ಪ್ರೀತಿಗಾಗಿ ಲಿಂಗವನ್ನೇ ಬದಲಿಸಿಕೊಂಡವಳಿಗೆ ಕೈಕೊಟ್ಟ ಹುಡುಗಿ!

ಉತ್ತರಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪರಸ್ಪರ ಮೆಚ್ಚಿ ಒಟ್ಟಿಗೆ ವಾಸಿಸುತ್ತಿದ್ದ ಸೋನಾಲ್ ಮತ್ತು ಸನಾ ಎಂಬ ಹುಡುಗಿಯರ ಅಪರೂಪದ ಕಥೆ ಇದು.

ಉತ್ತರಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಬ್ಬರು ಹುಡುಗಿಯರು ಪರಸ್ಪರ ಮೆಚ್ಚಿಕೊಂಡು ಮದುವೆಯಾಗಲು ನಿರ್ಧರಿಸಿ ಇಬ್ಬರಲ್ಲಿ ಒಂದು ಹುಡುಗಿ ಹುಡುಗ ಆಗಿದ್ದಾಳೆ. ಉತ್ತರ ಪ್ರದೇಶದ ಝಾನ್ಸಿಯ ಕುಟುಂಬವೊಂದು ಪೇಯಿಂಗ್ ಗೆಸ್ಟ್‌ ಆಗಿ ಬಂದವಳಿಗೆ ತಮ್ಮ ಮನೆ ನೀಡಿದಾಗ ಈ ಘಟನೆ ನಡೆದಿದೆ. ಸೋನಾಲ್ ಮತ್ತು ಸನಾ ಇಬ್ಬರು ಸದ್ಯ ಮೆಚ್ಚಿ ಮದುವೆಯಾಗಿದ್ದಾರೆ.

ಸೋನಾಲ್ ತನ್ನ ಹೆತ್ತವರೊಂದಿಗೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಾಸವಾಗಿದ್ದಳು. ಸನಾ ಪೇಯಿಂಗ್ ಇವರ ಮನೆಯಲ್ಲಿ ಗೆಸ್ಟ್ ಆಗಿ ಉಳಿದುಕೊಂಡಿದ್ದರು. ಅದೇ ಮನೆಯ ಮೇಲಿನ ಮಹಡಿಯಲ್ಲಿ ಸನಾ ತಂಗಿದ್ದಳು. ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಾಲ್ಕು ತಿಂಗಳೊಳಗೆ ಪ್ರೇಮಿಗಳಾದರು. ಆದರೆ ಸೋನಾಲ್ ಕುಟುಂಬ ಇವರ ಪ್ರೀತಿಯನ್ನು ಒಪ್ಪಲಿಲ್ಲ. ಜೊತೆಗೆ ಸನಾ ಅವರಿಗೆ ಮನೆ ಬಿಟ್ಟು ಹೋಗುವಂತೆ ಹೇಳಿದರು.

ಮನೆಯಲ್ಲಿ ಗೆಸ್ಟ್ ಆಗಿ ಬಂದಳು ಪ್ರೀತಿಯಲ್ಲಿ ಬಿದ್ದಳು

ಮನೆಯಲ್ಲಿ ಗೆಸ್ಟ್ ಆಗಿ ಬಂದಳು ಪ್ರೀತಿಯಲ್ಲಿ ಬಿದ್ದಳು

ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದ ಸನಾ ಅವರನ್ನು 2016 ರಲ್ಲಿ ಝಾನ್ಸಿಗೆ ನೇಮಿಸಲಾಯಿತು. ಒಂದು ವರ್ಷದ ನಂತರ ಆಕೆಗೆ ಸರ್ಕಾರಿ ಕ್ವಾರ್ಟರ್ ಅನ್ನು ಮಂಜೂರು ಮಾಡಲಾಯಿತು. ಅವರು ಸೋನಾಲ್ ಅವರ ಮನೆಯಿಂದ ಹೊರಹೋಗಲು ನಿರ್ಧರಿಸಿದಳು. ಸನಾ ಆಗಸ್ಟ್ 10, 2017 ರಂದು ತಮ್ಮ ಸರ್ಕಾರಿ ಕ್ವಾರ್ಟರ್‌ಗೆ ತೆರಳಿದರು. ಸನಾ ಹೊರಗೆ ಹೋದ ನಾಲ್ಕು ದಿನಗಳ ನಂತರ, ಸೋನಾಲ್ ಕೂಡ ಸನಾ ಜೊತೆ ವಾಸಿಸಲು ನಿರ್ಧರಿಸಿದರು.

ಸನಾ ಸೋನಾಲ್‌ಗಾಗಿ ಸೋಹೇಲ್ ಖಾನ್ ಆದಳು

ಸನಾ ಸೋನಾಲ್‌ಗಾಗಿ ಸೋಹೇಲ್ ಖಾನ್ ಆದಳು

ಸಮಯ ಕಳೆದಂತೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೋನಾಲ್ ಸನಾಗೆ ಮನವರಿಕೆ ಮಾಡಿದರು. ಬಳಿಕ ಅವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ವೈದ್ಯರು ಸನಾಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಸನಾ ಶಸ್ತ್ರಚಿಕಿತ್ಸೆಗೆ ಫಿಟ್ ಎಂದು ಘೋಷಿಸಿದರು. ಜೂನ್ 22, 2020 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಬಳಿಕ ಸನಾ ಅವರು ಅಧಿಕೃತವಾಗಿ ತನ್ನ ಹೆಸರನ್ನು ಸೊಹೈಲ್ ಖಾನ್ ಎಂದು ಬದಲಾಯಿಸಿಕೊಂಡರು. ತನ್ನ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸೋನಾಲ್ ಎಲ್ಲಾ ವೈದ್ಯಕೀಯ ದಾಖಲೆಗಳಿಗೆ ಸೊಹೈಲ್ ಖಾನ್ ಅವರ 'ಪತ್ನಿ' ಎಂದು ಸಹಿ ಹಾಕಿದ್ದಾರೆ ಎಂದು ಸನಾ ಹೇಳಿಕೊಂಡಿದ್ದಾರೆ.

ಪ್ರೀತಿಗೆ ಕೈಕೊಟ್ಟು ಎಸ್ಕೇಪ್

ಪ್ರೀತಿಗೆ ಕೈಕೊಟ್ಟು ಎಸ್ಕೇಪ್

ಸನಾ ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದರು. 2022ರಲ್ಲಿ ಸೋನಾಲ್ ಆಸ್ಪತ್ರೆಯಲ್ಲಿ ಕೆಲಸ ಪಡೆದರು. ಸೋನಾಲ್ ನಡವಳಿಕೆಯಲ್ಲಿ ಸನಾ ಬದಲಾವಣೆಯನ್ನು ಗಮನಿಸಿದರು.

ಸನಾ ಅವರ ಪ್ರಕಾರ, ಸೋನಾಲ್ ಅವಳನ್ನು ಕಡೆಗಣಿಸಲು ಪ್ರಾರಂಭಿಸಿದ್ದರು. ಜೊತೆಗೆ ಅವರು ತಮ್ಮ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದರು. ಇದು ಅವರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಯಿತು. ತನ್ನ ಕುಟುಂಬವನ್ನು ಕಳೆದುಕೊಂಡಿದ್ದೇನೆ ಎಂದು ಸೋನಾಲ್ ಅಳುತ್ತಿರುವುದನ್ನು ಸನಾ ನೋಡಿದಳು. ಗುಂಪು ಕರೆಯಲ್ಲಿ ಸೋನಾಲ್ ಮಾತನಾಡುವುದನ್ನು ಸನಾ ಕೇಳಿಸಿಕೊಂಡಿದ್ದಳು. ಅದೇ ಆಸ್ಪತ್ರೆಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಜ್ಞಾನ್‌ ಎಂಬ ವ್ಯಕ್ತಿಯೊಂದಿಗೆ ಸೋನಾಲ್‌ನ ಸಂಬಂಧವನ್ನು ಹೊಂದಿರುವುದು ಸನಾಗೆ ತಿಳಿಯಿತು. ಇದನ್ನು ಪ್ರಶ್ನೆ ಮಾಡಿದಾಗ ಸೋನಾಲ್ ಅವರು ಜ್ಞಾನ್ ಜೊತೆ ಬದುಕಲು ಬಯಸುವುದಾಗಿ ಹೇಳಿದರು.

ಸನಾ ವಿರುದ್ಧ ಅತ್ಯಾಚಾರ, ಅಪಹರಣ ಆರೋಪ

ಸನಾ ವಿರುದ್ಧ ಅತ್ಯಾಚಾರ, ಅಪಹರಣ ಆರೋಪ

ಸೋನಲ್ ಪೊಲೀಸರನ್ನು ಸಂಪರ್ಕಿಸಿದರು, ಸನಾ ನ್ಯಾಯಾಲಯವನ್ನು ಸಂಪರ್ಕಿಸಿದರು. ಸೋನಾಲ್ ಸನಾಳನ್ನು ತೊರೆದು ಮನೆಗೆ ಮರಳಿದ್ದಾರೆ. ಆಕೆ ಮತ್ತು ಆಕೆಯ ಕುಟುಂಬದವರು ಸನಾ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕಿರುಕುಳದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸನಾ ಪೊಲೀಸರ ಮುಂದೆ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ನಂತರ ಸೋನಾಲ್ ಅವರನ್ನು ವಿಚಾರಣೆಗೆ ಕರೆಸಲಾಯಿತು.

ವಿಷಯಗಳು ತನ್ನ ಪರವಾಗಿ ನಡೆಯದೇ ಇದ್ದಾಗ ಸನಾ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವು ಬಾರಿ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಸೋನಾಲ್ ಅವರನ್ನು ಜನವರಿ 18 ರಂದು ಪೊಲೀಸರು ಬಂಧಿಸಿದ್ದರು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ, ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+