Get Updates
Get notified of breaking news, exclusive insights, and must-see stories!

ಸೋನಿಯಾ, ರಾಹುಲ್ ವಿರುದ್ದ ಬಾಬಾ ರಾಮದೇವ್ ಭಯಾನಕ ಆರೋಪ

Recommended Video

      ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಯೋಗಗುರು ಬಾಬಾ ರಾಮದೇವ್ ಗಂಭೀರ ಆರೋಪ

      ನೋಯ್ಡಾ (ಉ.ಪ್ರ), ಸೆ 25: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಯೋಗಗುರು ಬಾಬಾ ರಾಮದೇವ್ ಗಂಭೀರ ಆರೋಪವನ್ನು ಮಾಡಿದ್ದಾರೆ,

      ಮಂಗಳವಾರ (ಸೆ 24) ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಾಮದೇವ್, " ಗಾಂಧಿ ಕುಟುಂಬ, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಜೀವಂತವಾಗಿರಲು ಬಯಸಿರಲಿಲ್ಲ" ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ.

      " ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದ ವೇಳೆ, ಅಮಿತ್ ಶಾ ಜೈಲಿನಲ್ಲೇ ಸಾಯಬೇಕೆಂದು ಸೋನಿಯಾ ಮತ್ತು ರಾಹುಲ್ ಬಯಸಿದ್ದರು" ಎನ್ನುವ ಆರೋಪವನ್ನು ರಾಮದೇವ್, ಸೋನಿಯಾ ಕುಟುಂಬದ ಮೇಲೆ ಹೊರಿಸಿದ್ದಾರೆ.

      Yoga Guru Baba Ramdev Said, Sonia And Rahul Gandhi Did Not Want Modi And Shah To Remain Alive

      ಕಾರ್ಯಕ್ರಮದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿರುದ್ದವೂ ರಾಮದೇವ್ ಕಿಡಿಕಾರಿದ್ದಾರೆ. " ಅಮಿತ್ ಶಾ ಅವರನ್ನು ಜೈಲಿಗೆ ಕಳುಹಿಸಿದ್ದ ಚಿದಂಬರಂ, ಮುಂದೆ ತಾವೇ ಕಾನೂನು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಅವರ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ" ಎಂದು ಲೇವಡಿ ಮಾಡಿದ್ದಾರೆ.

      "ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅವರು ಖಾಸಗಿಯಾಗಿಯಾದರೂ ಯೋಗ ಮಾಡುತ್ತಿದ್ದರು. ಆದರೆ ಅವರ ಉತ್ತರಾಧಿಕಾರಿಗಳ್ಯಾರೂ ಯೋಗಕ್ಕೆ ಗೌರವ ನೀಡಲಿಲ್ಲ. ಆದ್ದರಿಂದಲೇ ಅವರಿಗೆ ಅಧಿಕಾರ ದೊರೆತಿಲ್ಲ" ಎಂದು ರಾಮದೇವ್, ಪರೋಕ್ಷವಾಗಿ ಸೋನಿಯಾ ಮತ್ತು ರಾಹುಲ್ ಉಲ್ಲೇಖಿಸಿ ಹೇಳಿದ್ದರು.

      "ಯೋಗ ಮಾಡುವವರಿಗೆ ನೇರವಾಗಿ ದೇವರ ಆಶೀರ್ವಾದ ಸಿಗುತ್ತದೆ. ಯೋಗಕ್ಕೆ ಸಿಗಬೇಕಿದ್ದ ಗೌರವವನ್ನು ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು. ಬಿಜೆಪಿಯ ಎಲ್ಲಾ ಶಾಸಕ, ಸಂಸದರು, ಸಚಿವರು ಯೋಗ ಮಾಡುತ್ತಾರೆ' ಎಂದು ಅವರು ಮೋದಿ ಸರಕಾರವನ್ನು ಹೊಗಳಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+