ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ : ಮೋದಿ

By Kiran B Hegde
|
Google Oneindia Kannada News

ಗಾಂಧಿನಗರ (ಗುಜರಾತ್), ಜ. 8 : ಇಡೀ ಜಗತ್ತು ಭಾರತದತ್ತ ಆಶಾವಾದ, ಭರವಸೆಯಿಂದ ನೋಡುತ್ತಿದೆ. ಸಮಯ ಬದಲಾಗಿದೆ. ದೇಶದಲ್ಲಿಯೇ ಸಾಕಷ್ಟು ಅವಕಾಶಗಳು ನಿಮಗಾಗಿ ಕಾಯುತ್ತಿವೆ...

ಗುಜರಾತ್‌ನ ಗಾಂಧಿನಗರದಲ್ಲಿ ಗುರುವಾರ ಬೆಳಗ್ಗೆ 'ಪ್ರವಾಸಿ ಭಾರತೀಯ ದಿವಸ್'ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳಿವು.

"ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಆಚರಿಸಬೇಕೆಂದು ಭಾರತ ಬೇಡಿಕೆ ಇಟ್ಟಾಗ ಜಗತ್ತಿನ 177 ದೇಶಗಳು ಬೆಂಬಲ ನೀಡಿವೆ. ಜಗತ್ತಿನ ಎಲ್ಲ ದೇಶಗಳಲ್ಲಿ ಸುಮಾರು 2.5 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಭಾರತಕ್ಕೆ ಬರುವ ವಿದೇಶೀಯರನ್ನು ನಾವು ಕೇವಲ ಡಾಲರ್ ಅಥವಾ ಪೌಂಡ್‌ಗಳಿಂದ ಅಳೆಯುವುದಿಲ್ಲ" ಎಂದು ತಿಳಿಸಿದರು. [ಮ್ಯಾಡಿಸನ್ ನಲ್ಲಿ ಮೋದಿ ಮಾಂತ್ರಿಕ ಭಾಷಣ]

modi

ಅನಿವಾಸಿ ಭಾರತೀಯರನ್ನು ಶ್ಲಾಘಿಸಿದ ಮೋದಿ, "ಭಾರತದಲ್ಲಿಯೇ ಜನಿಸಿದ ವ್ಯಕ್ತಿ (POI) ಮತ್ತು ಭಾರತದ ಸಾಗರೋತ್ತರ ನಾಗರಿಕತ್ವ (OCI) ಗಳನ್ನು ಸೇರಿಸಲಾಗಿದೆ. ವೀಸಾ ಪಡೆಯುವಾಗ ಅನುಭವಿಸುವ ಸಮಸ್ಯೆಯನ್ನು ನಾನು ಕೂಡ ಅರಿತಿದ್ದೇನೆ" ಎಂದು ಹೇಳಿದರು.

ಯುವ ಪ್ರವಾಸಿ ಭಾರತೀಯ ದಿವಸ್ ಆಚರಣೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚಾಲನೆ ನೀಡಿದರು. ಮಹಾತ್ಮ ಗಾಂಧಿ ಭಾರತಕ್ಕೆ ವಾಪಸ್ ಬಂದ 100 ವರ್ಷಗಳ ಆಚರಣೆ ಪ್ರಯುಕ್ತ ಸನಿಹದಲ್ಲಿಯೇ ಉಪ್ಪಿನ ರಾಶಿಯನ್ನು ನರೇಂದ್ರ ಮೋದಿ ಉದ್ಘಾಟಿಸಿದರು. [ಮೋದಿ ಸಮರ್ಥ ಆಡಳಿತಗಾರ : ತುಳಸಿ]

ಐತಿಹಾಸಿಕ ಹಾಗೂ ಪೌರಾಣಿಕ ಪ್ರಾಮುಖ್ಯತೆ ಹೊಂದಿರುವ ಭಾರತದಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಆಚರಿಸುತ್ತಿರುವ 'ಭಾರತೀಯ ಪ್ರವಾಸಿ ದಿವಸ್' ಆಚರಣೆಗೆ ಚಾಲನೆ ದೊರೆತಿದೆ. ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 4,000 ಅತಿಥಿಗಳು ಹಾಗೂ ವಿವಿಧ ದೇಶಗಳಿಗೆ ವಲಸೆ ಹೋಗಿದ್ದ 100 ಯುವಕರು ಪಾಲ್ಗೊಂಡಿದ್ದಾರೆ.

English summary
Prime Minister Narendra Modi has inaugurated the 13th edition of ‘Pravasi Bharatiya Diwas’ in Gandhinagar. After that he inaugurated a Salt Mountain in the memorial dedicated to Mahatma Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X