Delhi Rain: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ, ಅರವಿಂದ್ ಕೇಜ್ರಿವಾಲ್ ಮನೆ ಬಳಿ ಪ್ರವಾಹ!

ದೆಹಲಿ ಜುಲೈ 13: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಬಳಿ ಪ್ರವಾಹ ಉಂಟಾಗಿದೆ. ಕಳೆದ ಕೆಲ ದಿನಗಳಿಂದ ದೇಶದ ಹಲವೆಡೆ ಮುಂಗಾರು ಮಳೆ ಅಧಿಕ ಹಾನಿಯನ್ನುಂಟುಮಾಡುತ್ತಿದೆ.

ಬೆಟ್ಟ-ಗುಡ್ಡಗಳಿಂದ ಬಯಲು ಸೀಮೆಯವರೆಗೂ ಪ್ರವಾಹ ಉಂಟಾಗಿದೆ. ಜಲಾವೃತ ಮತ್ತು ಪ್ರವಾಹದ ಸಮಸ್ಯೆಯಿಂದ ಜನರು ತೊಂದರೆಗೀಡಾಗಿದ್ದಾರೆ. ಪರ್ವತಗಳ ಮೇಲೆ ಭೂಕುಸಿತದಿಂದಾಗಿ ಸೇತುವೆಗಳು, ರಸ್ತೆಗಳು, ಮನೆಗಳು ಎಲ್ಲಾ ಕುಸಿದಿವೆ. ಇದರೊಂದಿಗೆ ದೆಹಲಿಯಲ್ಲೂ ಮಳೆಯ ಅಬ್ಬರ ಮುಂದುವರೆದಿದೆ.

Yamuna river level rises further in Delhi, floods near Arvind Kejriwals house

ಯಮುನಾ ನದಿ ನೀರಿನ ಮಟ್ಟ

ಯಮುನಾ ನದಿಯ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ದೆಹಲಿಯ ಜನರ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಯಮುನಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಸುಮಾರು 2 ಮೀಟರ್ ಎತ್ತರಕ್ಕೆ ಹರಿಯುತ್ತಿದೆ. ಬುಧವಾರ ರಾತ್ರಿ 11 ಗಂಟೆಯವರೆಗೆ ಯಮುನಾ ನದಿಯ ನೀರಿನ ಮಟ್ಟ 208.8 ಮೀಟರ್ ದಾಖಲಾಗಿದೆ.

1978ರ ನಂತರ ಇದೇ ಮೊದಲ ಬಾರಿಗೆ ಯಮುನಾ ನದಿಯ ಮಟ್ಟ 207.49 ದಾಟಿದೆ. ಹೀಗಾಗಿ ಯಮುನಾ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ರಕ್ಷಿಸಲಾಗುತ್ತಿದೆ. ಹರಿಯಾಣದ ಹಥಿನಿ ಕುಂಡ್ ಬ್ಯಾರೇಜ್‌ನಿಂದ ನಿರಂತರ ನೀರು ಬಿಡುಗಡೆಯಾಗುತ್ತಿದ್ದು ದೆಹಲಿಯಲ್ಲಿ ಪ್ರವಾಹದ ಅಪಾಯ ಹೆಚ್ಚುತ್ತಿದೆ. ಹಳೆ ರೈಲ್ವೆ ಸೇತುವೆಯ ಬಳಿ ರಾತ್ರಿ 10 ಗಂಟೆಯವರೆಗೆ 208.05 ಮೀಟರ್‌ನಷ್ಟು ನೀರಿನ ಮಟ್ಟ ದಾಖಲಾಗಿದೆ.

Yamuna river level rises further in Delhi, floods near Arvind Kejriwals house

ಯಮುನಾ ನದಿ ಸಮೀಪ ವಾಸಿಸುವ ಜನರ ರಕ್ಷಣೆ

ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗದಿದ್ದರೂ, ಹರಿಯಾಣದಿಂದ ಯಮುನಾ ನದಿಯ ಪ್ರವಾಹವು ನದಿಯ ಸಮೀಪ ವಾಸಿಸುವ ಜನರಿಗೆ ಅಪಾರ ತೊಂದರೆ ತಂದೊಡ್ಡಿದೆ. ನೀರು ನುಗ್ಗಿದ ನಂತರ ಅನೇಕ ಜನರು ತಮ್ಮ ಮನೆಗಳನ್ನು ಖಾಲಿ ಮಾಡುವಂತ ಸ್ಥಿತಿ ಎದುರಾಗಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಅರವಿಂದ್ ಕೇಜ್ರಿವಾಲ್ ಸರ್ಕಾರ ಮಧ್ಯ ಪ್ರವೇಶಿಸಿ ಬ್ಯಾರೇಜ್‌ನಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಿde. ಆದರೆ ಕೇಂದ್ರವು ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಉತ್ತರಿಸಿದೆ. ಹರಿಯಾಣ ಬ್ಯಾರೇಜ್‌ನಿಂದ ನೀರಿನ ಹರಿವು ಮಧ್ಯಾಹ್ನ 2 ಗಂಟೆಯ ನಂತರ ಇಳಿಯುವ ನಿರೀಕ್ಷೆಯಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ತಗ್ಗು ಪ್ರದೇಶದ ಶಾಲೆಗಳು ಬಂದ್

ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಸಿವಿಲ್ ಲೈನ್ಸ್ ವಲಯದ ತಗ್ಗು ಪ್ರದೇಶಗಳಲ್ಲಿನ 10 ಶಾಲೆಗಳು, ಶಹದಾರ ದಕ್ಷಿಣ ವಲಯದ 6 ಶಾಲೆಗಳು ಮತ್ತು ಶಹದಾರ ಉತ್ತರ ವಲಯದ 1 ಶಾಲೆಯನ್ನು ಜುಲೈ 13 ರಂದು ಮುಚ್ಚಲು ಎಂಸಿಡಿಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆನ್‌ಲೈನ್ ತರಗತಿಗಳು ನಡೆಯಲಿದೆ.

LG ವಿಪತ್ತು ನಿರ್ವಹಣೆ ಸಭೆ

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ರಾಜಧಾನಿಯಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯನ್ನು ಕರೆದಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಎಲ್ ಜಿ ಸೆಕ್ರೆಟರಿಯೇಟ್ ನಲ್ಲಿ ಸಭೆ ನಡೆಯಲಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಉಪಸ್ಥಿತರಿರುವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+