ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

Posted By:
Subscribe to Oneindia Kannada

ಆಕೆ ತಾಯಿ, ತಂಗಿ, ಅಕ್ಕ, ಗೆಳತಿ, ಪತ್ನಿ, ಸಖಿ, ಮಗಳು... ಕೆಲವೊಮ್ಮೆ ಎಲ್ಲವೂ. ಪ್ರತಿವ್ಯಕ್ತಿಯ ಬದುಕಿನಲ್ಲೂ ಅವಳದ್ದು ಅವ್ಯಕ್ತ ಪಾತ್ರ. ಅವಳಿಲ್ಲದ ಬದುಕು ಅನೂಹ್ಯ!

ಮನೆತುಂಬ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುವಾಗ ಮನೆಯ ಗೊಂಬೆಯಾಗಿ, ಮಿಠಾಯಿಗಾಗಿ ರಚ್ಚೆ ಹಿಡಿವಾಗ ಪುಟ್ಟ ಮಗುವಾಗಿ, ಚಿಕ್ಕ ವಯಸ್ಸಿನಲ್ಲೇ ಮನೆಜನರ ಮೇಲೆಲ್ಲ ತುಂಬು ಕಾಳಜಿ ತೋರುವಾಗ ಪ್ರಬುದ್ಧ ಯುವತಿಯಾಗಿ, ಸಿಗರೇಟ್ ಸೇದುವ ಅಣ್ಣನ ಕೈ ಎಳೆದು, ಕೆನ್ನೆಗೆ ಮೃದುವಾಗಿ ಹೊಡೆಯುವಾಗ ತಂಗಿಯಾಗಿ, ಓದದ ತಮ್ಮನಿಗೆ ಗದರುವ ಅಕ್ಕನಾಗಿ, ಕೈತುತ್ತು ನೀಡುವಾಗ ತಾಯಿಯಾಗಿ, ಪ್ರತಿ ಹೆಜ್ಜೆಯಲ್ಲೂ ಜೊತೆಯಾಗುವಾಗ ಮಡದಿಯಾಗಿ, ತಪ್ಪನ್ನೆಲ್ಲ ತಡೆವಾಗ ಮಾರ್ಗದರ್ಶಿಯಾಗಿ... ಅವಳ ಪಾತ್ರ ಅನಂತ, ಅನಿರ್ವಚನೀಯ!

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಅಪ್ಪ-ಅಮ್ಮನ ಬೆಚ್ಚನೆ ಮಡಿಲಲ್ಲಿ ಬಾಲ್ಯ, ಯೌವನದ ಆರಂಭವನ್ನೆಲ್ಲ ಕಳೆದು, ಕೊನೆಗೆ ಗುರುತು-ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಸಪ್ತಪದಿ ತುಳಿವ ಅವಳ ಬದುಕು ಒಂದರ್ಥದಲ್ಲಿ ಸಾಹಸವೇ. ತನ್ನೊಳಗಿನ ಮಗುತನದ ಹುಡಗಾಟವನ್ನೆಲ್ಲ ತೊರೆದು, ಪ್ರಬುದ್ಧ ಮಹಿಳೆಯ ಮುಖವಾಡ ತೊಡಬೇಕಾದ ಕಾಲ ಅದು!

Women have an incredible role in everybody's life

ಪ್ರತಿ ನಡೆಯ ಮೇಲೂ ನಿಗಾ ಇಡುವ ನಾಲ್ಕಾರು ಕಣ್ಣುಗಳ ನಡುವಲ್ಲಿ, ಹೆಜ್ಜೆ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾದ ಪರಿಸ್ಥಿತಿ. ಅಪ್ಪ-ಅಮ್ಮನ ಸ್ಥಾನವನ್ನು ಅತ್ತೆ-ಮಾವ ತುಂಬಿಯಾರು ಎಂಬ ಭರವಸೆ. ಪತಿ, ಅತ್ತೆ-ಮಾವ, ಮಗು ಎಂಬ ತನ್ನದೇ ಒಂದು ಪುಟ್ಟ ಪ್ರಪಂಚ ಕಟ್ಟಿಕೊಂಡು, ಅದರ ಸುತ್ತ ಅಕ್ಕರೆಯ ರೇಖೆ ಎಳೆವ ತವಕ!

ಹೀಗೇ ಹುಟ್ಟಿದಾಗಿನಿಂದ ಸಾಯುವ ತನಕ ಆಕೆ ವಹಿಸುವ ಪಾತ್ರಗಳು ನೂರಾರು. ಇಂದು(ಮಾ.08) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತಿ ವ್ಯಕ್ತಿಯ ಬದುಕಿನಲ್ಲೂ ಆಕೆ ವಹಿಸಿದ ಪಾತ್ರವನ್ನೊಮ್ಮೆ ಸ್ಮರಿಸಿ, ಆಕೆಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಇದು ಸಕಾಲ.

ಪ್ರತಿ ಮನೆ, ಪ್ರತಿ ಹೃದಯ, ಪ್ರತಿ ಭಾವನೆ, ಸಂತೋಷದ ಪ್ರತಿಕ್ಷಣ... ಇವೆಲ್ಲವೂ ಅವಳಿಲ್ಲದೆ ಅಪೂರ್ಣ. ಅಪೂರ್ಣವನ್ನು ಪರಿಪೂರ್ಣವಾಗಿಸಬಲ್ಲ ಎಲ್ಲ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಕನ್ನಡ ಕ್ರೈಂ ಪತ್ರಿಕೋದ್ಯಮದ ಸಾಧಕಿಯರಿವರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Women have an incredibale role in everybody's life. Life is incomplete without women. Here is a special article on International Womes day(March 8th)

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ