• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಗಾರು ಕೇರಳ ಪ್ರವೇಶಕ್ಕೆ 2 ದಿನ ಬಾಕಿ, ಎಲ್ಲೆಲ್ಲಿ ಹೆಚ್ಚು ಮಳೆ ಸಾಧ್ಯತೆ

|

ತಿರುವನಂತಪುರಂ, ಜೂನ್ 4: ಮುಂಗಾರು ಕೇರಳವನ್ನು ಪ್ರವೇಶಿಸಲು ಇನ್ನು ಎರಡೇ ದಿನ ಬಾಕಿ ಇದೆ.

ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೂನ್ 6ರಂದು ಅಧಿಕೃತವಾಗಿ ಮುಂಗಾರಿನ ಪ್ರವೇಶವಾಗಲಿದೆ.ಮೊದಲು ಜೂನ್ 1ರಂದೇ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

ಮಳೆಯ ಆರ್ಭಟ: ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಹಾನಿ?

ಕೇರಳಕ್ಕೆ 6ರಂದೇ ಮುಂಗಾರು ಪ್ರವೇಶಿಸಲಿದ್ದು, ನಂತರ ಎರಡು ವಾರಗಳಲ್ಲಿ ಒಡಿಶಾ ತೀರ ಪ್ರದೇಶವನ್ನು ತಲುಪುವ ಸಾಧ್ಯತೆ ಇದೆ. ರಾಜಸ್ಥಾನದ ಚುರು ಪಟ್ಟಣದಲ್ಲಿ 50.8 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಎಲ್ಲೆಲ್ಲಿ ಹೆಚ್ಚು ಮಳೆ ಸಾಧ್ಯತೆ?

ಎಲ್ಲೆಲ್ಲಿ ಹೆಚ್ಚು ಮಳೆ ಸಾಧ್ಯತೆ?

ಜೂನ್ 8ರ ಬಳಿಕ ಪೂರ್ವ ಭಾರತ, ಈಶಾನ್ಯ ಭಾರತ, ಅಂಡಮಾನ್ ನಿಕೋಬಾರ್ ದ್ವೀಪಗಳು ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಲಿದೆ.

ಬಂಗಾಳ, ಒಡಿಶಾ, ಕರ್ನಾಟಕ, ಕೇರಳ, ಹಿಮಾಲಯ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಚಂಡಮಾರುತ ಚಲನವಲಗಳು

ಚಂಡಮಾರುತ ಚಲನವಲಗಳು

ಈಗಾಗಲೇ ಚಂಡಮಾರುತ ಚಲನವಲನಗಳು ಲಕ್ಷದ್ವೀಪದಲ್ಲಿ ಆರಂಭವಾಗಿದೆ.ಅರೇಬಿಯನ್ ಸಮುದ್ರ ದ ಮೂಲಕ ಕೇರಳವನ್ನು ಶೀಘ್ರ ಪ್ರವೇಶಿಸಲಿದೆ. ಪ್ರತಿ ಸೈಕ್ಲೋನ್ ಮೊದಲು ವರ್ಷವೂ ಓಮನ್, ಯೆಮೆನ್ ಕೋಸ್ಟ್‌ ಪ್ರವೇಶಿಸುತ್ತಿತ್ತು ಆದರೆ ಈ ಬಾರಿ ನೇರವಾಗಿ ಕೇರಳವನ್ನೇ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದಲ್ಲಿ 65 ವರ್ಷಗಳಲ್ಲೇ ಈ ಬಾರಿ ಎರಡನೆಯ ಅತಿ ಕನಿಷ್ಠ ಮಳೆ

ಶ್ರೀಲಂಕಾದ ಹವಾಮಾನ ಇಲಾಖೆ ಏನು ಹೇಳುತ್ತೆ?

ಶ್ರೀಲಂಕಾದ ಹವಾಮಾನ ಇಲಾಖೆ ಏನು ಹೇಳುತ್ತೆ?

ಶ್ರೀಲಂಕಾದ ಹವಾಮಾನ ಇಲಾಖೆ ಹೇಳುವ ಪ್ರಕಾರ ನೈಋತ್ಯ ಮುಂಗಾರು 14ದಿನ ತಡವಾಗಿದೆ. ಸಾಮಾನ್ಯವಾಗಿ ಮುಂಗಾರು ಶ್ರೀಲಂಕಾದಿಂದ ಕೇರಳ ಪ್ರವೇಶಿಸಲು ಒಂದು ವಾರಗಳೇ ತಗುಲುತ್ತದೆ. ಆದರೆ ಈ ಬಾರಿ ಅಷ್ಟು ಸಮಯ ಬೇಡ ಎಂದು ಹೇಳಿದೆ.

ಎಲ್ಲಿ ಎಷ್ಟು ಮಳೆ ಸಾಧ್ಯತೆ

ಎಲ್ಲಿ ಎಷ್ಟು ಮಳೆ ಸಾಧ್ಯತೆ

ಸಬರಗಮುವಾ, ಕೇಂದ್ರ, ಗಲ್ಲೆ,ಮತಾಟಾ ಜಿಲ್ಲೆಯಲ್ಲಿ ಇಂದು ಸಂಜೆ 10 ಸೆಂ.ಮೀನಷ್ಟು ಮಳೆಯಾಗುವ ಸಾಧ್ಯತೆ ಇದೆ. ಗಾಳಿಯು ಒಂದು ಗಂಟೆಗೆ 50 ಕಿ.ಮೀ ವೇಗದಲ್ಲಿ ಬೀಸುತ್ತಿದೆ.

ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು

English summary
Within 48 hours Monsoon will reach kerala and another 2 days will reach Karnataka also.which is 'slightly delayed' than the normal date of June 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X