ಜೇಟ್ಲಿ ಗುಜರಾತ್ ಜನತೆ ಮೇಲಿನ ಹೊರೆ : ಯಶವಂತ್ ಸಿನ್ಹಾ

ಅಹಮದಾಬಾದ್, ನವೆಂಬರ್ 14: ಮಂಗಳವಾರ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ದೋಷಪೂರಿತವಾಗಿರುವ ಜಿಎಸ್ಟಿಯನ್ನು ಜಾರಿಗೊಳಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜನರು ತಾವು ಎದುರಿಸಿದ ಕಷ್ಟಗಳಿಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ರಾಜೀನಾಮೆಗೂ ಆಗ್ರಹಿಸಬಹುದು ಎಂದು ಸಿನ್ಹಾ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

Yashwant Sinha calls Jaitley a 'burden on people of Gujarat'

ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅರುಣ್ ಜೇಟ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿನ್ಹಾ, ಜಿಎಸ್ಟಿ ಮತ್ತು ಅಪನಗದೀಕರಣದ ರೂಪದಲ್ಲಿ ಭಾರತ ಎರಡು ಅಘಾತಕ್ಕೆ ಗುರಿಯಾಯಿತು ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ ನಲ್ಲಿ 'ಲೋಕಶಾಹಿ ಬಚಾವೋ ಆಂದೋಲನ್' ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅರುಣ್ ಜೇಟ್ಲಿ 'ಹೆಡ್ ಬಿದ್ದರೆ ನಾನು ಗೆದ್ದಂತೆ ಟೇಲ್ ಬಿದ್ದರೆ ನೀವು ಸೋತಂತೆ' ಎಂಬ ನಿಯಮವನ್ನು ನಂಬಿಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿನ್ಹಾ ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+