ಮಹಿಳೆಯರಿಗೆ ಶಬರಿಮಲೆ ಪ್ರವೇಶ ಸದ್ಯದಲ್ಲೇ ಮುಕ್ತ?

Subscribe to Oneindia Kannada

ನವದೆಹಲಿ, ಏಪ್ರಿಲ್, 19: ಮಹಿಳೆಯರಿಗೆ ದೇವಾಲಯ ಪ್ರವೇಶ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಲು ಮುಂದಾಗಿದೆ. ಒಂದೆಡೆ ಮಹಾರಾಷ್ಟ್ರದ ಶನಿ ಸಿಂಗಣಾಪುರದಲ್ಲಿ ಮಹಿಳೆಯರಿಂದ ಪೂಜೆಗೆ ಅವಕಾಶವನ್ನು ನೀಡಲಾಗಿದೆ.

ಇದೀಗ ಶಬರಿಮಲೆಯ ಸರದಿ. ಶಬರಿಮಲೆ ದೇವಾಲಯದಲ್ಲಿ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಾಡುವುದನ್ನು ಧಾರ್ಮಿಕ ವ್ಯವಹಾರಗಳ ನಿರ್ವಹಣೆ ಅಧಿಕಾರ ಎಂದು ದೇವಾಲಯ ವಾದ ಮುಂದೆ ಇಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

Will balance right to equality, religious practice: Supreme Court

ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾ. ವಿ. ಗೋಪಾಲ ಗೌಡ ಮತ್ತು ಕುರಿಯನ್‌ ಜೋಸೆಫ್ ಅವರಿದ್ದ ಪೀಠ, ಸಂವಿಧಾನ ಮತ್ತು ಸಂಪ್ರದಾಯದ ನಡುವಣದ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದೆ.[ಮಹಿಳೆಯರಿಂದ ಶನಿ ದೇವರಿಗೆ ಪೂಜೆ, ಸಂಪ್ರದಾಯ VS ಸಂವಿಧಾನ]

ಸ್ತ್ರೀಯರ ನಿಸರ್ಗದತ್ತ ಪ್ರಕ್ರಿಯೆ ಬಗ್ಗೆ ಗೊಂದಲಕಾರಿಯಾಗಿ ಮಾತನಾಡಿದ್ದ ಕೇರಳದ ಅಯ್ಯಪ್ಪಸ್ವಾಮಿ ದೇಗುಲದ ಮಂಡಳಿ ಮುಖ್ಯಸ್ಥ ಪ್ರಯಾರ್ ಗೋಪಾಲಕೃಷ್ಣನ್‌ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ಮಹಿಳೆಯರು ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು. ಇದಕ್ಕೆ ಒಂದು ಯಂತ್ರ ಮೀಸಲಿಟ್ಟರೂ ತಪ್ಪಿಲ್ಲ ಎಂದು ನೀಡಿದ್ದ ಹೇಳಿಕೆ ಮಹಿಳೆಯರನ್ನು ಕೆರಳಿಸಿತ್ತು. ಸಾಮಾಜಿಕ ತಾಣದಲ್ಲಿ ಆಂದೋಲನವೇ ಆರಂಭವಾಗಿತ್ತು. ಅದಾದ ಮೇಲೆ ಪ್ರವೇಶ ನಿಷೇಧ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲು ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Sabarimala temple, located in the Periyar Tiger Reserve in the Western Ghat mountain ranges of Pathanamthitta District of Kerala, is renowned for lakhs of pilgrims thronging it all through the year. The Supreme Court said that it would balance the right to equality with the right to freedom of religion and to manage religious affairs under the constitution while examining the plea against ban on entry of women aged 10 to 50 years into Kerala's Sabarimala temple.
Please Wait while comments are loading...