ಭಾನುವಾರ ರಜೆ ಬೇಡ: ವಾರಕ್ಕೆ 70 ಗಂಟೆ ಅಲ್ಲ 90 ಗಂಟೆ ಕೆಲಸ ಮಾಡಿ, ಹೆಂಡ್ತಿ ಮುಖ ಎಷ್ಟು ನೋಡ್ತಿರಾ!: ಖ್ಯಾತ ಉದ್ಯಮಿ
ಬೆಂಗಳೂರು, ಜನವರಿ 10: ಓಡುತ್ತಿರುವ ಜಗತ್ತಿನ ಜೊತೆಗೆ ಸ್ಪರ್ಧೆ ಒಡ್ಡಲು ಯುವಕರು ವಾರದಲ್ಲಿ 70 ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಬೆನ್ನಲ್ಲೆ 90 ಗಂಟೆ ಕೆಲಸ ಮಾಡಬೇಕು. ವಾರದಲ್ಲಿ ಭಾನುವಾರವು ಕೆಲಸದಲ್ಲಿ ತೊಡಗಬೇಕು. ಎಷ್ಟು ಅಂತ ಮನೇಲಿ ಹೆಂಡತಿ ಮುಖ ನೋಡ್ತಿರಾ, ಕೆಲಸದಲ್ಲಿ ನಿರತಾಗಿ ಎಂದು ಮತ್ತೊಬ್ಬ ಪ್ರತಿಷ್ಠಿತ ಉದ್ಯಮಿಯ ಹೇಳಿಕೆ ನೀಡಿದ್ದು, ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿವೆ.
ವಾರದಲ್ಲಿ ಭಾನುವಾರವು ರಜೆ ಇರುತ್ತದೆ. ಅಂದು ಸಹ ಉದ್ಯೋಗಿಗಳು ಕಚೇರಿ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಎಲ್ ಆಂಡ್ ಟೀ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರು ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ರೆಡಿಟ್‌ನಲ್ಲಿ ವೈರಲ್ ಆಗುತ್ತಿದೆ. ಅದರೆ ಇದು ಯಾವಾಗ ಹೇಳಿರುವುದು ಎಂಬುದರ ಸ್ಪಷ್ಟ ದಿನಾಂಕ ಇಲ್ಲದಾಗಿದೆ. ಅವರ 90 ಗಂಟೆಗಳ ಹೇಳಿಕೆ ಬಗ್ಗೆ ಎಲ್ಲೆಡೆ ಸುದ್ದಿ ಆಗಿದೆ.

ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಯುವ ಉದ್ಯೋಗಿಗಳು ವಾರದಲ್ಲಿ 70 ಗಂಟೆಗೆ ಕೆಲಸ ಮಾಡಲು ಕರೆ ನೀಡಿದ್ದರು. ಈ ಹೇಳಿಕೆ ಇನ್ನೂ ಚರ್ಚೆಯಲ್ಲಿರುವಾಗಲೇ ಎಲ್&ಟಿ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು. ಭಾನುವಾರ ರಜೆ ಇರುವ ಕಾರಣ ಅಂದು ನಿಮ್ಮಿಂದ ಕೆಲಸ ಆಗದೇ ಇರುವುದಕ್ಕೆ ನಮಗೆ ಬೇಸರವಿದೆ ಎಂದು ಕಂಪನಿ ಒಳಗೆ ನಡೆದಿದ್ದ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಹರಿದಾಡುತ್ತಿದೆ.
ನೌಕರರು ಭಾನುವಾರವು ಕೆಲಸದಲ್ಲಿ ಭಾಗಿ ಆಗದ ವಿಚಾರಕ್ಕೆ ನನಗೆ ಬೇಸರವಿದೆ. ಒಂದು ವೇಳೆ ಭಾನುವಾರವು ನೀವೆಲ್ಲರು ಕೆಲಸದಲ್ಲಿ ತೊಡಗಿಕೊಂಡಲ್ಲಿ ನನಗೆ ಹೆಚ್ಚಿನ ಖುಷಿ ನೀಡುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ನಾನು ಸಹ ಭಾನುವಾರವು ಕೆಲಸ ಮಾಡುತ್ತೇನೆ. ಹಾಗೆಯೇ ನಿಮ್ಮನ್ನು (ಉದ್ಯೋಗಿಗಳು) ಭಾನುವಾರ ಕೆಲಸದಲ್ಲಿ ತೊಡಗಿಸಿದರೆ ನಾನು ಹೆಚ್ಚು ಖುಷಿ ಪಡುತ್ತೇನೆ ಎಂದು ಹೇಳಿದ್ದಾರೆ.
ನೀವು ಭಾನುವಾರ ಬಂತೆಂದರೆ ರಜೆ ಪಡೆದು ಎಷ್ಟು ಎಂದು ಹೆಂಡತಿ ಮುಖ ನೋಡಿಕೊಂಡು ಕೂರುತ್ತೀರಿ. ಹೆಂಡತಿಯಾದರೂ ಎಷ್ಟು ಹೊತ್ತು ಗಂಡನ ಮುಖ ನೋಡುತ್ತಾ ಕೂರಬಲ್ಲಳು. ಒಬ್ಬರಿಗೊಬ್ಬರು ರಜೆ ದಿನ ಎಷ್ಟು ಹೊತ್ತು ಮುಖ ನೋಡುತ್ತಾ ಕುಳಿತಿರುತ್ತಾರೆ? ಅದರ ಬದಲು ಕಚೇರಿಗೆ ಬಂದು ಕೆಲಸ ಮಾಬಹುದಲ್ಲವೇ ಎಂದು ಭಾನುವಾರವು ರಜೆ ಬಿಟ್ಟು ಕೆಲಸ ಮಾಡುವಂತೆ ಒಟ್ಟು ಸ90 ಗಂಟೆಗಳ ಕೆಲಸ ಮಾಡುವಂತೆ ಅವರು ಕರೆ ನೀಡಿದ್ದಾರೆ.
ಭಾರತದಂತೆ ಜನಸಂಖ್ಯೆ ಹೆಚ್ಚಿರುವ ಚೀನಾ ದೇಶದಲ್ಲಿ ವಾರದಲ್ಲಿ 90 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿಯೇ ಆದೇಶ ಮುಂದೆ ಇದೆ ಎಂದು ತಮ್ಮ ಹೇಳಿಕೆಗೆ ಚೀನಾ ವ್ಯಕ್ತಿಯೊಬ್ಬರು ಅಭಿಪ್ರಾಯವನ್ನು ತಿಳಿಸಿ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
ಜಗತ್ತಿನಲ್ಲಿ ನಮ್ಮ ಕಂಪನಿ ಅಗ್ರಸ್ಥಾನದಲ್ಲಿರಬೇಕಾದರೆ ಚೀನಾದವರಂತೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು. ಅಮೆರಿಕ ನೌಕರರು ವಾರದಲ್ಲಿ ಕೇವಲ 50 ಗಂಟೆ ಮಾತ್ರವೇ ಕಾರ್ಯ ಮಾಡುತ್ತಾರೆ. ಆದರೆ ನೀವು ಭಾನುವಾರವು ಕೆಲಸ ಮಾಡಿ ಎಂದು ಅವರು ಕರೆ ನೀಡಿದ್ದಾರೆ.
70 ಗಂಟೆ ಕೆಲಸದ ಹೇಳಿಕೆ ಟ್ರೋಲ್
ದೇಶದ ಮೂಲಸೌಕರ್ಯ, ಕೈಗಾರಿಕೆ, ತಾಂತ್ರಿಕ ವಲಯದಲ್ಲಿ ಕಾರ್ಯ ನಿರ್ವಹಿಸುವ ದೈತ್ಯ ಕಂಪನಿಯೊಬ್ಬರ ಅಧ್ಯಕ್ಷರ ಹೇಳಿಕೆ ಭಾರಿ ಚರ್ಚೆ ಹುಟ್ಟು ಹಾಕಿದೆ. ಇನ್ನೂ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ತಮ್ಮ 70 ಗಂಟೆ ಹೇಳಿಕೆಯನ್ನು ಇತ್ತೀಚೆಗೆ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೆ ಮೈಸೂರು ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಎರಡು ಬಾರಿ ಚಿರತೆ ಪ್ರತ್ಯೆಕ್ಷವಾಗಿದೆ. ಇದನ್ನು 70 ಗಂಟೆ ಕೆಲಸದಲ್ಲಿ ತೊಡಗಿಸಲಾಗಿದೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ.












Click it and Unblock the Notifications