Get Updates
Get notified of breaking news, exclusive insights, and must-see stories!

Parliament's Winter Session 2022: ದೆಹಲಿಯ ಸಂಸತ್ ಹಳೆ ಕಟ್ಟಡದಲ್ಲೇ ಚಳಿಗಾಲ ಅಧಿವೇಶನ

ನವದೆಹಲಿ, ನವೆಂಬರ್ 11: ನವದೆಹಲಿಯ ಸಂಸತ್ ಹಳೆಯ ಕಟ್ಟಡದಲ್ಲೇ ಚಳಿಗಾಲ ಅಧಿವೇಶನ ಪ್ರಾರಂಭವಾಗುವ ಸಾಧ್ಯತೆಯಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ತಿಂಗಳಾಂತ್ಯದ ವೇಳೆ ಕಲಾಪ ಅಂತ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ದಿನಾಂಕಗಳ ಕುರಿತು ಅಂತಿಮವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದರ ಮಧ್ಯೆ, 1,200 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸಲು ಸರ್ಕಾರವು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಚಳಿಗಾಲ ಅಧಿವೇಶನವು ನವೆಂಬರ್ ಮೂರನೇ ವಾರದಿಂದ ಸುಮಾರು 20 ದಿನಗಳವರೆಗೂ ನಡೆಯುತ್ತದೆ. ಆದರೆ ಕಳೆದ 2017 ಮತ್ತು 2018ರ ಅವಧಿಯಲ್ಲಿ ಚಳಿಗಾಲ ಅಧಿವೇಶನವನ್ನು ಡಿಸೆಂಬರ್‌ನಲ್ಲಿ ನಡೆಸಲಾಗಿತ್ತು. ಅದೇ ರೀತಿ ಈ ಬಾರಿ ಡಿಸೆಂಬರ್ ಮೊದಲ ವಾರದಲ್ಲಿ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Winter Session Likely To Begin In Old Parliament Building From Dec First Week: Report

ಹೊಸ ಸಂಸತ್ ಕಟ್ಟಡ ಪೂರ್ಣಗೊಂಡಿಲ್ಲ:

2022ರ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೂ ಪೂರ್ವದಲ್ಲಿ ಹೊಸ ಸಂಸತ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರವು ಇಟ್ಟುಕೊಂಡಿತ್ತು. ಆದರೆ ಅಂದುಕೊಂಡಂತೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಲವು ನಿರ್ಮಾಣ ಕಾಮಗಾರಿಗಳು ಇನ್ನೂ ಬಾಕಿ ಇರುವುದರ ಹಿನ್ನೆಲೆ ಹಳೆ ಕಟ್ಟಡದಲ್ಲಿ ಚಳಿಗಾಲ ಅಧಿವೇಶನ ನಡೆಸುವುದಕ್ಕೆ ನಿರ್ಧರಿಸುವ ನಿರೀಕ್ಷೆಯಿದೆ.

ಸಂಸತ್ತಿನ ಹೊಸ ಕಟ್ಟಡವು ಸಂಪೂರ್ಣವಾಗಿ ನಿರ್ಮಾಣಗೊಂಡ ನಂತರವೂ, ಆ ಕಟ್ಟಡದಲ್ಲಿ ಸಂಸದರಿಗೆ ಎಲ್ಲಾ ನೆರವು ನೀಡಲು ಮತ್ತು ಸಿಬ್ಬಂದಿಗೆ ಕಟ್ಟಡದ ಪರಿಚಯ ಹಾಗೂ ತರಬೇತಿ ನೀಡಲು ಸುಮಾರು 15 ರಿಂದ 20 ದಿನಗಳೇ ಬೇಕಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ಹಳೆ ಕಟ್ಟಡದಲ್ಲಿ ಚಳಿಗಾಲ ಅಧಿವೇಶನಕ್ಕೆ ತಯಾರಿ:

ಮುಂದಿನ 2023ರ ಬಜೆಟ್ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ಚಳಿಗಾಲದ ಅಧಿವೇಶನಕ್ಕಾಗಿ ಹಳೆಯ ಕಟ್ಟಡದಲ್ಲಿ ಈಗಾಗಲೇ ವ್ಯವಸ್ಥೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 1,500ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಮತ್ತು ಹಳೆ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+