'ರಾಮ ಮಂದಿರಕ್ಕೆ ವಿರೋಧಿಸಿದ್ರೆ ಮುಸ್ಲಿಮರಿಗೆ ಹಜ್ ಗೆ ಹೋಗಲು ಬಿಡಲ್ಲ'
ಲಕ್ನೋ, 14 : ಉತ್ತರ ಪ್ರದೇಶದ ಬಿಜೆಪಿ ಶಾಸಕ ಬೃಜ್ ಭೂಷಣ್ ರಾಜಪೂತ್ ಅವರು ಮುಸ್ಲಿಂ ವಿರುದ್ಧ ಗುಡುಗಿ ಯೋಗಿ ಆದಿತ್ಯನಾಥ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
'ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟಲು ಮುಸ್ಲಿಮರು ವಿರೋಧಿಸಿದರೆ ಅವರನ್ನು ನಾನು ಹಜ್ ಯಾತ್ರೆಗೆ ಹೋಗಲು ಬಿಡುವುದಿಲ್ಲ' ಎಂದು ಶಾಸಕ ಬೃಜ್ ಭೂಷಣ್ ರಾಜಪೂತ್ ಗುಡುಗಿದ್ದಾರೆ.

ಈಚೆಗೆ ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ಉಗ್ರ ದಾಳಿ ನಡೆದು ಏಳು ಮಂದಿ ಹತರಾಗಿರುವ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಮಾತುಗಳನಾಡಿದ ಅವರು, ವಿಡಿಯೋವನ್ನು ಸ್ವತಃ ಅವರೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಇದೀಗ ಅದು ವೈರಲ್ ಆಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷದ ನಾಯಕರಿಗೆ ವಿವೇಚನೆ ಇಲ್ಲದ, ಅನಗತ್ಯ ವಿವಾದಗಳನ್ನು ಸೃಷ್ಟಿಸುವ, ಮಾತುಗಳನ್ನು ಆಡಕೂಡದೆಂದು ಕಟ್ಟುನಿಟ್ಟಾಗಿ ಸೂಚಿಸಿರುವ ಹೊರತಾಗಿಯೂ ಶಾಸಕ ಬೃಜ್ ಭೂಷಣ್ ಈ ರೀತಿಯ ಉದ್ರೇಕಕಾರಿ, ಪ್ರಚೋದನಕಾರಿ ಮಾತುಗಳನ್ನು ಆಡಿರುವುದು ಅಚ್ಚರಿ ಉಂಟುಮಾಡಿದೆ.












Click it and Unblock the Notifications