ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ: ಮೋದಿ ಸೇರಿದಂತೆ ಗಣ್ಯರ ಶುಭಹಾರೈಕೆ

|
Google Oneindia Kannada News

ಪತ್ರಕರ್ತರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ ಎಂಬ ಕೂಗು ಹಲವು ಕಾಲದಿಂದಲೂ ಕೇಳಿಬರುತ್ತಿದೆ. ಹಲವೆಡೆ ಪತ್ರಕರ್ತರ ಕೊಲೆಯಂಥ ಘಟನೆಗಳೂ ದಾಖಲಾಗಿವೆ.

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಬ ಎಂದು ಕರೆಯಿಸಿಕೊಳ್ಳುವ ಪತ್ರಿಕೋದ್ಯಮಕ್ಕಿರುವ ಸಾಮಾಜಿಕ ಬದ್ಧತೆ ಹಲವು. ಆ ಬದ್ಧತೆಯನ್ನು ಉಳಿಸಿಕೊಳ್ಳಲು ಸ್ವತಂತ್ರ್ಯವಾಗಿ, ಪೂರ್ವಗ್ರಹಮುಕ್ತವಾಗಿ ಕೆಲಸ ಮಾಡಬೇಕಾದ್ದು ಅನಿವಾರ್ಯ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 3 ನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ಆನ್ ಲೈನ್ ಮಾಧ್ಯಮಕ್ಕೆ ಕಡಿವಾಣ ಹಾಕಲು ಹೊಸ ಸಮಿತಿಆನ್ ಲೈನ್ ಮಾಧ್ಯಮಕ್ಕೆ ಕಡಿವಾಣ ಹಾಕಲು ಹೊಸ ಸಮಿತಿ

1993 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಈ ದಿನವನ್ನು ಆಚರಿಸಲು ನಿರ್ಧರಿಸಿತು. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಸಿದ್ಧಾಂತಗಳ ರಕ್ಷಣೆ, ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ, ವೃತ್ತಿ ಧರ್ಮ ಪರಿಪಾಲನೆಯ ಸಮಯದಲ್ಲಿ ಪ್ರಾಣತೆತ್ತವರಿಗೆ ಸಂತಾಪ ಸೂಚಿಸುವುದು... ಈ ಎಲ್ಲಾ ಉದ್ದೇಶಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆ ಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆ

ಇಂದು ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ದಿನಕ್ಕಾಗಿ ಶುಭಾಶಯ ಕೋರಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದಿಂದ ಪ್ರಜಾಪ್ರಭುತ್ವಕ್ಕೆ ಬಲ

ಪತ್ರಿಕಾ ಸ್ವಾತಂತ್ರ್ಯ ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವತ್ತ ನಮ್ಮ ಬದ್ಧತೆಯನ್ನು ಬೆಳೆಸಿಕೊಳ್ಳೋಣ. ಇದು ಮಾನವೀಯತೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಎಲ್ಲ ಪತ್ರಕರ್ತರಿಗೂ ರಕ್ಷಣೆ ಸಿಗಲಿ

ಉತ್ತಮ ಪತ್ರಿಕೋದ್ಯಮ ಸತ್ಯವನ್ನು ಹುಡುಕುತ್ತದೆ. ಎಲ್ಲ ಪತ್ರಕರ್ತರಿಗೂ ರಕ್ಷಣೆ ಸಿಗಬೇಕು. ಅವರ ಮೇಲೆ ದೌರ್ಜನ್ಯ ನಡೆಯಬಾರದು, ಬೆದರಿಕೆ ಒಡ್ಡಬಾರದು ಎಂದಿದ್ದಾರೆ ಮೊಹ್ಮದ್ ನಶೀದ್.

ಎಲ್ಲ ಧೈರ್ಯವಂತ ಪತ್ರಕರ್ತರಿಗೂ ನಮನ

ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ನಮ್ಮ ದೇಶ ಹಿತಕ್ಕಾಗಿ ಪ್ರತಿದಿನ ಧೈರ್ಯವಾಗಿ ಹೋರಾಡುತ್ತಿರುವ ಎಲ್ಲ ಧೈರ್ಯವಂತ ಪತ್ರಕರ್ತರಿಗೂ ನನ್ನ ನಮನ ಎಂದಿದ್ದಾರೆ ಜ್ಯೂತಿರಾದಿತ್ಯ ಸಿಂದಿಯಾ.

ಪತ್ರಕರ್ತರಿಂದಲೇ ಅಪಾಯ!

ಕೆಲವು ಪತ್ರಕರ್ತರೇ ದೇಶಕ್ಕೆ ಅತೀ ದೊಡ್ಡ ಅಪಾಯವಾಗಿದ್ದಾರೆ ಎಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು ನೆನಪಿಸಿಕೊಂಡಿದ್ದಾರೆ ಮುರ್ತುಜ್ ಎಂಬುವವರು.

English summary
World Press Freedom Day was proclaimed by the UN General Assembly in December 1993, following the recommendation of UNESCO's General Conference. Since then, 3 May, the anniversary of the Declaration of Windhoek is celebrated worldwide as World Press Freedom Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X