ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಂದ ಶನಿ ದೇವರಿಗೆ ಪೂಜೆ, ಸಂಪ್ರದಾಯ VS ಸಂವಿಧಾನ

|
Google Oneindia Kannada News

ಬೆಂಗಳೂರು, ಏಪ್ರಿಲ್, 11: ಮಹಿಳೆಯರ ದೇವಾಲಯ ಪ್ರವೇಶ ಚರ್ಚೆ ಮತ್ತೆ ಆರಂಭವಾಗಿದೆ. ಒಂದೆಡೆ ಮಹಾರಾಷ್ಟ್ರದ ಶನಿ ಸಿಂಗಣಾಪುರದಲ್ಲಿ ಮಹಿಳೆಯರು ಪೂಜೆ ಸಲ್ಲಿಕೆ ಮಾಡಿದ್ದಾರೆ. ಇನ್ನೊಂದು ಕಡೆ ಶಬರಿಮಲೆಗೆ ಪ್ರವೇಶ ಸಂಬಂಧ ಸುಪ್ರಿಂ ಕೋರ್ಟ್ ದೇವಾಲಯದ ಆಡಳಿತ ಮಂಡಳಿಯನ್ನು ಪ್ರಶ್ನೆ ಮಾಡಿದೆ.

ಮಹಿಳೆಯರ ಹೋರಾಟ ಸಂಪ್ರದಾಯ ಮತ್ತು ಕಾನೂನಿನ ನಡುವಣ ಹೋರಾಟವಾಗಿ ಬದಲಾಗುತ್ತಿದೆ. ಸಂವಿಧಾನ ಮತ್ತು ಸಂಪ್ರದಾಯದ ನಡುವಣ ಹೋರಾಟವಾಗಿ ಗೋಚರವಾಗುತ್ತಿದೆ. ಶನಿ ಸಿಂಗಣಾಪುರದಲ್ಲಿ ಮಹಿಳೆಯರಿಗೆ ಪೂಜೆ ಮಾಡಲು ಅವಕಾಶ ನೀಡಿದ ನಂತರ ಇದೀಗ ಶಬರಿಮಲೆ ಸುದ್ದಿ ಮತ್ತೆ ಮೇಲಕ್ಕೆ ಎದ್ದಿದೆ.["ಫಕೀರ ಸಾಯಿಬಾಬಾ ಪೂಜೆ ಮಾಡಿದ್ದಕ್ಕೆ ಬರಗಾಲ ಬಂತು"]

ಋತುಚಕ್ರದ ಸಮಯದಲ್ಲಿ ಮಹಿಳೆಯರು ದೇವಾಲಯ ಪ್ರವೇಶ ಮಾಡುತ್ತಾರೆ. ಅವರನ್ನು ಪರೀಕ್ಷೆ ಮಾಡಲು ಯಂತ್ರವೊಂದನ್ನು ಅಳವಡಿಕೆ ಮಾಡಬೇಕು ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಅಯ್ಯಪ್ಪಸ್ವಾಮಿ ದೇಗುಲದ ಮಂಡಳಿ ಮುಖ್ಯಸ್ಥ ಪ್ರಯಾರ್ ಗೋಪಾಲಕೃಷ್ಣನ್‌ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

ಹೋರಾಟವನ್ನು ಶಬರಿಮಲೆ ಮತ್ತು ಶನಿ ಸಿಂಗಣಾಪುರ ದೇವಾಲಯಕ್ಕೆ ಮಹಿಳೆಯರ ಪ್ರವೇಶ... ನ್ಯಾಯಾಲಯದಲ್ಲಿ ವಾದ.. ಮಹಿಳಾ ಹೋರಾಟಗಾರ್ತಿಯರ ಜಯದ ಸಂಭ್ರಮ.. ಸಂಪ್ರದಾಯವಾದಿಗಳ ಇರಿಸು-ಮುರಿಸು ಎಲ್ಲದಕ್ಕೂ ದೇವಾಲಯ ಪ್ರವೇಶದ ಪ್ರಕರಣಗಳು ಸಾಕ್ಷಿಯಾಗುತ್ತಿವೆ.

 400 ವರ್ಷಗಳ ಇತಿಹಾಸ ಕೊನೆ

400 ವರ್ಷಗಳ ಇತಿಹಾಸ ಕೊನೆ

400 ವರ್ಷಗಳ ಇತಿಹಾವಿದ್ದ ಶನಿ ಸಿಂಗಣಾಪುರ ದೇವಾಳಯಕ್ಕೆ ಅಂತಿಮವಾಗಿ ಏಪ್ರಿಲ್ 8 ರಂದು ಮಹಿಳೆಯರ ಪ್ರವೇಶಕ್ಕೆ ದೇವಾಲಯದ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿತು.

 ಮಹಿಳೆಯರಿಗೆ ಸಿಕ್ಕ ಜಯ

ಮಹಿಳೆಯರಿಗೆ ಸಿಕ್ಕ ಜಯ

ಶನಿ ಸಿಂಗಣಾಪುರ ದೇವಾಲಯ ಪ್ರವೇಶ ಮಹಿಳಾ ಹೋರಾಟಕ್ಕೆ ಸಿಕ್ಕ ಜಯ ಎಂದು ಹೋರಾಟದ ನೇತೃತ್ವ ನವಹಿಸಿದ್ದ ತೃಪ್ತಿ ದೇಸಾಯಿ ದೇವಾಲಯ ಪ್ರವೇಶದ ನಂತರ ಹೇಳಿದ್ದರು.

ಮಹಿಳೆ ಪೂಜೆ ಮಾಡಿದ್ದರು!

ಮಹಿಳೆ ಪೂಜೆ ಮಾಡಿದ್ದರು!

ಶನಿ ಸಿಂಗಣಾಪುರದಲ್ಲಿ ದೇವರಿಗೆ ಮಹಿಳೆಯೊಬ್ಬರು ಪೂಜೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಸುದ್ದಿಮಾಡಿತ್ತು. ಅಲ್ಲಿಂದಲೇ ಮಹಿಳೆಯರು ದೇವಾಲಯ ಪ್ರವೇಶದ ಹೋರಾಟವನ್ನು ಉಗ್ರವಾಗಿರಿಸಿದ್ದರು.

 ರೇಪ್ ಹೆಚ್ಚಾಗುತ್ತದೆ

ರೇಪ್ ಹೆಚ್ಚಾಗುತ್ತದೆ

ಮಹಿಳೆಯರ ಪ್ರವೇಶದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ, ಅತ್ಯಾಚಾರ ಹೆಚ್ಚಲು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಇಂಥ ಘಟನಾವಳಿಗಳು ಕಾರಣವಾಗುತ್ತವೆ ಎಂಬ ಹೇಳಿಕೆ ನೀಡಿದ್ದಾರೆ.

 ಶಬರಿಮಲೆ ಪ್ರಕರಣ

ಶಬರಿಮಲೆ ಪ್ರಕರಣ

ಶಬರಿಮಲ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ದೇವಾಲಯದ ಆವರಣದಲ್ಲಿ ಮಹಿಳೆಯರು ಮೂರ್ತಿಪೂಜೆ ಮಾಡುವುದನ್ನು ನಿಷೇಧಿಸಲು ದೇವಾಲಯದ ಆಡಳಿತ ಮಂಡಳಿಗೆ ಯಾವ ಹಕ್ಕಿದೆ ಎಂದು ಸೋಮವಾರ ಕೇಳಿದೆ.

English summary
In what could be termed as a historic move, the Shani Shingnapur Temple Trust said it will permit women to enter and pray at the open-to-sky platform shrine. This is a massive victory for the women's rights activists fighting for entry into the famous Hindu temple's sanctum in Ahmednagar, Maharashtra. After this decision the major debate starts Constitution VS Culture...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X