ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ganga Vilas cruise: ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ ಪ್ರಯಾಣ ವೆಚ್ಚ ನಿಜಕ್ಕೂ ಶಾಕ್ ನೀಡುತ್ತೆ!

|
Google Oneindia Kannada News

ನವದೆಹಲಿ, ಜ. 09: ವಿಶ್ವದ ಅತಿ ಉದ್ದದ ನದಿ ವಿಹಾರ ಒದಗಿಸಲಿರುವ ಎಂವಿ ಗಂಗಾ ವಿಲಾಸ್ ಐಷಾರಾಮಿ ಹಡಗಿಗೆ ಜನವರಿ 13ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಹಡಗಿನಲ್ಲಿ ಪ್ರಯಾಣಿಸಬೇಖು ಎಂದರೇ ಲಕ್ಷ ಲಕ್ಷ ಹಣ ಕೂಡ ಬೇಕು.

ಹೌದು, ಗಂಗಾ ವಿಲಾಸ್ ಹಡಗಿನ ಪ್ರಯಾಣ ದರವು ನಿಮ್ಮ ಮನಸ್ಸನ್ನು ಚಕಿತಗೊಳಿಸುತ್ತದೆ. ಒಮ್ಮೆ ಜೇಬು ಮುಟ್ಟಿ ನೋಡಿಕೊಂಡು ಆಮೇಲೆ ಯೋಚಿಸುವಂತೆ ಮಾಡುತ್ತದೆ. ವಾರಣಾಸಿಯಿಂದ ನೌಕಾಯಾನ ಆರಂಭವಾಗಿ ಅಸ್ಸಾಂನ ದಿಬ್ರುಗಢ್‌ನಲ್ಲಿ ಲಂಗರು ಹಾಕಲಿರುವ ಎಂವಿ ಗಂಗಾ ವಿಲಾಸ್‌ನಲ್ಲಿ ಪ್ರಯಾಣಿಸುವ ಪ್ರತಿ ವ್ಯಕ್ತಿಗೆ ಪ್ರತಿ ದಿನದ ಶುಲ್ಕ 300 ಡಾಲರ್ ಅಂದರೆ 2,4692.25 ರೂಪಾಯಿಗಳು.

ಜ.19ಕ್ಕೆ ತೆಲಂಗಾಣಕ್ಕೆ ಮೋದಿ ಭೇಟಿ, ವಂದೇ ಭಾರತ್‌ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆಜ.19ಕ್ಕೆ ತೆಲಂಗಾಣಕ್ಕೆ ಮೋದಿ ಭೇಟಿ, ವಂದೇ ಭಾರತ್‌ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ

ಒಂದು ದಿನಕ್ಕೆ 300 ಡಾಲರ್ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಆಯುಷ್ ಸರ್ಬಾನಂದ ಸೋನೋವಾಲ್ ಸೋಮವಾರ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದರ ಜೊತೆಗೆ ಭಾರತೀಯರಿಗೆ ಮತ್ತು ವಿದೇಶಿಯರಿಗೆ ಪ್ರಯಾಣ ದರ ಒಂದೇ ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Worlds Longest River Cruise Ganga Vilas Cost 13 Lakh

ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿರುವ ಈ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ 3,200 ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದ ನಂತರ ಅಸ್ಸಾಂನ ದಿಬ್ರುಗಢವನ್ನು ತಲುಪಲಿದೆ. ಒಟ್ಟು 51 ದಿನಗಳ ಕಾಲ ಹಡಗಿನಲ್ಲಿ ನದಿಯ ವಿಹಾರವನ್ನು ಆನಂದಿಸಬೇಕಿರುವವರು ಬರೋಬ್ಬರಿ 1,53,000 ಡಾಲರ್‌ಗಳನ್ನು ಪಾವತಿಸಬೇಕು. ಅಂದರೆ 12.59 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗಲಿದೆ.

ಈ ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಮೂರು ಡೆಕ್‌ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್‌ಗಳು ಮತ್ತು ಐಷಾರಾಮಿ ಅನುಭವವನ್ನು ಒದಗಿಸುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ.

"ಈ ಹಡಗು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ಹಾದುಹೋಗುಲಿದ್ದು, ಇದು ಭಾರತದ ಈ ರಾಜ್ಯಗಳು ಮತ್ತು ಬಾಂಗ್ಲಾದೇಶದ 50 ಸ್ಥಳಗಳಲ್ಲಿ ನಿಲುಗಡೆ ನೀಡಲಿದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡುತ್ತಾರೆ" ಎಂದು ಸಚಿವ ಸೋನೊವಾಲ್ ತಿಳಿಸಿದ್ದಾರೆ.

Worlds Longest River Cruise Ganga Vilas Cost 13 Lakh

ಅಸ್ಸಾಂನ ದಿಬ್ರುಗಢದಲ್ಲಿ ಪ್ರಯಾಣ ಕೊನೆಗೊಳ್ಳುವ ಮೊದಲು ಧುಬ್ರಿ, ಜೋಗಿಘೋಪಾ, ಗುವಾಹಟಿಯ ಪಾಂಡು, ಕಾಜಿರಂಗ, ನಿಮತಿ ಮತ್ತು ಮಜುಲಿಯಲ್ಲಿ ನಿಲುಗಡೆ ನೀಡಲಾಗಿದೆ.

ಇನ್ನು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ದಿನ ಈ ಐಷಾರಾಮಿ ಹಡಗಿನ್ಲಲಿ ಪ್ರಯಾಣ ಬೆಳೆಸುವವರು ಎಲ್ಲಾ 36 ಸ್ವಿಸ್ ಪ್ರಜೆಗಳು ಎಂದು ಸಚಿವ ಆಯುಷ್ ಸರ್ಬಾನಂದ ಸೋನೊವಾಲ್ ಮಾಹಿತಿ ನೀಡಿದ್ದಾರೆ. ಈ ಅವರಲ್ಲಿ 36 ಮಂದಿಯಲ್ಲಿ ಹದಿನಾಲ್ಕು ಮಂದಿ ಕೋಲ್ಕತ್ತಾದಲ್ಲಿ ಇಳಿಯಲಿದ್ದಾರೆ. ಜೊತೆಗೆ ಇನ್ನೂ 14 ಮಂದಿ ಅಲ್ಲಿಂದ ಹಡಗನ್ನು ಹತ್ತಲಿದ್ದಾರೆ ಎಂದು ತಿಳಿಸಿದ್ದಾರೆ.

"ಗಂಗಾ ವಿಲಾಸ್ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ತೆರೆಯುತ್ತದೆ. ಪ್ರಧಾನಿ ಮೋದಿಜಿಯವರ ಅಡಿಯಲ್ಲಿ ಒಳನಾಡಿನ ಜಲಮಾರ್ಗಗಳಿಗೆ ಉತ್ತೇಜನ ಸಿಕ್ಕಿದೆ. ಸರಕು ಮತ್ತು ಪ್ರಯಾಣಿಕ ಹಡಗುಗಳಷ್ಟೇ ಅಲ್ಲ, ಕ್ರೂಸ್‌ಗಳು ಕೂಡ ಇರಬೇಕು. ಇದರಿಂದ ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿಗಳು, ನಾಗರಿಕತೆಗಳು ಮತ್ತು ಗಂಗಾ ಮತ್ತು ಬ್ರಹ್ಮಪುತ್ರದ ದಡದಲ್ಲಿರುವ ಸಂಸ್ಕೃತಿಯನ್ನು ನೋಡಬಹುದು" ಎಂದು ಸಚಿವರು ಹೇಳಿದ್ದಾರೆ.

English summary
Prime Minister Narendra Modi will launch World's longest river cruise MV Ganga Vilas on January 13, this cruise cost almost Rs 13 lakh. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X