ಶನಿಸಿಂಗಣಾಪುರ: ಮತ್ತೆ ಆರಂಭವಾಯ್ತು ಪವಿತ್ರ-ಅಪವಿತ್ರ ಚರ್ಚೆ

Subscribe to Oneindia Kannada

ಅಹಮದ್ ನಗರ, ಜನವರಿ, 27: ಮಹಿಳೆಯರು, ದೇವರು, ಪವಿತ್ರ-ಅಪವಿತ್ರ ವಿವಾದಗಳಿಗೆ ಕೊನೆ ಇಲ್ಲದಂತಾಗಿದೆ. ಕೇರಳದ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರ ನಿಷೇಧ ವಿವಾದ ಒಂದು ತಾರ್ಕಿಕ ಅಂತ್ಯ ಕಾಣುವ ಮುನ್ನವೇ ಮಹಾರಾಷ್ಟ್ರದ ಶನಿಸಿಂಗಣಾಪುರ ಸುದ್ದಿಯಲ್ಲಿದೆ.

400 ವರ್ಷಗಳಿಗೂ ಹಿಂದಿನ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭಗುಡಿ ಮತ್ತು ಬಲಿ ಪೀಠಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದ 350 ಮಹಿಳೆಯರ ಯತ್ನಕ್ಕೆ ಪೊಲೀಸರು ತಡೆ ಹಾಕಿದ್ದಾರೆ.[ಶನಿದೇವರಿಗೆ ಪೂಜೆ ಮಾಡಿದ ಮಹಿಳೆ]

Women activists barred from entering Shani Shingnapur temple

ದೇವಾಲಯಕ್ಕೆ ಮಹಿಳೆಯರು ಆಗಮಿಸುತ್ತಿರುವ ಸುದ್ದಿ ಗೊತ್ತಾಗಿದ್ದು 70 ಕಿ.ಮೀ. ದೂರದಲ್ಲಿಯೇ ಮಹಿಳೆಯರಿಗೆ ತಡೆ ಹಾಕಲಾಗಿದೆ. ಹೆಲಿಕಾಪ್ಟರ್‌ ಮೂಲಕ ಮೇಲಿಂದ ಕೆಳಗಿಳಿದು ಪೂಜೆ ಸಲ್ಲಿಸುತ್ತೇವೆ ಎಂದು ಮಹಿಳೆಯರು ಹೇಳಿದ್ದರು.[ಸಾಡೇಸಾತಿ : ಶನಿಕಾಟಕ್ಕೆ ಸುಲಭ ಪರಿಹಾರಗಳು]

ಭೂ ಮಾತಾ ಬ್ರಿಗೇಡ್‌ ಎಂಬ ಸಂಘಟನೆ ಹೆಸರಿನಲ್ಲಿ ಅಧ್ಯಕ್ಷೆ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಆಗಮಿಸುತ್ತಿದ್ದ ಎಲ್ಲ ಮಹಿಳೆಯರನ್ನು ಪೊಲೀಸರು ಸೂಪಾ ಎಂಬಲ್ಲಿ ತಡೆದರು. ಈ ವೇಳೆ ಪ್ರತಿಭಟನೆಯೂ ನಡೆಯಿತು. ಮಹಿಳೆಯರು ಹೆದ್ದಾರಿ ತಡೆ ನಡೆಸಲು ಮುಂದಾಗಿದ್ದರು.[ಸಾಡೇಸಾತಿ : ಶನಿರಾಜನ ಪೂಜಿಸುವುದು ಹೀಗೆ]

ಕಳೆದ ನವೆಂಬರ್ ನಲ್ಲಿ ಮಹಿಳೆಯೊಬ್ಬರು ಶನಿ ಸಿಂಗಣಾಪುರ ದೇಗುಲದಲ್ಲಿ ದೇವರ ಮೂರ್ತಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಿ ತೈಲಾಭಿಷೇಕ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ದೇವಾಲಯದಲ್ಲಿ ಶುದ್ಧೀಕರಣ ಕುರಿತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾತ್ತು. ಇದು ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತಾಗಿ ಪರ-ವಿರೋಧದ ಚರ್ಚೆ ಆರಂಭವಾಗುವಂತೆ ಮಾಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Scores of women attempting to enter the premises of Shani Shingnapur were barred by the police from entering the temple's sanctum. Women have been demanding eradication of an age-old tradition that bars women's entry inside the temple. In November 2015, a woman had offered prayers at the popular shrine in 'breach' of the age-old practice of prohibiting entry of women, after which the temple committee had to suspend seven security men and the villagers to perform purification rituals.
Please Wait while comments are loading...