ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಮಗನ ಕೊಲೆ ಆರೋಪಕ್ಕಾಗಿ ತಾಯಿಗೆ ಬಹಿಷ್ಕಾರದ ಶಿಕ್ಷೆ

|
Google Oneindia Kannada News

ಲಲಿತ್ಪುರ(ಉತ್ತರ ಪ್ರದೇಶ), ನವೆಂಬರ್ 29: ಪುತ್ರನನ್ನು ಕೊಲೆ ಮಾಡಿದ್ದಾಳೆ ಎಮಬ ಆರೋಪದ ಮೇಲೆ ತಾಯಿ ಮತ್ತವರ ಕುಟುಂಬಕ್ಕೆ ಊರಿನಿಂದಲೇ ಬಹಿಷ್ಕಾರ ಹಾಕಿದ ಘಟನೆ ಉತ್ತರ ಪ್ರದೇಶದ ಲಲಿತ್ಪುರ ಎಂಬಲ್ಲಿ ನಡೆದಿದೆ.

ಕೊಪ್ಪಳದಲ್ಲಿ 4 ಲಂಬಾಣಿ ಕುಟುಂಬಗಳಿಗೆ ಬಹಿಷ್ಕಾರ ಕೊಪ್ಪಳದಲ್ಲಿ 4 ಲಂಬಾಣಿ ಕುಟುಂಬಗಳಿಗೆ ಬಹಿಷ್ಕಾರ

ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರ ಪುತ್ರ ಮನೆಯ ಬಳಿಯ ಮರವೊಂದಕ್ಕೆ ನೇಣುಬಿಗಿದುಕೊಂಡು ಸಾವಿಗೀಡಾಗಿದ್ದ. ಈ ಕುರಿತಂತೆ ಪಂಚಾಯತಿ ಮಾಡಿದಾಗ ಊರಿನಲ್ಲಿರುವ ಕೆಲವು ಗೂಂಡಾಗಳು ತನ್ನ ಮಗನನ್ನು ದ್ವೇಷಿಸುತ್ತಿದ್ದರು, ಅವರೇ ನನ್ನ ಮಗನನ್ನು ಸಾಯಿಸಿ, ಕೊನೆಗೆ ನೇಣಿಗೇರಿಸಿದ್ದಾರೆ ಎಂದು ತಾಯಿ ಮತ್ತು ಆಕೆಯ ಕುಟುಂಬಸ್ಥರು ಪಂಚಾಯಿತಿಯಲ್ಲಿ ಹೇಳಿದ್ದರು.

Woman, accused of son's murder, boycotted from village

ಆದರೆ ಪ್ರಭಾವಿಗಳಾಗಿದ್ದ ಗೂಂಡಾಗಳು ಈ ಆರೋಪವನ್ನು ಮೃತನ ತಾಯಿಯ ಮೇಲೇ ಹೊರೆಸಿ, ಅವರನ್ನು ಊರಿನಿಂದ ಬಹಿಷ್ಕಾರ ಹಾಕುವಂತೆ ಪಂಚಾಯತಿಯನ್ನು ಒತ್ತಾಯಿಸಿದ್ದರು. ಉಳ್ಳವರ ಪರವೇ ನ್ಯಾಯ ಎಂಬ ತತ್ತ್ವವನ್ನು ಪಾಲಿಸಿದ ಪಂಚಾಯತಿ, ತಾಯಿ ಮತ್ತು ಆಕೆಯ ಕುಟುಂಬಸ್ಥರ ತಲೆಯನ್ನು ಬೋಳಿಸಿ, ಊರಿಂದ ಬಹಿಷ್ಕಾರ ಹಾಕಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡುವುದಕ್ಕೆ ಹೋದರೂ, ಈ ಕುಟುಂಬದ ದೂರನ್ನು ದಾಖಲಿಸಿಕೊಳ್ಳದೆ, ಪಂಚಾಯತಿಯ ತೀರ್ಮಾನವೇ ಅಂತಿಮ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಬೇರೆ ದಾರಿ ಕಾಣದ ಈ ಕುಟುಂಬ ಊರಿಂದ ಹೊರನಡೆದಿದೆ.

English summary
A woman, in Uttar Pradesh's Lalitpur, accused by the village Panchayat of killing her own son, was boycotted from the village. Also, her head was shaved, along with those of her family members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X