ಒಂದೊಂದು ಮಣ್ಣಿಗೆ ಒಂದೊಂದು ಗುಣ, ತೀರಿಸಲಾಗದು ತಾಯಿಯ ಋಣ

Posted By:
Subscribe to Oneindia Kannada

ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ. ಪ್ರತಿಮನುಷ್ಯನ ಆಹಾರದ ಅಗತ್ಯವನ್ನು ನೀಗಿಸುತ್ತಿರುದೇ ಮಣ್ಣು. ಹೌದು, ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು, ಅದರ ರಕ್ಷಣೆಗೆ ಪಣತೊಡುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 5 ನ್ನು 'ವಿಶ್ವ ಮಣ್ಣಿನ ದಿನ' ಎಂದು ಆಚರಿಸಲಾಗುತ್ತದೆ.

ಜಲದಿಂದ ಮನುಜ ಕುಲ, ಜಲವೇ ಜೀವ ಸಂಕುಲ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸ್ಸು ಮಾಡಿತ್ತು. ನಂತರ 2014 ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯ್ತು. ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ.

World Soil Day on Dec 5th: soil plays an essential role in human livelihoods

2017 , ಅಂದರೆ ಈ ವರ್ಷ ಮಣ್ಣು ದಿನದ ಧ್ಯೇಯವಾಕ್ಯ 'Caring for the Planet starts from the Ground' (ಭೂಮಿಯ ಮೇಲಿನ ಕಾಳಜಿ ನೆಲದಿಂದ ಆರಂಭವಾಗುತ್ತದೆ) ಜಗತ್ತಿನ ಶೇ.95 ರಷ್ಟು ಆಹಾರ ಪದಾರ್ಥ ಸಿಕ್ಕುವುದು ಮಣ್ಣಿನಿಂದ. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದು ವರದಿಗಳು ಹೇಳುತ್ತದೆ. ಅಂದರೆ ಉಳಿದ ಮಣ್ಣನ್ನು ಜತನದಿಂದ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ.

ವಿಶ್ವದಾದ್ಯಂತ ಬೇರೆ ಬೇರೆ ಸ್ಥಳಗಳಲ್ಲಿ ಮಣ್ಣಿನ ಕಾಳಜಿಯ ಕುರಿತು ಕಾರ್ಯಾಗಾರ, ಉಪನ್ಯಾಸ, ತರಬೇತಿ ನೀಡಿ ಈ ದಿನವನ್ನು ಆಚರಿಸಲಾಗುತ್ತದೆ. ಇಂದಿನ ಮಾಲಿನ್ಯದ ಯುಗದಲ್ಲಿ ಮಣ್ಣನ್ನು ಉಳಿಸಿಕೊಳ್ಳುವುದು ಒಂದು ಸವಾಲೇ ಸರಿ. ಆದರೆ ಮನುಕುಲದ ಭವಿಷ್ಯದ ದೃಷ್ಟಿಯಿಂದ ಇಂದಿನಿಂದಲೇ ಮಣ್ಣಿನ ಮೇಲೆ ಮತ್ತಷ್ಟು ಕಾಳಜಿ ಮೂಡಲಿ ಎಂಬ ಹಾರೈಕೆ 'ವಿಶ್ವ ಮಣ್ಣಿನ ದಿನ'ದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World Soil Day (WSD) is held annually on 5 December as a means to focus attention on the importance of healthy soil and advocating for the sustainable management of soil resources.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ