ಕಾಶ್ಮೀರ ಪ್ರತ್ಯೇಕತಾವಾದಿಗೆ ಚುರುಕು ಮುಟ್ಟಿಸಿದ ಗಂಭೀರ್

ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2017ರ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ಸಾಧಿಸಿರುವುದನ್ನು ಹುರಿಯತ್ ಮುಖಂಡರು ಹೊಗಳಿದ್ದಾರೆ.

ನವದೆಹಲಿ, ಜೂನ್ 19: ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2017ರ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ಸಾಧಿಸಿರುವುದನ್ನು ಹುರಿಯತ್ ಮುಖಂಡರು ಹೊಗಳಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಶುಭಾಶಯ ಕೋರಿದ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಮಿರ್ ವೈಜ್ ಫರೂಖ್ ಅವರ ಟ್ವೀಟ್ ಬಗ್ಗೆ ಗೌತಮ್ ಗಂಭೀರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಭ್ರಮಾಚರಣೆ ಮಾಡಬೇಕಾದರೆ ಗಡಿ ದಾಟಿ ಆ ಕಡೆ ಹೋಗಿ, ಪ್ಯಾಕಿಂಗ್ ಮಾಡಲು ನಾನು ನೆರವಾಗುವೆ ಎಂದಿದ್ದಾರೆ.

Will help you pack, Gambhir tells separatist Mirwaiz who cheered Pak win

ನೀವೇಕೆ ಬಾರ್ಡರ್‌ ದಾಟುತ್ತಿಲ್ಲ? ಇಲ್ಲಿಗಿಂತ ಅಲ್ಲಿ ಚೆನ್ನಾಗಿ ಪಟಾಕಿ ಸಿಡಿಸಬಹುದು (ಚೈನೀಸ್‌?), ಜೊತೆಗೆ ಇಲ್ಲಿಗಿಂತ ಚೆನ್ನಾಗಿ ಈದ್‌ ಆಚರಿಸಬಹುದು. ಬೇಕಾದ್ರೆ ನಿಮ್ಮ ಲಗೇಜ್‌ ಪ್ಯಾಕ್ ಮಾಡಲು ನಾನು ನೆರವು ನೀಡ್ತೀನಿ' ಎಂದು ಗಂಭೀರ್‌ ಟ್ವೀಟ್ ಮಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಪಾಕಿಸ್ತಾನ ತಂಡವು ಫೈನಲ್ ತಲುಪಿದ್ದ ಸಂದರ್ಭದಲ್ಲೂ ಮಿರ್ ವೈಜ್ ಫರೂಖ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದರು. ಮಿರ್ ವೈಜ್ ಅವರ ಟ್ವೀಟ್ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ರಾಷ್ಟ್ರವಿರೋಧಿ ನಡೆ ಎಂದು ರಾಜಕೀಯ ವಲಯದಲ್ಲಿ ಕೂಗು ಕೇಳಿ ಬಂದಿತ್ತು.

ಮಿಕ್ಕಂತೆ ಉತ್ತರಪ್ರದೇಶದ ಕಾನ್ಪುರ್, ಉತ್ತರಾಖಂಡ್ ನ ಹರಿದ್ವಾರ, ಬೆಂಗಳೂರಿನ ನೆಲಮಂಗಲ ಮುಂತಾದೆಡೆ ಕೆಲ ಹುಚ್ಚು ಕ್ರಿಕೆಟ್ ಅಭಿಮಾನಿಗಳು, ಟೀಂ ಇಂಡಿಯಾ ಸೋತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಟಿವಿ ಸೆಟ್ ಗಳನ್ನು ಒಡೆದು ಹಾಕಿರುವ ಘಟನೆ ನಡೆದಿದೆ.


ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವನ್ನು 180ರನ್ ಗಳಿಂದ ಸೋಲಿಸಿದ ಪಾಕಿಸ್ತಾನ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದ ಸಂಭ್ರಮದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+