ಆಟದ ಮೈದಾನದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿಯ ಕರುಣಾಜನಕ ಕತೆ!

Posted By:
Subscribe to Oneindia Kannada

ಜಾಸ್ಫುರ್(ಛತ್ತೀಸ್ ಗಢ), ಆಗಸ್ಟ್ 21: ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಿದ್ದರಿಂದ ಮಹಿಳೆಯೊಬ್ಬರು ಮೈದಾನದಲ್ಲೇ ಶಿಶುವಿಗೆ ಜನ್ಮ ನೀಡಿದ ಘಟನೆ ಛತ್ತೀಸ್ ಗಢದ ಜಾಸ್ಪುರ್ ಎಂಬಲ್ಲಿ ನಡೆದಿದೆ.

ಜೋಲಿಯಲ್ಲೇ ಪ್ರಸವ: ಒಡಿಶಾ ಮಹಿಳೆಯ ಹೀನಾಯ ಸ್ಥಿತಿ ಇದು!

24x7 ಸೇವೆ ನೀಡುತ್ತೇವೆಂದು ಕೇವಲ ಬೋರ್ಡ್ ಹಾಕಿಕೊಂಡಿರುವ ಆಸ್ಪತ್ರೆಗಳ ನೈಜ ಕತೆ ಏನೆಂಬುದು ಈ ಘಟನೆಯಿಂದ ಅರ್ಥವಾಗುತ್ತದೆ. ಇಂದು(ಆಗಸ್ಟ್ 21) ಬೆಳಿಗ್ಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಂದಿದ್ದಾರೆ.

Woman gives birth to a baby at playground in Chhattisgarh

ಆದರೆ ಆರೋಗ್ಯ ಕೇಂದ್ರ ಬಾಗಿಲು ಮುಚ್ಚಿದ್ದರಿಂದ ಒಂದು ಗಂಟೆಯವರೆಗೆ ಕಾದಿದ್ದಾರೆ. ಆದರೂ ಆಸ್ಪತ್ರೆಯ ಬಾಗಿಲು ತೆಗೆಯಲು ಯಾರೊಬ್ಬರೂ ಬಂದಿಲ್ಲ. ಈ ನಡುವೆ ಆಗಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಸಕೊಳ್ಳುತ್ತಿದ್ದರಿಂದ 102, 108 ತುರ್ತು ಸೇವಾ ನಂಬರ್ ಗಳಿಗೂ ಕರೆಮಾಡಿದ್ದಾರೆ. ಆದರೆ ಈ ಎರಡೂ ನಂಬರ್ ಗಳಲ್ಲೂ ನಿರಂತರವಾಗಿ "ಬ್ಯುಸಿ" ಟೋನ್ ಕೇಳಿಸಿದೆ.

ಹೆರಿಗೆ ನೋವು ಅಸಹನೀಯವೆನ್ನಿಸಿದಾಗ ಪಕ್ಕದ ಆಟದ ಮೈದಾನದಲ್ಲೇ ಮಹಿಳೆ ಒದ್ದಾಡಿ, ನಂತರ ಮಗುವಿಗೆ ಜನ್ಮ ನೀಡಿದ್ದಾರೆ.

ಬೆಳಿಗ್ಗೆಯಿಂದ ಆಸ್ಪತ್ರೆ ತೆರೆದೇ ಇದೆ. ಮಹಿಳೆಯ ಕಡೆಯವರು ಮಾಡುತ್ತಿರುವ ಆರೋಪ ಸುಳ್ಳು ಎಂದು ಆಸ್ಪತ್ರೆ ಆಡಳಿತ ಮಂಡಳಿ ಆರೋಪವನ್ನು ತಳ್ಳಿಹಾಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pregnant woman gave birth to a child at a playground on August 21st as the Primary Health Center in the Ghughri village of Chhattisgarh's Jashpur district was shut when she reached there for institutional delivery.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ