ಮಣಿಪುರದ ಹೊಲದಲ್ಲಿ 2ನೇ ವಿಶ್ವ ಯುದ್ಧ ಕಾಲದ ಬಾಂಬ್ ಪತ್ತೆ!
ಮೊರೆಹ್(ಮಣಿಪುರ), ಜುಲೈ 17: ಎರಡನೇ ಮಹಾಯುದ್ಧದ ಕಾಲಕ್ಕೆ ಸಂಬಂಧಿಸಿದ ಸ್ಫೋಟಗೊಳ್ಳದ ಬಾಂಬ್, ಇನ್ನಿತರ ಶಸ್ತ್ರಾಸ್ತ್ರಗಳು ಮಣಿಪುರದ ಹೊಲವೊಂದರಲ್ಲಿ ಪತ್ತೆಯಾಗಿವೆ.
Recommended Video
ಗುರುವಾರದಂದು ಹೊಲವೊಂದರಲ್ಲಿ ಮಣ್ಣು ಸಮ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬಾಂಬ್, ಲೈವ್ ಕಾಟ್ರಿಜ್, ಶಸ್ತ್ರಾಸ್ತ್ರಗಳು ಕಾಣಿಸಿಕೊಂಡಿವೆ. ಮೊರೆಹ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಸುದ್ದಿ ತಿಳಿದು ಬಂದಿದೆ. ಸ್ಫೋಟಗೊಳ್ಳದ ಬಾಂಬ್ ಗಳನ್ನು ವಸತಿ ಪ್ರದೇಶದಿಂದ ದೂರ ತೆಗೆದುಕೊಂಡು ಬಂದು ಸುರಕ್ಷಿತವಾಗಿರಿಸಲಾಗಿದೆ, ಈ ಬಗ್ಗೆ ತಪಾಸಣೆ ಮುಂದುವರೆದಿದೆ ಎಂದು ಎಎಸ್ ಪಿ ಸಂಗ್ ಬಾಯಿ ಗಾಂಗ್ಟೆ ಹೇಳಿದ್ದಾರೆ.
2ನೇ ವಿಶ್ವ ಯುದ್ಧದ ಕಾಲದ್ದು ಎನ್ನಲಾದ 27 ಬಾಂಬ್, 43 ಬಾಂಬ್ ಇಡುವ ಕೇಸ್, ಶಸ್ತ್ರಾಸ್ತ್ರ ಇಡುವ 15 ಪೆಟ್ಟಿಗೆ, ಲೈವ್ ಕಾಟ್ರಿಜ್ ಗಳನ್ನು ಲಾಂಗ್ ನೊವ್ ವೆಂಗ್ ಎಂಬ ಪ್ರದೇಶದಿಂದ ಹೊರಕ್ಕೆ ತೆಗೆಯಲಾಗಿದೆ.

2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷರ ಆಡಳಿತವಿದ್ದ ಭಾರತ, ಅವರ ಪರವಾಗಿಯೇ ಯುದ್ಧದಲ್ಲಿ ಭಾಗವಹಿಸಿತ್ತು. ಭಾರತದ 13 ಲಕ್ಷ ಯೋಧರು ಭಾಗಿಯಾಗಿದ್ದರು ಆ ಯುದ್ಧದಲ್ಲಿ ಭಾಗವಹಿಸಿದ್ದರು ಹಾಗೂ 62 ಸಾವಿರ ಭಾರತೀಯ ಯೋಧರು ಮೃತಪಟ್ಟಿದ್ದರು.
2019ರಲ್ಲಿ ಜರ್ಮನಿಯ ಹಳ್ಳಿಯೊಂದರಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ವೊಂದು ಸ್ಫೋಟಗೊಂಡಿತ್ತು. ಆ ಬಾಂಬ್ ಕೂಡಾ ಇದೇ ರೀತಿ ಭೂಮಿಯಲ್ಲಿ ಹುದುಗಿ ಹೋಗಿತ್ತು. ಆದರೆ, ಮಣಿಪುರದ ಬಳಿ ಈ ರೀತಿ ಬಾಂಬ್ ಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.\

2ನೇ ಜಾಗತಿಕ ಸಮರ:
1914ರ ಜುಲೈ 28ರಂದು ಆರಂಭವಾದ ಮೊದಲ ಮಹಾಯುದ್ದ 1918ರ ನವೆಂಬರ್ 11ರವರೆಗೆ ನಡೆದಿತ್ತು. ಬ್ರಿಟಿಷ್ ಒಕ್ಕೂಟ ಹಾಗೂ ಜರ್ಮನ್ ಒಕ್ಕೂಟ ನಡುವೆ ನಡೆದ ಮೊದಲ ವಿಶ್ವಯುದ್ದ, 4 ವರ್ಷಗಳ ಕಾಲ ನಡೆದಿತ್ತು. ಈ ಯುದ್ಧದಲ್ಲಿ ಒಟ್ಟು 6.5 ಕೋಟಿ ಸೈನಿಕರು ಭಾಗಿಯಾಗಿದ್ದರು. ಅದರಲ್ಲಿ 85 ಲಕ್ಷ ಮಂದಿ ಮೃತಪಟ್ಟು, 3.7 ಕೋಟಿ ಸೈನಿಕರು ಗಾಯಗೊಂಡಿದ್ದರು.
ಸೆಂಟ್ರಲ್ ಪವರ್ಸ್(ಜರ್ಮನಿ, ಆಸ್ಟ್ರೀಯಾ-ಹಂಗೇರಿ, ದಿ ಒಟ್ಟೊಮನ್ ರಾಜಮನೆತನ ಹಾಗೂ ಬಲ್ಗೇರಿಯಾ) ಹಾಗೂ ಮೈತ್ರಿಕೂಟ ಅಥವಾ ಟ್ರಿಪಲ್ ಎಂಟೆಂಟೆ(ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು. ಆರಂಭದಲ್ಲಿ ಸೆಂಟ್ರಲ್ ಪವರ್ಸ್ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್, ಬೆಲ್ಜಿಯಂ, ಸರ್ಬಿಯಾ, ಗ್ರೀಸ್, ಮಾಂಟೆನೆಗ್ರೋ, ರೊಮಾನಿಯಾ, ಬ್ರೆಜಿಲ್ ಹಾಗೂ ಚೆಕೊಸ್ಲೋವಾಕ್ ಪ್ರಾಂತ್ಯಗಳು ಬೆಂಬಲ ವ್ಯಕ್ತಪಡಿಸಿದವು. 1917ರ ನಂತರ ಜರ್ಮನಿ ವಿರುದ್ಧವಾಗಿ ಯುಎಸ್ಎ ನಿಂತು ಕೊಂಡಿತು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications