• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಮಂತ ಬಡಾವಣೆಯಲ್ಲಿ ಮಹಿಳೆಯ ಗ್ಯಾಂಗ್ ರೇಪ್

By Prasad
|

ಜೈಪುರ, ಸೆ. 20 : ನಿರ್ಜನ ಪ್ರದೇಶದಲ್ಲಿಯೂ ಅಲ್ಲ, ಓಡುತ್ತಿರುವ ಬಸ್ಸಿನಲ್ಲಿಯೂ ಅಲ್ಲ, ಶ್ರೀಮಂತರು ವಾಸಿಸುವ ಐಷಾರಾಮಿ ಪ್ರದೇಶದಲ್ಲಿ ಗಂಡ, ಮಾವ ಮತ್ತು ಮಕ್ಕಳೆದುರಿಗೆ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ ಈ ಮತ್ತೊಂದು ಘಟನೆ.

ವೈಶಾಲಿ ನಗರದ ಶ್ರೀಮಂತ ಬಡಾವಣೆಯಲ್ಲಿ ಕಳ್ಳತನಕ್ಕೆಂದು ಬಂದಿದ್ದ ಖದೀಮರು ಗಂಡನ ಹೊಟ್ಟೆಗೆ ಬಾರಿಬಾರಿ ಚೂರಿಯಿಂದ ಇರಿದು, ಮಾವನ ಕಟ್ಟಿಹಾಕಿ, ಮಕ್ಕಳ ಕತ್ತಿಗೆ ಚಾಕುವಿಟ್ಟು 30 ವರ್ಷದ ಗೃಹಿಣಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ನಡೆದಿದೆ.

ಘಟನೆ ನಡೆದಿರುವುದು ಬೆಳಗಿನ ಜಾವ 3.15ರ ಸುಮಾರಿಗೆ. ಅಡುಗೆಮನೆಯ ಗ್ರಿಲ್ ಮುರಿದು ಮನೆ ಪ್ರವೇಶಿಸಿರುವ ಕಳ್ಳರು, ಗಾಢವಾಗಿ ನಿದ್ರಿಸುತ್ತಿದ್ದ ನಿವೃತ್ತ ಇಂಜಿನಿಯರ್, ಮಹಿಳೆಯ ಮಾವನ ಮೇಲೆರಗಿ ತೀವ್ರವಾಗಿ ಥಳಿಸಿದ್ದಾರೆ. ಆತನನ್ನು ಕಟ್ಟಿಹಾಕಿ ದನಿಯೆತ್ತದಂತೆ ಬೆದರಿಸಿದ್ದಾರೆ.

Women gang-raped by robbers in posh locality in Jaipur

ತಾತನ ಜೊತೆಗೆ ಮಲಗಿದ್ದ ಐದು ವರ್ಷದ ಮಗುವಿಗೆ ಚಾಕು ಹಿಡಿದು ಮೇಲಿನ ಮಹಡಿಯಲ್ಲಿದ್ದ ಮಗುವಿನ ಪಾಲಕರ ಕೋಣೆಗೆ ನುಗ್ಗಿದ್ದಾರೆ. ಆಗ ಮಗುವಿನ ಅಪ್ಪಅಮ್ಮ ತಮ್ಮ ಎರಡು ವರ್ಷದ ಎರಡನೇ ಮಗುವಿನ ಜೊತೆ ಗಾಢ ನಿದ್ರೆಯಲ್ಲಿದ್ದರು. ಸದ್ದು ಕೇಳುತ್ತಿದ್ದಂತೆ ಅವರಿಗೆ ಎಚ್ಚರವಾಗಿದೆ.

ಚಿನ್ನದಂಗಡಿ ಇಟ್ಟಿರುವ ಮಹಿಳೆಯ ಗಂಡ ಪ್ರತಿಕ್ರಿಯಿಸುವ ಮೊದಲೇ ಏಳೆಂಟು ಬಾರಿ ಆತನಿಗೆ ಇರಿದಿದ್ದಾರೆ, ತಲೆಯ ಮೇಲೆ ಬಲವಾಗಿ ಹೊಡೆದ ಕಾರಣ ಅವರು ಸ್ಮೃತಿ ತಪ್ಪಿದ್ದಾರೆ. ಮಹಿಳೆ ಕಿರುಚಿಕೊಳ್ಳುವ ಮೊದಲೆ ಬಾಯಿಮುಚ್ಚಿ ಆಕೆಯನ್ನು ಮೊದಲು ಕಟ್ಟಿಹಾಕಿದ್ದಾರೆ. ನಂತರ ಲೈಟ್ ಆರಿಸಿ ಆಕೆಯನ್ನು ಬಲಾತ್ಕರಿಸಿದ್ದಾರೆ.

ಇಡೀ ಘಟನೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದಿದೆ. ಮಹಿಳೆಯ ಮಾಂಗಲ್ಯ ಕೂಡ ಬಿಡದೆ ಒಂದಿಷ್ಟು ಹಣ ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಬಂದ ಹಾದಿಯಲ್ಲೇ ಪರಾರಿಯಾಗಿದ್ದಾರೆ. ನಂತರ ಐದು ವರ್ಷದ ಮಗ ಮಹಿಳೆಯನ್ನು ಬಿಡಿಸಿದ್ದಾನೆ. ಮಹಿಳೆ ಕೂಗಿಕೊಂಡಿದ್ದು ಕೇಳಿ ಅಕ್ಕಪಕ್ಕದವರು ಬಂದು ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ.

ಈ ಬರ್ಬರ ಘಟನೆ ಇಡೀ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ. ಮನೆಯಲ್ಲಿ ಕಳ್ಳರು ಬಿಟ್ಟುಹೋಗಿದ್ದ ಕೈಗವಸು ಮತ್ತು ಶರ್ಟನ್ನು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಮಹಿಳೆಯ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು gangrape ಸುದ್ದಿಗಳುView All

English summary
A Women has been gang-raped by robbers in posh locality in Jaipur on Friday. The culprits thrashed father-in-law of woman, stabbed her husband, held her son at knife point and gang raped the woman, before decamping with valuables.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more