ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Wrestlers Protest: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಾರಾ ಕುಸ್ತಿಪಟುಗಳು?

|
Google Oneindia Kannada News

ನವದೆಹಲಿ, ಜೂನ್. 08: ಮಾಜಿ ಕುಸ್ತಿ ಫೆಡರೇಶನ್‌ ಆಫ್‌ ಇಂಡಿಯಾ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧದ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ, ಕುಸ್ತಿಪಟುಗಳು ಗುರುವಾರ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ನಿಗದಿಪಡಿಸಿದ ಜುಲೈ 15 ರ ಗಡುವಿನ ಮುಂಚೆಯೇ ಎಲ್ಲಾ ರಾಷ್ಟ್ರೀಯ ಒಕ್ಕೂಟಗಳು ಏಷ್ಯನ್ ಗೇಮ್ಸ್‌ಗೆ ತಂಡವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿವೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ. ಏಷ್ಯನ್ ಗೇಮ್ಸ್‌ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ.

Wrestlers Want To Take Part in The Asian Games Selection Trials

ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರಗಳನ್ನು ನಡೆಸುತ್ತಿರುವ ಭೂಪೇಂದರ್ ಸಿಂಗ್ ಬಾಜ್ವಾ ಮತ್ತು ಸುಮಾ ಶಿರೂರ್ ಅವರ ಮೂವರು ಸದಸ್ಯರ ತಾತ್ಕಾಲಿಕ ಸಮಿತಿ ಮತ್ತು ಇಬ್ಬರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಏಪ್ರಿಲ್ 27 ರಂದು ಪ್ರಕಟಿಸಿತ್ತು. ಮೇ 4 ರಿಂದ ಜೂನ್ ಕೊನೆಯ ವಾರದಲ್ಲಿ ಆಯ್ಕೆ ನಡೆಸುವ ಸಾಧ್ಯತೆಯಿದೆ. ಆದರೆ, ಕುಸ್ತಿಪಟುಗಳು ಟ್ರಯಲ್ಸ್‌ಗೆ ಸಿದ್ಧರಾಗಲು ಇನ್ನೂ ಸ್ವಲ್ಪ ಸಮಯ ಬೇಕು ಎಂದಿದ್ದಾರೆ.

ಜೂನ್ 15 ರವರೆಗೆ ಪ್ರತಿಭಟನೆ ಸ್ಥಗಿತಗೊಳಿಸಲು ಕುಸ್ತಿಪಟುಗಳ ಒಪ್ಪಿಗೆ: ಪ್ರಕರಣ ಕೈಬಿಡುತ್ತೇವೆ ಎಂದ ಅನುರಾಗ್ ಠಾಕೂರ್ಜೂನ್ 15 ರವರೆಗೆ ಪ್ರತಿಭಟನೆ ಸ್ಥಗಿತಗೊಳಿಸಲು ಕುಸ್ತಿಪಟುಗಳ ಒಪ್ಪಿಗೆ: ಪ್ರಕರಣ ಕೈಬಿಡುತ್ತೇವೆ ಎಂದ ಅನುರಾಗ್ ಠಾಕೂರ್

"ನಾವು ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಬಯಸುತ್ತೇವೆ. ಆದರೆ ಅದಕ್ಕೆ ಸಿದ್ಧರಾಗಲು ನಮಗೆ ಕನಿಷ್ಠ ಒಂದೂವರೆ ತಿಂಗಳ ತರಬೇತಿಯ ಅಗತ್ಯವಿದೆ" ಎಂದು ಸಾಕ್ಷಿ ಮಲಿಕ್ ಅವರ ಪತಿಯೂ ಆಗಿರುವ ಅಂತಾರಾಷ್ಟ್ರೀಯ ಕುಸ್ತಿಪಟು ಸತ್ಯವರ್ತ್ ಕಡಿಯನ್ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

Wrestlers Want To Take Part in The Asian Games Selection Trials

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ನಂತರ ಕೆಲವರು ಸ್ಪರ್ಧಿಸದ ಕಾರಣ ಕುಸ್ತಿಪಟುಗಳಿಗೆ ಸ್ಪರ್ಧೆಯ ಮೋಡ್‌ಗೆ ಹಿಂತಿರುಗುವುದು ಕಠಿಣ ಕೆಲಸವಾಗಿದೆ. ಆದರೆ ಇನ್ನೂ ಕೆಲವರು ಆಗಸ್ಟ್ 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದರು. ಕುಸ್ತಿಪಟುಗಳು ಇತ್ತೀಚೆಗೆ ಹಲವಾರು ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಕೂಡ ಏಪ್ರಿಲ್‌ನಲ್ಲಿ ಪ್ರತಿಭಟನೆಯ ಕಾರಣ ತಮ್ಮ ಅಂತರರಾಷ್ಟ್ರೀಯ ತರಬೇತಿ ಶಿಬಿರಗಳಿಂದ ಹೊರಗುಳಿದಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ ಆರೋಪ ಹೊರಿಸಿರುವ ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಬುಧವಾರ ಅನುರಾಗ್ ಠಾಕೂರ್ ಅವರೊಂದಿಗಿನ ಹಲವು ಸುತ್ತಿನ ಸಭೆಯ ನಂತರ, ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದೆ. ಹೀಗಾಗಿ ಕುಸ್ತಿಪಟುಗಳು ಜೂನ್ 15 ರವರೆಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ.

"ಮಹಿಳೆಯ ನೇತೃತ್ವದ ಡಬ್ಲ್ಯುಎಫ್‌ಐ ಆಂತರಿಕ ದೂರು ಸಮಿತಿಯ ರಚನೆ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸಲಾಗುವುದು" ಎಂದು ಅನುರಾಗ್ ಠಾಕೂರ್ ಗುರುವಾರ ಪುನರುಚ್ಚರಿಸಿದ್ದಾರೆ.

"ನಾನು ನಿನ್ನೆಯೂ ಹೇಳಿದ್ದೇನೆ, ನಾವು ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗೆ ಅತ್ಯಂತ ಸಕಾರಾತ್ಮಕ ಸಭೆ ನಡೆಸಿದ್ದೇವೆ. ಅವರ ಧ್ವನಿ ಎತ್ತಿರುವ ಎಲ್ಲಾ ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಜೂನ್ 15 ರೊಳಗೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಮತ್ತು ಜೂನ್ 30 ರೊಳಗೆ ಡಬ್ಲ್ಯುಎಫ್‌ಐ ಚುನಾವಣೆ ನಡೆಯಲಿದೆ ಎಂದು ನಾವು ಹೇಳಿದ್ದೇವೆ. ಕುಸ್ತಿಪಟುಗಳು ಸ್ಪರ್ಧೆಗೆ ಮರಳಬೇಕು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

English summary
Protesting Wrestlers expressed intent to take part in the Asian Games selection trials to be held in month end says Sports Minister Anurag Thakur.know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X