ಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯ

ವಿಶ್ವವನ್ನು ಬಹುತೇಕ ಸ್ತಬ್ದಗೊಳಿಸಿರುವ ಕೊರೊನಾ ವೈರಸ್ ವಿಚಾರದಲ್ಲಿ ಬಾಲಕನೊಬ್ಬ ನುಡಿದಿರುವ ಭವಿಷ್ಯ, ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ.

Recommended Video

      ಕೊರೋನಾ ವೈರಸ್ ಗೆ ಮುಕ್ತಿಯ ಮಾರ್ಗ ಹೇಳಿದ ಜ್ಯೋತಿಷಿ | Vishnu Sahasranama | Astrology

      ಏಪ್ರಿಲ್ 2019ರಲ್ಲೇ ಇಂತಹ ಮಾರಣಾಂತಿಕ ಕಾಯಿಲೆಯಿಂದ ಜಗತ್ತಿಗೆ ವಿಪತ್ತು ಕಾದಿದೆ ಎಂದಿರುವ ಈ ಬಾಲಕ, ಮುಂದಿನ ಐದು ದಿನ ಅಂದರೆ ಮಾರ್ಚ್ 29 ರಿಂದ ಏಪ್ರಿಲ್ 2ರವರೆಗೆ ಜನತೆ ತುಂಬಾ ಜಾಗರೂಕತೆಯಿಂದ ಇರಬೇಕೆಂದು ಹೇಳಿದ್ದಾನೆ.

      ಕೊರೊನಾ ವೈರಾಣಿನ ಭವಿಷ್ಯ ತುಂಬಾ ದಿನ ಇರುವುದಿಲ್ಲ ಎಂದು ಹಲವು ಜ್ಯೋತಿಷಿಗಳು ಹೇಳಿದ್ದರೂ, ಇದ್ದಷ್ಟು ದಿನ ಅದು ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆ ಎನ್ನುವುದು ಆತಂಕ ತರುವ ವಿಚಾರವಾಗಿದೆ.

      ಹಲವು ರಾಶಿಗಳು ತಮ್ಮ ಪಥವನ್ನು ಬದಲಿಸಲಿದೆ. ಹಾಗಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆಯಿಂದ (ಮಾ 29) ಮುಂದಿನ ಐದು ದಿನ, ಈ ಅವಧಿಯಲ್ಲಿ ಜನರು ವಿಶೇಷ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಅಭಿಪ್ರಾಯ ಪಟ್ಟಿದ್ದಾನೆ.

      ಗುರು, ಮಂಗಳ ಮತ್ತು ಶನಿ ಗ್ರಹಗಳು ಮಕರ ರಾಶಿಯಲ್ಲಿ ಸಂಯೋಗ

      ಗುರು, ಮಂಗಳ ಮತ್ತು ಶನಿ ಗ್ರಹಗಳು ಮಕರ ರಾಶಿಯಲ್ಲಿ ಸಂಯೋಗ

      ಈ ಅವಧಿಯಲ್ಲಿ ಗುರು, ಮಂಗಳ ಮತ್ತು ಶನಿ ಗ್ರಹಗಳು ಮಕರ ರಾಶಿಯಲ್ಲಿ ಸಂಯೋಗಗೊಳ್ಳಲಿವೆ. ಸೂರ್ಯನ ಹೊರ ರೇಖೆಯಿಂದ ಇವು ಹೊರಗಿದ್ದವು. ಖಗೋಳ ಶಾಸ್ತ್ರದ ಪ್ರಕಾರ ಇದೊಂದು ಅಪರೂಪದ, ಅಭೂತಪೂರ್ವ ಕ್ಷಣ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಎಫೆಕ್ಟ್ ಜಗತ್ತಿಗೆ ತೋರಲಿದೆ.

      ಬಾಲ ಜ್ಯೋತಿಷಿ ಅಭಿಗ್ಯಾ

      ಬಾಲ ಜ್ಯೋತಿಷಿ ಅಭಿಗ್ಯಾ

      ಚಂದ್ರ ಮತ್ತು ರಾಹುವೂ ಈ ಅವಧಿಯಲ್ಲಿ ಸಂಯೋಗಗೊಳ್ಳಲಿದೆ. ಮಾರ್ಚ್ 31ರಿಂದ ಏಪ್ರಿಲ್ 1ರ ಅವಧಿಯಲ್ಲಿ ಮಂಗಳ ಮತ್ತು ಶನಿ ಸಂಪೂರ್ಣವಾಗಿ ಸಂಯೋಗಗೊಳ್ಳಲಿದೆ. ಈ ಅವಧಿಯಲ್ಲಿ ಮಾರಣಾಂತಿಕ ಕಾಯಿಲೆ ಅತಿಹೆಚ್ಚು ಹರಡುವ ಸಮಯವಾಗಬಹುದು. ಒಂದು ಕಡೆ ಚಂದ್ರ, ರಾಹು ಮತ್ತು ಇನ್ನೊಂದೆಡೆ ಗುರು ಮತ್ತು ಮಂಗಳ, ಅನಿಷ್ಠ ತರಲಿದೆ.

      ತುಳಸಿ ದಳವನ್ನೂ ಬಳಸಿ ದೇಹವನ್ನು ಶುಚಿತ್ವ

      ತುಳಸಿ ದಳವನ್ನೂ ಬಳಸಿ ದೇಹವನ್ನು ಶುಚಿತ್ವ

      ಭಾರತ ದೇಶದ ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಪೂರ್ವ ಮತ್ತು ವಾಯುವ್ಯ ಭಾರತದಲ್ಲಿ ತುಂಬಾ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಈ ಬಾಲ ಜ್ಯೋತಿಷ್ಯ ಅಭಿಪ್ರಾಯ ಪಟ್ಟಿದ್ದಾನೆ. ಮನೆಯಿಂದ ಹೊರಗೆ ಹೋಗದೇ, ಮನೆಯಲ್ಲೇ ಸೂರ್ಯನ ಬೆಳಕಿಗೆ ಮೈಯೊಡ್ಡಿ, ತುಳಸಿ ದಳವನ್ನೂ ಬಳಸಿ ದೇಹವನ್ನು ಶುಚಿತ್ವಗೊಳಿಸುತ್ತಿರಿ.

      ಈ ಅವಧಿಯಲ್ಲಿ ಮಾಡಬೇಕಾಗಿರುವ ಪ್ರಮುಖವಾದ ಅಂಶ.

      ಈ ಅವಧಿಯಲ್ಲಿ ಮಾಡಬೇಕಾಗಿರುವ ಪ್ರಮುಖವಾದ ಅಂಶ.

      ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಇತರ ಭಾಗಗಳಲ್ಲೂ ಈ ಅವಧಿ ತುಂಬಾ ಕೆಟ್ಟದಾಗಿ ಇರಲಿದೆ. ಒಂದು ತಟ್ಟೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಅರಶಿನ, ಓಮ, ಶುಂಠಿ ಹಾಕಿ ಅದನ್ನು ಚೆನ್ನಾಗಿ ಕುದಿಸಿ, ಒಂದು ಟವೆಲ್ ನಿಂದ ಮುಖ ಮುಚ್ಚಿಕೊಂಡು ಇದರ ಹಬೆಯನ್ನು ಸೇವಿಸಿದರೆ, ಮೂಗಿನ ಸುತ್ತ ಇರುವ ಬ್ಯಾಕ್ಟೀರಿಯಾ/ ವೈರಸ್ ಗಳು ನಾಶವಾಗಲಿದೆ. ಇದು ಈ ಅವಧಿಯಲ್ಲಿ ಮಾಡಬೇಕಾಗಿರುವ ಪ್ರಮುಖವಾದ ಅಂಶ.

      ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿ

      ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿ

      ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ. ಪ್ರಮುಖವಾಗಿ, ಮಾರ್ಚ್ 31 ಮತ್ತು ಏಪ್ರಿಲ್ ಒಂದರಂದು ಅತ್ಯಂತ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಈ ಜ್ಯೋತಿಷಿ ಅಭಿಪ್ರಾಯ ಪಟ್ಟಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+