Year Ender 2025: ದೇಶದ ಶಿಕ್ಷಣ ಕ್ಷೇತ್ರ ಕಂಡ ಸಿಹಿ- ಕಹಿ ಕ್ಷಣಗಳು
Indian Education 2025: ಪ್ರಸಕ್ತ 2025ನೇ ವರ್ಷ ಪೂರ್ಣಗೊಳ್ಳಲು 15 ದಿನ ಮಾತ್ರ ಇದೇ. ಈ ಹೊಸ ವರ್ಷದಲ್ಲಿ ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಒಂದಷ್ಟು ಬೆಳವಣಿಗೆ ಆಗಿವೆ. ಈ ಬದಲಾವಣೆಗೆ ಸರ್ಕಾರಗಳು ಕಾರಣವಾಗಿವೆ. ಈ ವರ್ಷ ಭಾರತಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಕರ್ಷಕ ಪ್ರಗತಿ ಮತ್ತು ಗಮನಾರ್ಹ ಸವಾಲುಗಳನ್ನು ತಂದೊಡ್ಡಿದೆ. 2026ನೇ ಹೊಸ ವರ್ಷದ ಹಲವು ನಿರೀಕ್ಷೆಗಳ ಜೊತೆಗೆ ಈ ಕಳೆದು ಹೋಗುತ್ತಿರುವ ವರ್ಷದಲ್ಲಿ ಶಿಕ್ಷಣ ಕ್ಷೇತ್ರವು ಏನೆಲ್ಲ ಒಳ್ಳೆಯ, ಕೆಟ್ಟ ಕ್ಷಣಗಳನ್ನು ಕಂಡಿದೆ ಎಂಬ ಮಾಹಿತಿ ಇಲ್ಲಿದೆ.
2025ರಲ್ಲಿ ಶಿಕ್ಷಣದಲ್ಲಿ ಆದ ಉತ್ತಮ- ಕೆಟ್ಟ ಕ್ಷಣಗಳು
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಷ್ಟು ಸಿಹಿ ಕಹಿ ಕ್ಷಣಗಳನ್ನು ನೋಡಿದೆ. ಸಾಮರ್ಥ್ಯ ಆಧಾರಿತ ಕಲಿಕೆ ಮತ್ತು ಡಿಜಿಟಲ್ ಲ್ಯಾಬ್ ಸಿಮ್ಯುಲೇಶನ್ಗಳ ಪರಿಚಯ ಆಗಿರುವುದರಿಂದ ಹಿಡಿದು, ನಿರಂತರ ರಜೆಗಳು, ಆತಳಿತಾತ್ಮಕ ಒಂದಷ್ಟು ಅಡೆತಡೆ, ಕ್ಷೇತ್ರದ ಗಲುವು, ಸೋಲನ್ನು ನೋಡಿದೆ. ಸಕಾರಾತ್ಮಕ ಬೆಳವಣಿಗೆಯು ಹೊಸ ವರ್ಷದಲ್ಲಿ ವಿದ್ಯಾರ್ಥಿಗಳ ಸ್ಪೂರ್ತಿ ಸಿಗಲಿದೆ ಎಂದು 'ಕೆರಿಯರ್ ಇಂಡಿಯಾ' ವರದಿ ಮಾಡಿದೆ.

ಶಿಕ್ಷಣದ ಕ್ಷೇತ್ರದ ಅತ್ಯುತ್ತಮ ಕ್ಷಣಗಳು
* CBSE ಬೋರ್ಡ್ ಪರೀಕ್ಷೆಗಳಲ್ಲಿ ಸಾಮರ್ಥ್ಯ ಆಧಾರಿತ ಮತ್ತು ಕೌಶಲ್ಯ-ಆಧಾರಿತ ಪ್ರಶ್ನೆಗಳನ್ನು ಪರಿಚಯ ಮಾಡಿತು. ಈ ಮೂಲಕ ವಿದ್ಯಾರ್ಥಿಗಳನ್ನು ಹೆಚ್ಚು ಭಾಗವಹಿಸುವಂತೆ ಮಾಡಲಾಯಿತು.
* NCERT ಡಿಜಿಟಲ್ ಲ್ಯಾಬ್ ಸಿಮ್ಯುಲೇಶನ್ಗಳು ಮತ್ತು ಸಂವಾದಾತ್ಮಕ ಇ-ಪುಸ್ತಕಗಳ ಆರಂಭಿಸಿತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಪೂರಕವಾಯಿತು.
* AI ಮತ್ತು ಹೈಬ್ರಿಡ್ ಕಲಿಕಾ ಮಾದರಿಗಳನ್ನು ಅಳವಡಿಸಿಕೊಳ್ಳುವ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಹೆಚ್ಚುವರಿ ಸಂಶೋಧನಾ ಅನುದಾನ ಹಂಚಿಕೆ ಮಾಡಲಾಯಿತು.
* ಐಐಟಿಗಳು ಮತ್ತು ಎನ್ಐಟಿಗಳು ಕೃತಕ ಬುದ್ಧಿಮತ್ತೆ (AI), ಹಸಿರು ಹೈಡ್ರೋಜನ್ ಮತ್ತು ರೊಬೊಟಿಕ್ಸ್ನಲ್ಲಿ ಮುಂದುವರಿದ ಅಂತರಶಿಸ್ತೀಯ ಕಾರ್ಯಕ್ರಮ ಜಾರಿಯಾದವು.
* ಯೋಜನೆ ಪ್ರಯೋಜನ ಅನ್ವಯಿಸುವುದು ಮತ್ತದರ ಟ್ರ್ಯಾಕಿಂಗ್ ಪ್ರಕ್ರಿಯೆಗಾಗಿ ಆನ್ಲೈನ್ ವಿದ್ಯಾರ್ಥಿವೇತನ ಪೋರ್ಟಲ್ಗಳ ಸುಧಾರಣೆಗೊಳಿಸಲಾಯಿತು.
ಶಿಕ್ಷಣ ವಲಯ ಕಂಡ ಕೆಟ್ಟ ಕ್ಷಣಗಳು
* ದೇಶದ ಉತ್ತರ ಭಾಗದಲ್ಲಿನ ತೀವ್ರ ಶೀತ ಅಲೆಗಳಿಂದ ಶಾಲಾ-ಕಾಲೇಜುಗಳು ತಾತ್ಕಾಲಿಕವಾಗಿ ಕೆಲವು ದಿನ ಮುಚ್ಚಿದವರು. ಈ ಬೆಳವಣಿಗೆಯು ಶೈಕ್ಷಣಿಕ ವೇಳಾಪಟ್ಟಿಗೆ ಅಡಚಣೆ ಉಂಟು ಮಾಡಿತು.
* ಆಯಾ ರಾಜ್ಯಗಳಲ್ಲಿನ ಸ್ಥಳೀಯ ಹವಾಮಾನ ಮಳೆ, ಶಾಖದ ಅಲೆ, ಶೀತ ಅಲೆಗಳ ಸಮಸ್ಯೆಗಳಿಂದಾಗಿ ಕೆಲವು ಶೈಕ್ಷಣಿಕ ಮಂಡಳಿಗಳ ಪರೀಕ್ಷೆ ಮುಂದೂಡಿಕೆ ಆಗಿತ್ತು.
* ಒಂದಷ್ಟು ಪಠ್ಯಕ್ರಮ ನವೀಕರಣಗಳು ಮತ್ತು ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ ಆಯಿತು. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಚಟುವಟಿಕೆಗಳ ವಿಳಂಬಕ್ಕೆ ಕಾರಣವಾಯಿತು.
* ಕೆಲವು ರಾಜ್ಯ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು ಕಂಡು ಬಂತು.
2025ರ ಅತ್ಯುತ್ತಮ ಕ್ಷಣಗಳು
ಸಾಮರ್ಥ್ಯ ಆಧಾರಿತ ಶಿಕ್ಷಣ
SSLC ಮತ್ತು PUC ಪರೀಕ್ಷೆಗಳಲ್ಲಿ ಕೌಶಲ್ಯ-ಆಧಾರಿತ, ವಿಶ್ಲೇಷಣಾತ್ಮಕ ಮತ್ತು ಸಾಮರ್ಥ್ಯ-ಆಧಾರಿತ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸಲು CBSE ಯ ಉಪಕ್ರಮವು ಕಲಿಕೆ ಹೆಚ್ಚು ಪ್ರಾಯೋಗಿಕ ಮತ್ತು ವಿದ್ಯಾರ್ಥಿ-ಕೇಂದ್ರಿತವನ್ನಾಗಿ ಮಾಡಿತು. ಈ ವಿಧಾನವು ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನೆಗಳ ನೈಜತೆಗೆ ಸಹಕಾರಿ ಆಯಿತು.
ಡಿಜಿಟಲ್ ಕಲಿಕೆಯಲ್ಲಿ ಬೆಳವಣಿಗೆ
NCERT ಮಧ್ಯಮ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಲ್ಯಾಬ್ ಸಿಮ್ಯುಲೇಶನ್ಗಳು ಮತ್ತು ಸಂವಾದಾತ್ಮಕ ಇ-ಪುಸ್ತಕಗಳನ್ನು ಪರಿಚಯಿಸಿತು. ಇದರಿಂದ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ಸಿಕ್ಕಂತಾಯಿತು.
ಸಂಶೋಧನೆ ಮತ್ತು ಅನುದಾನ
ಉನ್ನತ ಶಿಕ್ಷಣ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಗೆ ಬೆಂಬಲ ನೀಡುವ AI ಕಲಿಕೆ, ವರ್ಚುವಲ್ ಲ್ಯಾಬ್ಗಳು ಮತ್ತು ನವೀನ ಸಂಶೋಧನಾ ಯೋಜನೆಗಳುಳ್ಳ ವಿಶ್ವವಿದ್ಯಾಲಯಗಳಿಗೆ UGC ಹೆಚ್ಚುವರಿ ಅನುದಾನ ಘೋಷಿಸಿತು.
ವಿದ್ಯಾರ್ಥಿ ವೇತನ ಸರಳೀಕರಣ
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಅಪ್ಡೇಟ್ ಮಾಡಿದ್ದರಿಂದ ಅರ್ಜಿ ಹಾಕಿ ವಿದ್ಯಾರ್ಥಿ ವೇತನ ಪಡೆಯುವುದು ಮತ್ತಷ್ಟು ಸರಳವಾಯಿತು. ನೈಜ-ಸಮಯದ ಟ್ರ್ಯಾಕಿಂಗ್ ಮಾಹಿತಿ ಸಿಗುವಂತಾಯಿತು. ಅರ್ಹತೆ ಮತ್ತು ಅಗತ್ಯ ದಾಖಲೆಗಳ ಸಹಿತ ಟ್ರ್ಯಾಕಿಂಗ್ ಸಹಿತ ಅರ್ಹರಿಗೆ ಪ್ರಯೋಜನ ದೊರೆಯುವಂತಾಯಿತು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
SSLC ಪರೀಕ್ಷೆಗೆ ಹಾಜರಾತಿ ಶಾಕ್: ನಿಯಮ ಉಲ್ಲಂಘಿಸಿದ 35,000 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
Udupi: ಉಡುಪಿ ಜಿಲ್ಲೆಗೆ 'ಸಂಪೂರ್ಣ ಸಾಕ್ಷರತಾ' ಸ್ಥಾನಮಾನ, ಶೀಘ್ರವೇ ಘೋಷಣೆ -
NHAI ನಿಂದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ: ತಿಂಗಳಿಗೆ ₹20,000 ಸ್ಟೈಪೆಂಡ್, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ









Click it and Unblock the Notifications