Get Updates
Get notified of breaking news, exclusive insights, and must-see stories!

World's highest railway bridge: ಭಾರತದಲ್ಲಿ ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ: ವಿಶೇಷತೆಗಳೇನು?

World's highest railway bridge: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್‌ 6) ಭಾರತದಲ್ಲಿ ನಿರ್ಮಾಣ ಮಾಡಲಾದ ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಉದ್ಘಾಟನೆ ಮಾಡಿದರು. ಹಾಗಾದ್ರೆ ಇದು ಎಲ್ಲಿದೆ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ವಿಶ್ವದ ಅತೀ ಎತ್ತರದ​ ಚೆನಾಬ್ ರೈಲ್ವೆ ಕಮಾನು ಸೇತುವೆಯವನ್ನು ಇಂದು (ಜೂನ್‌ 6) ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದರು. ಈ ರೈಲು ಸೇತುವೆಯಿಂದ ಜಮ್ಮು ಮತ್ತು ಶ್ರೀನಗರ ನಡುವೆ ಸಂಪರ್ಕ ಸುಧಾರಿಸಿದಂತಾಗಲಿದೆ.

World s highest railway bridge Inaugurated in India Know Specialties

ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯು ಎಲ್ಲಾ ಸಮಯದಲ್ಲೂ ಸಂಪರ್ಕ ಕಲ್ಪಿಸಲಿದೆ. ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಶ್ರೀನಗರಕ್ಕೆ ಸಂಚರಿಸುವ ವಂದೇ ಭಾರತ್ ರೈಲುಗಳು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ. ಅಲ್ಲದೆ, ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲಿದೆ ಅಂತಲೂ ಹೇಳಿದ್ದಾರೆ.

ವಿಶ್ವದ ಅತೀ ಎತ್ತರದ​ ರೈಲ್ವೆ ಸೇತುವೆ ವೀಶೇಷತೆಗಳು

* ಚಿನಾಬ್ ರೈಲ್ ಬ್ರಿಡ್ಜ್‌ ಜಮ್ಮು ಮತ್ತು ಕಾಶ್ಮೀರದ ರೀಸಿ ಜಿಲ್ಲೆಯಲ್ಲಿ, ಚಿನಾಬ್ ನದಿಯ ಮೇಲೆ 359 ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಮತ್ತು ದೆಹಲಿಯ ಕುತುಬ್ ಮಿನಾರ್‌ಗಿಂತ 287 ಮೀಟರ್ ಎತ್ತರವಾಗಿದೆ.

* 1,315 ಮೀಟರ್ ಉದ್ದದ ಈ ಸೇತುವೆಯು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲ ರೈಲ್ವೆ ಲಿಂಕ್ ಯೋಜನೆಯ ಭಾಗ ಆಗಿದ್ದು, 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

* ಈ ಸೇತುವೆ ಭೂಕಂಪ ವಲಯ-5 ರಲ್ಲಿ ಸ್ಥಿತವಾಗಿದ್ದು, ರಿಕ್ಟರ್ ಮಾಪಕದಲ್ಲಿ 8 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

* ಗಂಟೆಗೆ 266 ಕಿಲೋ ಮೀಟರ್ ವೇಗದ ಗಾಳಿಯನ್ನು ಕೂಡ ತಡೆಯಬಲ್ಲ ಸಾಮಾರ್ಥ್ಯವನ್ನು ಒಳಗೊಂಡಿದೆ.

* ಇದರಿಂದ ಕಟ್ರಾ-ಶ್ರೀನಗರಕ್ಕೆ ಪ್ರಯಾಣದ ಸಮಯ ಕೇವಲ 3 ಗಂಟೆಗಿಂತ ಕಡಿಮೆ ಆಗಲಿದೆ.

* ಚಿನಾಬ್ ರೈಲ್ ಬ್ರಿಡ್ಜ್‌ನ ಮೊದಲ ಟ್ರಯಲ್ ರನ್ ಜೂನ್ 2024 ರಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು. ಬಳಿಕ ಜನವರಿ 2025ರಲ್ಲಿ ವಂದೇ ಭಾರತ್ ರೈಲಿನ ಟ್ರಯಲ್ ರನ್ ಸಹ ಯಶಸ್ವಿ ಆಗಿತ್ತು.

* ಈ ರೈಲ್ವೆ ಸೇತುವೆಯು ಅತ್ಯಧುನಿಕ ತಂತ್ರಜ್ಞಾನದಿಂದ ತಯರಾಗಿದೆ.

ಈ ರೈಲ್ವೆ ಸೇತುವೆ ನಿರ್ಮಾಣ ಮಾಡಬೇಕೆಂದು 1970ಕ್ಕೂ ಮುಂಚೆಯೇ ಪ್ರಸ್ತಾಪ ಮಾಡಲಾಗಿತ್ತು. ಇದೀಗ ಇದಕ್ಕೆ ಮುಹೂರ್ತ ಕೂಡಿಬಂದಿದ್ದು, ಪ್ರಧಾನಿ ಮೋದಿ ಅವರು 2025 ಜೂನ್‌ 6ರಂದು ಇದನ್ನು ಉದ್ಘಾನೆ ಮಾಡಿದ್ದಾರೆ. ಈ ಯೋಜನೆಯ ನಿರ್ಮಾಣ ಕಾರ್ಯವು 2002ರಲ್ಲಿ ಪ್ರಾರಂಭವಾಯಿತು. ಆಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವು ಭೂಸ್ವಾಧೀನಕ್ಕೆ ಹಣವನ್ನು ಅನುಮೋದಿಸಿತ್ತು ಎಂದು ತಿಳಿದುಬಂದಿದೆ.

ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ: ಚಿನಾಬ್ ರೈಲ್ ಬ್ರಿಡ್ಜ್‌ನ ಜೊತೆಗೆ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯಾದ ನವೀನ ಪಂಬನ್ ರೈಲ್ ಸೇತುವೆಯನ್ನು ಪ್ರಧಾನಿ ಮೋದಿ ಅವರು ಏಪ್ರಿಲ್ 6, 2025ರಂದು ರಾಮನವಮಿ ವೇಳೆ ಉದ್ಘಾಟನೆ ಮಾಡಿದ್ದರು. 2.08 ಕಿಲೋ ಮೀಟರ್ ಉದ್ದದ ಈ ಸೇತುವೆ 18.3 ಮೀಟರ್‌ನ 99 ಸ್ಪ್ಯಾನ್‌ಗಳು ಮತ್ತು 72.5 ಮೀಟರ್‌ನ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದೆ. ಇದು ಹಳೆಯ ಸೇತುವೆಗಿಂತ 3 ಮೀಟರ್ ಎತ್ತರ ಆಗಿದ್ದು, ದೊಡ್ಡ ಹಡಗುಗಳು ಸುಲಭವಾಗಿ ದಾಟಲು ಅನುಕೂಲ ಆಗುವಂತೆ ವಿನ್ಯಾಸ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+