ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ

Posted By:
Subscribe to Oneindia Kannada

ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಬಲ ಹಿಂದುತ್ವ ಪ್ರತಿಪಾದಕರು. ಹಿಂದುತ್ವದ ವಿಚಾರದಲ್ಲಿ ಅವರು ಅನೇಕ ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅವರು ನೀಡಿದ್ದ ಕೆಲವಾರು ಹೇಳಿಕೆಗಳು ವಿವಾದವಾಗಿ ಅವರು ಸಾಕಷ್ಟು ಪ್ರತಿಧ್ವನಿಸಿದ್ದವು.[ಯೋಗಿ ಆದಿತ್ಯ ನಾಥ್ ಉ.ಪ್ರ ಸಿಎಂ; ಮೌರ್ಯ, ಶರ್ಮಾ ಡಿಸಿಎಂ]

ಅಂಥ ಕೆಲವು ವಿವಾದಗಳಲ್ಲಿ ಟಾಪ್ 5 ವಿವಾದಾತ್ಮಕ ಹೇಳಿಕೆಗಳನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.[ಉತ್ತರ ಪ್ರದೇಶ ನೂತನ ಸಿಎಂ ಬಗ್ಗೆ ತಿಳಿಯಬೇಕಾದ 5 ವಿಚಾರ]

ಯೋಗಿಯವರ ರಾಜಕೀಯ ವಿಶ್ಲೇಷಣೆ

ಯೋಗಿಯವರ ರಾಜಕೀಯ ವಿಶ್ಲೇಷಣೆ

ಕಳೆದ ಎರಡೂವರೆ ವರ್ಷಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ 450 ಮತೀಯ ಗಲಭೆಗಳಾಗಿವೆ. ಈ ಗಲಭೆಗಳು, ಸಮಾಜವಾದಿ ಆಡಳಿತದಲ್ಲಿ ನಡೆದದ್ದು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಆದಂತೆ ಪೂರ್ವ ಉತ್ತರ ಪ್ರದೇಶದಲ್ಲಿ ಯಾಕೆ ಗಲಭೆಗಳಾಗುತ್ತಿಲ್ಲ ನೀವೇ ಯೋಚಿಸಿ. ಎಲ್ಲಿ ಅಲ್ಪಸಂಖ್ಯಾತರು ಶೇ. 10ರಿಂದ 20ರೊಳಗಿದ್ದಾರೋ ಅಲ್ಲಿ ಅಲ್ಪಸ್ವಲ್ಪ ಗಲಭೆಗಳಾಗಿವೆ. ಎಲ್ಲಿ ಅವರು, ಶೇ. 20ರಿಂದ 35ರಷ್ಟಿದ್ದಾರೋ ಅಲ್ಲಿ ಹೆಚ್ಚು ಗಲಭೆಗಳಾಗಿವೆ. ಶೇ. 35ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರು ಎಲ್ಲಿದ್ದಾರೋ ಅಲ್ಲಿ ಅಲ್ಪ ಸಂಖ್ಯಾತ ವಿರೋಧಿ ಚಟುವಟಿಕೆಗಳಿಗೆ ಸ್ಥಳವೇ ಇರುವುದಿಲ್ಲ.

ರಾಜ್ಯದ ಬಗ್ಗೆ ಕಾಳಜಿ ಪ್ರದರ್ಶನ

ರಾಜ್ಯದ ಬಗ್ಗೆ ಕಾಳಜಿ ಪ್ರದರ್ಶನ

ಪಶ್ಚಿಮ ಉತ್ತರ ಪ್ರದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಉತ್ತರ ಪ್ರದೇಶದ ಭವಿಷ್ಯದ ಮೇಲೆ ಮಾರಕವಾಗಲಿದೆ. ಬಿಜೆಪಿಯು ಪಶ್ಚಿಮ ಉತ್ತರ ಪ್ರದೇಶವನ್ನು ಮತ್ತೊಂದು ಕಾಶ್ಮೀರವನ್ನಾಗಿಸಲು ಬಿಡುವುದಿಲ್ಲ.

ಥೆರೇಸಾ ಸೇವೆಯ ಬಗ್ಗೆ ಅನುಮಾನ

ಥೆರೇಸಾ ಸೇವೆಯ ಬಗ್ಗೆ ಅನುಮಾನ

ಮದರ್ ಥೆರೇಸಾ ಅವರು ಭಾರತವನ್ನು ಕ್ರಿಶ್ಚಿನೀಕರಣವಾಗಿಸುವ ಷಡ್ಯಂತ್ರದ ಒಂದು ಭಾಗವಾಗಿದ್ದರು. ಹಿಂದೂಗಳ ಬಳಿಗೆ ಸೇವೆ ಮಾಡುವ ನೆಪದಲ್ಲಿ ಬಂದು ಅವರನ್ನು ಕ್ರಿಶ್ಚಿಯನ್ನರನ್ನಾಗಿ ಪರಿವರ್ತಿಸಲಾಗುತ್ತಿತ್ತು.

ಶಿವನ ವಿರೋಧಿಗಳಿಗೆ ಎಚ್ಚರಿಕೆ

ಶಿವನ ವಿರೋಧಿಗಳಿಗೆ ಎಚ್ಚರಿಕೆ

ಶಿವನೇ ಯೋಗವನ್ನು ಪರಿಚಯಿಸಿದ್ದು. ಆತ ಅಣು ಅಣುವಿನಲ್ಲಿದ್ದಾನೆ. ಆತನನ್ನು ಒಪ್ಪಿಕೊಳ್ಳುವುದು ಯಾರಿಗೆ ಬೇಡವಾಗಿದೆಯೋ ಅವರು ಹಿಂದುತ್ವವನ್ನು ತೊರೆಯಬಹುದು.

ಕಿಂಗ್ ಖಾನ್ ವಿರುದ್ಧ ವಾಗ್ದಾಳಿ

ಕಿಂಗ್ ಖಾನ್ ವಿರುದ್ಧ ವಾಗ್ದಾಳಿ

ಬಾಲಿವುಡ್ ನಟ ಶಾರೂಖ್ ಖಾನ್ ನನ್ನು ಬೆಂಬಲಿಸಿದ್ದೇ ಈ ದೇಶದ ಬಹುಸಂಖ್ಯಾತರು. ಅವರು ಆತನ ಚಿತ್ರಗಳನ್ನು ನೋಡದೇ ಇದ್ದಿದ್ದರೆ, ಆತ ಇಂದು ಭಾರತದ ಬೀದಿಗಳಲ್ಲಿ ಸಾಮಾನ್ಯ ಮುಸ್ಲಿಮನಂತೆ ಅಡ್ಡಾಡುತ್ತಾ ಕಾಲ ಕಳೆಯುತ್ತಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yogi Adityanand is regarded as fire brand politician of Uttar Pradesh. As he is a pro-hindu, many times he invited controversies by saying such comments against non-hindutwa communities and leftists. Here, top 5 of such comments are mentioned here.
Please Wait while comments are loading...