"ಹಿಮಾಲಯದಲ್ಲಿ ಪತ್ತೆಯಾದ ಯೇತಿ... ವೋಟ್ ಮಾಡೂಕಂತ ಬಂದೈತಿ!"
ಯೇತಿ, ಯೇತಿ, ಯೇತಿ... ಇವತ್ತೆಲ್ಲಾ ಯೇತಿದೇ ಹವಾ! ನೇಪಾಳದ ಮಕಲು ಬೇಸ್ ಕ್ಯಾಂಪ್ ನಲ್ಲಿ ಏಪ್ರಿಲ್ 9 ರಂದು ಯೇತಿ ಹೆಜ್ಜೆ ಗುರುತು ಪತ್ತೆಯಾಗಿತ್ತು ಎಂದು ಭಾರತೀಯ ಸೇನೆ ಟ್ವೀಟ್ ಮಾಡುತ್ತಿದ್ದಂತೆಯೇ ಸೋಶಿಯಲ್ ಮಿಡಿಯಾದಲ್ಲಿ ಯೇತಿ ಟ್ರೆಂಡಿಂಗ್ ಆಗಿದೆ.
ಹಿಮಾಲಯದಲ್ಲಿ ಕಂಡು ಬರುವ ಹಿಮಕರಡಿಯ ಅಥವಾ ಹಿಮ ಮಾನವನನ್ನು ಹೋಲುವ ಯೇತಿ ಎಂಬ ಜೀವಿಯನ್ನು ಇದುವರೆಗೂ ಪೂರ್ಣವಾಗಿ ಕಂಡವರಿಲ್ಲ. ಅದರ ಹೆಜ್ಜೆ ಗುರುತು, ಕೂದಲುಗಳು ಆಗಾಗ ಸಿಕ್ಕಿ ಅದರ ಇರುವಿಕೆಗೆ ಪುರಾವೆ ನೀಡಿವೆ.
ಈಗ ಪತ್ತೆಯಾಗಿರುವ 32x15 ಇಂಚು ಅಳತೆಯ ಹೆಜ್ಜೆ ಗುರುತು ಯೇತಿಯದೇ ಎನ್ನಲಾಗುತ್ತಿದೆ. ಯೇತಿಯ ಸುದ್ದಿ ವಿಜ್ಞಾನಿಗಳಿಗೆ ಅದೆಷ್ಟು ಖುಷಿ ಕೊಟ್ಟಿತೋ ಗೊತ್ತಿಲ್ಲ, ಆದರೆ ಟ್ರೋಲ್ ಹೈಕ್ಳಿಗಂತೂ ಮೃಷ್ಟಾನ್ನ ಭೋಜನ ಒದಗಿಸಿದೆ.
|
ಮತ ಹಾಕೋಕೆ ಬಂದ ಯೇತಿ
ಮೋದೀಜಿ ಅವರ ಪಕ್ಷಕ್ಕೆ ಮತಹಾಕಲು ಯೇಟಿ ಹಿಮಾಲಯದಿಂದ ಇಳಿದು ಬಂದಿದೆ. ಆದರೆ ಪಾಪ, ವೋಟರ್ ಪಟ್ಟಿಯಲ್ಲಿ ಅದರ ಹೆಸರಿಲ್ಲ ಅಂತ ಬೇರ ಮಾಡ್ಕೊಂಡು ಕೆನಡಾ ನಾಗರಿಕತ್ವ ಪಡೆಯಿತಂತೆ- ಚಾಚಾ ಚೌಧರಿ
|
ಯೇತಿ ಬಚಾವೋ, ಯೇತಿ ಪಢಾವೋ..!
ಚೀನಾ ಈಗಾಗಲೇ ಯೇತಿಯನ್ನು ತನ್ನ ವಶಕ್ಕೆ ಪಡೆದು ಅದನ್ನು ತನ್ನ ಸರ್ಕಾರದ 'ಯೇತಿ ಬಚಾವೋ, ಯೇತಿ ಪಢಾವೋ' ಅಡಿಯಲ್ಲಿ ಶಿಕ್ಷಣ ಶಿಬಿರಕ್ಕೆ ಸೇರಿಸಿದೆ- ಮಿಹಿರ್ ಶಾ
|
ಎಷ್ಟೊಂದು ಅಣಕ!
ನಿನ್ನೆ ಭಾರತೀಯ ಸೇನೆ ಯೇತಿಯ ಹೆಜ್ಜೆ ಗುರುತಿನ ಬಗ್ಗೆ ಟ್ವೀಟ್ ಮಾಡಿದೆ. ಇದರಿಂದಾಗಿ ಹಲವರ ಮುಖದಲ್ಲಿ ಅಚ್ಚರಿ ಇದ್ದರೆ, ಕೆಲವರ ಮುಖದಲ್ಲಿ ವ್ಯಂಗ್ಯ, ಅಣಕ, ಅಪಹಾಸ್ಯವಿದೆ. ಈ ಮಾಹಿತಿಯನ್ನೇ ಅದು ಮರೆಸುತ್ತಿದೆ- ಶಿವ್ ಅರೋರಾ
|
ನಂಬಿಕೆ ಇರಲಿ...
ಇಂದು ಅವರು ಯೇತಿಯನ್ನು ಪತ್ತೆ ಮಾಡಿದ್ದಾರೆ, ನಾಳೆ ಅಚ್ಚೇ ದಿನವನ್ನು ಪತ್ತೆ ಮಾಡುತ್ತಾರೆ. ನಾಡಿದ್ದು ಅವರು ನೇತಾಜಿಯನ್ನು ಪತ್ತೆ ಮಾಡುತ್ತಾರೆ. ನಂಬಿಕೆ ಇಟ್ಟುಕೊಳ್ಳಿ- ಅಂಕುರ್ ಭಾರದ್ವಾಜ್











Click it and Unblock the Notifications