ಭಾರತೀಯ ನೌಕಾಪಡೆಯಲ್ಲಿ ವಿಜೃಂಭಿಸುತ್ತಿದೆ ನಾರಿ ಶಕ್ತಿ

Posted By: Nayana
Subscribe to Oneindia Kannada

ಕಣ್ಣೂರು, ನವೆಂಬರ್ 23 : ಭಾರತೀಯ ನೌಕಾಪಡೆಗೆ ಇದೇ ಮೊದಲ ಬಾರಿಗೆ ಮಹಿಳಾ ಪೈಲಟ್ ಗಳು ಸೇರ್ಪಡೆಯಾಗಿದ್ದು ಬುಧವಾರ ಈ ಐತಿಹಾಸಿಕ ಘಟನೆಗೆ ನೌಕಾಪಡೆ ಸಾಕ್ಷಿಯಾಯಿತು.

ಭಾರತೀಯ ನೌಕಾಪಡೆಗೆ ಇದೇ ಮೊದಲ ಬಾರಿಗೆ ಮಹಿಳಾ ಪೈಲಟ್ ಯು. ಶುಭಾಂಗಿ ಸ್ವರೂಪ್ ಸೇರಿದಂತೆ ಮೂವರು ಮಹಿಳಾ ಪೈಲಟ್ ಗಳು ಸೇರ್ಪಡೆಗೊಂಡರು. ಈವರೆಗೆ ಭೂಸೇನೆ ಮತ್ತು ವಾಯುಸೇನೆಯಲ್ಲಿ ಮಹಿಳಾ ಸಿಬ್ಬಂದಿಗಳೂ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರಾದರೂ ನೌಕಾಪಡೆಯ ಪೈಲಟ್ ಹುದ್ದೆಯಲ್ಲಿ ಮಹಿಳೆಯರನ್ನು ಈವರೆಗೆ ನೇಮಕ ಮಾಡಿರಲಿಲ್ಲ.

ಲಿಂಗ ಪರಿವರ್ತನೆಗೊಂಡ ನಾವಿಕ ನೌಕಾಪಡೆಯಿಂದ ವಜಾ

ಬುಧವಾರ ಕೇರಳದ ಕಣ್ಣೂರಿನ ಎಳಿಮಲಾದಲ್ಲಿ ಪೈಲಟ್ ಗಳನ್ನು ಸೇರ್ಪಡೆ ಮಾಡಲಾಯಿತು. ಶುಭಾಂಗಿ ತಂದೆ ಕಮಾಂಡರ್ ಜ್ಞಾನ ಸ್ವರೂಪ್ ಹಾಗೂ ತಾಯಿ ಈ ಸಂತಸ ಕ್ಷಣಕ್ಕೆ ಸಾಕ್ಷಿಯಾದರು. ಶುಭಾಂಗಿ ಸ್ವರೂಪ್ ಉತ್ತರ ಪ್ರದೇಶದ ಬರೇಲಿ ಮೂಲದವರಾಗಿದ್ದಾರೆ.

ನೌಕ ದಳಕ್ಕೆ ಆಯ್ಕೆಯಾದ ಮಂಗಳೂರಿನ ದಿಶಾಳ ಸಾಹಸಗಾಥೆ

ಇದೇ ವೇಳೆ ನವದೆಹಲಿಯ ಅಸ್ತಾ ಸೆಗಲ್, ಪುದುಚೇರಿಯ ರೂಪಾ ಎ ಮತ್ತು ಕೇರಳದ ಶಕ್ತಿ ಮಾಯಾ ಎಸ್. ಅವರುಗಳು ಮಹಿಳಾ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಮಹಿಳೆಯರನ್ನು ಉತ್ತೇಜಿಸುವ ಅವಕಾಶವನ್ನು ಈ ಕ್ರಮ ಅನುಸರಿಸಿದೆ. ಜತೆಗೆ ಮಹತ್ವದ ಹೊಣೆಗಾರಿಕೆಯೂ ಹೌದು ಎಂದು ಮೊದಲ ಮಹಿಳಾ ಪೈಲಟ್ ಶುಭಾಂಗಿ ಹೇಳಿದ್ದಾರೆ.

ನಿರ್ಗಮಿತ ಪಡೆಯಿಂದ ಗೌರವ ಸ್ವೀಕಾರ

ನಿರ್ಗಮಿತ ಪಡೆಯಿಂದ ಗೌರವ ಸ್ವೀಕಾರ

ಭಾರತೀಯ ನೌಕಾಪಡೆಯ ಮುಖ್ಯಸ್ಥ ಸುನಿಲ್ ಲಾಂಬಾ ಅವರು ಕಣ್ಣೂರಿನ ರಾಷ್ಟ್ರೀಯ ನೌಕಾಪಡೆಯಲ್ಲಿ ನಿರ್ಗಮಿತ ಪಡೆಯಿಂದ ಗೌರವ ಸ್ವೀಕರಿಸುತ್ತಿರುವುದು. ಕಣ್ಣೂರಿನ ಎಳಮಲಾದಲ್ಲಿ ನಡೆದ ತರಬೇತಿಯಲ್ಲಿ ೩೨೮ ಕೆಡೆಟ್ ಗಳಿದ್ದರು. ಅದರಲ್ಲಿ ಒಬ್ಬರು ಕೋಸ್ಟ್ ಗಾರ್ಡ್ ಮತ್ತು ಇನ್ನಿಬ್ಬರು ಓವರ ಸೀಸ್ ಕೆಡೆಟ್ ಗಳಾಗಿ ಸೇರ್ಪಡೆಯಾಗಿದ್ದಾರೆ. ಭಾರತೀಯ ನೌಕಾಪಡೆಯು ೧೯೯೧ರಿಂದ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಇದೀಗ ಕ್ಷೇತ್ರವನ್ನು ವಿಸ್ತರಿಸಲಾಗಿದೆ.

ಮೊದಲ ಬಾರಿಗೆ ಸೇರ್ಪಡೆಗೊಂಡ ಮಹಿಳಾ ಪೈಲಟ್ ಗಳು

ಮೊದಲ ಬಾರಿಗೆ ಸೇರ್ಪಡೆಗೊಂಡ ಮಹಿಳಾ ಪೈಲಟ್ ಗಳು

ಕಣ್ಣೂರಿನ ಎಳಿಮಲಾದಲ್ಲಿ ನಡೆದ ತರಬೇತಿಯಲ್ಲಿ ಆಯ್ಕೆಯಾಗಿ ಭಾರತೀಯ ನೌಕಾಪಡೆಗೆ ಮೊಟ್ಟ ಮೊದಲ ಬಾರಿಗೆ ಸೇರ್ಪಡೆಗೊಂಡ ಮಹಿಳಾ ಫೌಲಟ್ ಗಳು, ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದು ಮಹಿಳೆಯರಿಗೆ ಪೈಲಟ್ ಆಗುವ ಅವಕಾಶ ನೀಡಿದೆ.

 ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂತಸದ ಕ್ಷಣ

ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸಂತಸದ ಕ್ಷಣ

ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಶುಭಾಂಗಿಯೊಂದಿಗೆ ಅವರ ತಂದೆ ಜ್ಞಾನ ಸ್ವರೂಪ್ ಹಾಗೂ ತಾಯಿ ಕಳೆದ ಸುಂದರ ಕ್ಷಣಗಳು ಅವರೊಂದಿಗೆ ನೌಕಾಪಡೆಯ ಸಿಬ್ಬಂದಿಗಳು ಇದ್ದರು.

ರಾಜೇಶ್ ಸಾಹನಿ ಟ್ವೀಟ್

ಶುಭಾಂಗಿ ಅವರು ಮೊದಲ ಮಹಿಳಾ ಪೈಲಟ್ ಆಗಿ ನೇಮಕಗೊಂಡಿರುವುದು ಕೇವಲ ಅವರ ಪೋಷಕರಿಗೆ ಮಾತ್ರ ಹೆಮ್ಮೆಯಲ್ಲ ಇಡೀ ದೇಶವೇ ಹೆಮ್ಮೆ ಪಡೆಉವಂತಹ ವಿಚಾರ ಎಂದು ರಾಜೇಶ್ ಸಾಹನಿಯವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First time Indian Navy Women Pilot inducted on Wednesday at Ezhimala naval Indian Navala Acadamy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ