ಬಿಜೆಪಿ ನಾಯಕರಿಗೆ ಚಳಿ ಬಿಡಿಸಿದ್ದ ಮಹಿಳಾ ಪೊಲೀಸ್ ಎತ್ತಂಗಡಿ

ಲಕ್ನೊ, ಜುಲೈ 2: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಬಿಜೆಪಿ ನಾಯಕರೊಬ್ಬರಿಗೆ ಮಹಿಳಾ ಅಧಿಕಾರಿಯೊಬ್ಬರು ದಂಡ ವಿಧಿಸಿದ್ದರು. ಇದೀಗ ಅದೇ ಮಹಿಳಾ ಅಧಿಕಾರಿಗೆ ಯೋಗಿ ಆದಿತ್ಯನಾಥ್ ಸರಕಾರ ಎತ್ತಂಗಡಿ ಶಿಕ್ಷೆ ನೀಡಿದೆ.

ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಸ್ಥಳೀಯ ಬಿಜೆಪಿ ಮುಖಂಡ ಮತ್ತು ಇತರ ಕಾರ್ಯಕರ್ತರನ್ನು ಜೈಲಿಗಟ್ಟಿದ್ದರು. ಬಿಜೆಪಿ ನಾಯಕರ ಜತೆ ವಾಗ್ವಾದ ನಡೆಸುವ ಶ್ರೇಷ್ಠಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Yogi Adityanath government transfers woman cop who stood up to unruly BJP workers

ಈ ಸಂಬಂಧ ಬಿಜೆಪಿಯ 11 ಜನ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಆದಿತ್ಯನಾಥ್ ಗೆ ದೂರು ನೀಡಿದ್ದರು. ಇದೀಗ ಅವರ ದೂರಿನ ಫಲವೆಂಬಂತೆ ಘಟನೆ ನಡೆದು ಒಂದು ವಾರದೊಳಗೆ ಮಹಿಳಾ ಅಧಿಕಾರಿ ಎತ್ತಂಗಡಿಯಾಗಿದ್ದಾರೆ.

"ಶ್ರೇಷ್ಠಾ ಮುಖ್ಯಮಂತ್ರಿ ಆದಿತ್ಯನಾಥ ಮತ್ತು ಇತರ ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಅವರನ್ನು ವರ್ಗ ಮಾಡುವಂತೆ ಕೇಳಿಕೊಂಡಿದ್ದೆವು," ಎಂದು ಬಿಜೆಪಿ ನಾಯಕ ಮುಖೇಶ್ ಭಾರದ್ವಾಜ್ ಹೆಮ್ಮೆಯಿಂದ ವರ್ಗಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+