿಲ್ 7: ಅಸ್ತಿತ್ವಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಹಲವಾರು ಬದಲಾವಣೆ, ಮಾರ್ಪಾಟುಗಳನ್ನು ಮಾಡುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರ, ಇದೀಗ ಉತ್ತರ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಯೋಗಾಭ್ಯಾಸ ಸ್ವಯಂ ರಕ್ಷಣಾ ತರಗತಿಗಳನ್ನು ಕಡ್ಡಾಯಗೊಳಿಸುವಂತೆ ಆದೇಶಿಸಿದೆ.
ಈ ಸ್ವಯಂ ರಕ್ಷಣಾ ತರಗತಿಗಳಿಗೆ 'ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ ಕಾರ್ಯಕ್ರಮ' ಎಂದು ಹೆಸರಿಡಲಾಗಿದೆ.

ಇದೇ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಈ ನಿರ್ಧಾರ ಕೈಗೊಂಡಿದ್ದರು. ಅದರ ಆದೇಶ ಈಗ ಜಾರಿಗೊಂಡಿದೆ.
ಯೋಗಾಭ್ಯಾಸ ಹಾಗೂ ಸ್ವಯಂ ರಕ್ಷಣೆಯ ತರಗತಿಗಳು ದೈಹಿಕ ಶಿಕ್ಷಣದ ಒಂದು ಭಾಗವಾಗಿರಲಿವೆ. ಯೋಗವು ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿದ್ದರೆ, ಸ್ವಯಂ ರಕ್ಷಣೆ ತರಗತಿಗಳು ಬಾಲಕಿಯರಿಗೆ ಸೀಮಿತವಾಗಿರಲಿವೆ.

Click it and Unblock the Notifications