ಮಹಿಳೆಯ ಕೈಬೆರಳುಗಳನ್ನು ಕತ್ತರಿಸಿದ ದುರಾತ್ಮರು

woman-s-fingers-chopped-off-by-goons-in-purnea-bihar
ಪಾಟ್ನಾ, ಏಪ್ರಿಲ್ 5: ಬಿಹಾರ ರಾಜ್ಯದಲ್ಲಿ ಗೂಂಡಾಗಳು ಸಮಾಜಘಾತುಕ ಶಕ್ತಿಗಳ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ಮಹಿಳೆಯೊಬ್ಬಳು ವಾಮಾಚಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿದ ದುಷ್ಕರ್ಮಿಗಳ ತಂಡವೊಂದು 15 ದಿನಗಳ ಹಿಂದೆ ಮಧ್ಯ ವಯಸ್ಸಿನ ಬಡಮಹಿಳೆಯ 4 ಕೈ ಬೆರಳುಗಳನ್ನು ಅಮಾನುಷವಾಗಿ ಕತ್ತರಿಸಿ ಹಾಕಿದ ಘಟನೆ ಪುರ್ನಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದ್ದು, ಈ ಹಿಂದೆಯೂ ಈ ರೀತಿಯ ಪ್ರಕರಣಗಳು ನಡೆದಿವೆ ಎಂದು ತಿಳಿದುಬಂದಿದೆ.

ಆದರೆ, ಇಷ್ಟೆಲ್ಲ ನಡೆದಿದ್ದರೂ ಪೊಲೀಸರು ಮಾತ್ರ ಇದುವರೆಗೂ ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಸ್ವತಃ ಬಾಧಿತ ಮಹಿಳೆಯೇ ದೂರು ದಾಖಲಿಸಿದ್ದು, ಘಟನೆ ನಡೆದು 15 ದಿನಗಳಾದರೂ ಪೊಲೀಸರು ಇನ್ನೂ ದುಷ್ಕರ್ಮಿಗಳನ್ನು ಹಿಡಿದಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಿನ್ನೆ ಶುಕ್ರವಾರ ಸದರಿ ಮಹಿಳೆ ಮತ್ತೆ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣ ಏನಾಯ್ತು? ದುಷ್ಕರ್ಮಿಗಳು ಪತ್ತೆಯಾದರಾ? ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ಬಾಧಿತ ಮಹಿಳೆಯನ್ನು ಠಾಣೆಯಿಂದ ಓಡಿಸಿದ್ದು, ಚುನಾವಣಾ ಸಮಯವಾದ್ದರಿಂದ ನಿನ್ನ ಪ್ರಕರಣದ ಬೆನ್ನು ಹತ್ತಲು ತಮಗೆ ಪುರುಸೊತ್ತಿಲ್ಲ ಎಂದು ಗದರಿಸಿ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+