ಗಬ್ಬರ್ ಸಿಂಗ್ ಟ್ಯಾಕ್ಸ್ 'ಹೆರಿಗೆ' ನೋವಿಗೆ ದನಿಯಾದರೆ ರಾಹುಲ್ ಗಾಂಧಿ?

Posted By:
Subscribe to Oneindia Kannada

ದೇಶದ ಸಾರ್ವಜನಿಕರಿಗೆ ಮಣಭಾರವಾಗಿ ಪರಿಣಮಿಸಿದ್ದ ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) ಗಣನೀಯ ಬದಲಾವಣೆ ಮಾಡಿ ಕೇಂದ್ರ ಸರಕಾರ, ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇದಕ್ಕೆ ಕಾರಣವಾದ ಅಂಶಗಳು ಯಾವುದು?

ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಉದ್ದೇಶವೋ, ಗುಜರಾತ್ ಚುನಾವಣೆಯೋ ಅಥವಾ ರಾಹುಲ್ ಗಾಂಧಿಯೋ? ಯಾರೇ ಇರಲಿ, ಒಟ್ಟಿನಲ್ಲಿ ಜನರ ತೆರಿಗೆ ಬೇನೆಗೆ ಸ್ಪಂದಿಸಿದ ಇವರು ಅಭಿನಂದನೆಗೆ ಅರ್ಹರು. ಅದು ಮೋದಿಯೇ ಆಗಿರಲಿ, ರಾಹುಲ್ ಗಾಂಧಿಯೇ ಆಗಿರಲಿ.

ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ

ಕಳೆದ ಸುಮಾರು ಒಂದು ತಿಂಗಳಿನಿಂದ ಗಮನಿಸುವುದಾದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವರ್ಕಿಂಗ್ ಸ್ಟೈಲ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ, ರಾಜಕೀಯವಾಗಿ ಪ್ರಬುದ್ದತೆಯನ್ನು ಅವರಲ್ಲಿ ಕಾಣಬಹುದಾಗಿದೆ. ಅವರ ಭಾಷಣಗಳಲ್ಲಿ ಹೋಂ ವರ್ಕ ಮಾಡಿಕೊಂಡು ಬರುತ್ತಿರುವುದನ್ನೂ ನೋಡಬಹುದಾಗಿದೆ.

ಜಿಎಸ್ಟಿಯನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಲೇವಡಿ ಮಾಡಿದ್ದ ರಾಹುಲ್, ಶುಕ್ರವಾರದ (ನ 10) ತೆರಿಗೆ ಇಳಿಯ ನಿರ್ಧಾರದ ನಂತರ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, GST ಇಳಿಕೆಗೆ ನಮ್ಮ ಹೋರಾಟವೇ ಕಾರಣ ಎನ್ನುವ ರೀತಿಯಲ್ಲಿ ಬಿಂಬಿಸಲಾರಂಭಿಸಿದ್ದಾರೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಜಿಎಸ್ಟಿಯಲ್ಲಿ ಇಳಿಕೆ ಪ್ರಕಟಿಸುತ್ತಿದ್ದಂತೇ, 'ನಿಮ್ಮ ಅಸಮರ್ಥತತೆಯನ್ನು ಒಪ್ಪಿಕೊಂಡು, ಸೊಕ್ಕನ್ನು ಕಮ್ಮಿ ಮಾಡಿಕೊಳ್ಳಿ' ಎಂದು ರಾಹುಲ್ ಗಾಂಧಿ ಮಾಡಿರುವ ಟ್ವೀಟಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದೇಶದ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸಲು ಬಿಡುವುದಿಲ್ಲ

ದೇಶದ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸಲು ಬಿಡುವುದಿಲ್ಲ

ದೇಶದ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಲೇ ಬರುತ್ತಿದ್ದ ಕಾಂಗ್ರೆಸ್ ಮುಖಂಡರು, ಈಗ ನಾವು ಜನರ ಪರವಾಗಿ ಮಾಡಿದ ಹೋರಾಟಕ್ಕೆ ಕೇಂದ್ರ ಸರಕಾರ ತಲೆಬಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. #RahulGSTimpact ಹ್ಯಾಷ್ ಟ್ಯಾಗ್ ಕೂಡಾ ಟ್ರೆಂಡಿಂಗ್ ನಲ್ಲಿದೆ.

ದೇಶದ ನಾಗರೀಕರ ಕೂಗಿಗೆ ಧ್ವನಿಯಾಗಿ ಎಂದು ರಾಹುಲ್ ಸಲಹೆ

ಅರುಣ್ ಜೇಟ್ಲಿಯವರನ್ನು ಸಂಭೋದಿಸುತ್ತಾ ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಜಿಎಸ್ಟಿಯಲ್ಲಿರುವ ಮೂಲಭೂತ ನ್ಯೂನತೆಗಳನ್ನು ಸರಿಪಡಿಸಿ ದೇಶಕ್ಕೆ ಒಂದು ಸರಳ ತೆರಿಗೆ ಪದ್ದತಿಯನ್ನು ಜಾರಿಗೆ ತನ್ನಿ. ದೇಶದ ಅಮೂಲ್ಯ ಸಮಯವನ್ನು ನಿಮ್ಮ ಮಾತಿನಿಂದ ಹಾಳು ಮಾಡಬೇಡಿ, ನಿಮ್ಮ ಅಸಮರ್ಥತತೆಯನ್ನು ಒಪ್ಪಿಕೊಂಡು, ಸೊಕ್ಕನ್ನು ಬದಿಗಿಟ್ಟು, ದೇಶದ ನಾಗರೀಕರ ಕೂಗಿಗೆ ಧ್ವನಿಯಾಗಿ ಎಂದು ರಾಹುಲ್ ಸಲಹೆ ನೀಡಿದ್ದಾರೆ.

ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು

ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು

ಜೇಟ್ಲಿ ಜಿಎಸ್ಟಿ ತೆರಿಗೆ ಇಳಿಕೆ ಪ್ರಕಟಣೆ ಹೊರಡಿಸುವ ಸ್ವಲ್ಪಹೊತ್ತಿಗೆ ಮುನ್ನ, " ಗಬ್ಬರ್ ಸಿಂಗ್ ಟ್ಯಾಕ್ಸ್ ಹೇರಲು ನಾವು ಬಿಡುವುದಿಲ್ಲ. ಜಿಎಸ್ಟಿ ಅನ್ನೋದು "Genuine Simple Tax" ಆಗಿರಲಿ. ನಿಮ್ಮ ತೆರಿಗೆ ಪದ್ದತಿಯಿಂದ ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು ನಷ್ಟ ಅನುಭವಿಸುವುದನ್ನು ನೋಡಲು ನಾನು ತಯಾರಿಲ್ಲ' ಎಂದು ರಾಹುಲ್ ಹೇಳಿದ್ದರು.

ಮೂರುದಿನದ ಗುಜರಾತ್ ಪ್ರವಾಸದಲ್ಲಿರುವ ರಾಹುಲ್

ಮೂರುದಿನದ ಗುಜರಾತ್ ಪ್ರವಾಸದಲ್ಲಿರುವ ರಾಹುಲ್

ಜಿಎಸ್ಟಿ ಸಂಬಂಧ ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಟ್ವೀಟ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿನಿಂದ (ನ11) ಮತ್ತೆ ಮೂರುದಿನದ ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಚುನಾವಣಾ ಈ ಹೊಸ್ತಿಲಲ್ಲಿ, ಕಾಂಗ್ರೆಸ್ ಪಕ್ಷದ ಹೋರಾಟದಿಂದಲೇ ಜಿಎಸ್ಟಿ ಇಳಿಕೆಯಾಯಿತು ಎಂದು ಮೈಲೇಜ್ ತೆಗೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಯಾರು ಎಷ್ಟೇ ಅವಮಾನಿಸಿದರೂ, ಜಿಎಸ್ಟಿ ಇಳಿಕೆಗೆ ರಾಹುಲ್ ಕಾರಣ

ಯಾರು ಎಷ್ಟೇ ಅವಮಾನಿಸಿದರೂ, ಜಿಎಸ್ಟಿ ಇಳಿಕೆಗೆ ರಾಹುಲ್ ಕಾರಣ

ಈ ಭಾರೀ ಟ್ಯಾಕ್ಸ್ ಪದ್ದತಿಯನ್ನು ರಾಹುಲ್ ಗಾಂಧಿ ಮೊದಲಿನಿಂದಲೂ ಪ್ರತಿಭಟಿಸುತ್ತಲೇ ಬರುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಯಾರು ಎಷ್ಟೇ ಅವಮಾನಿಸಿದರೂ, ಜಿಎಸ್ಟಿ ಇಳಿಕೆಗೆ ಕಾರಣ... ಹೀಗೆ, ರಾಹುಲ್ ಬೆಂಬಲಿಸುವ ಟ್ವೀಟುಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After four months of Goods and Service Tax (GST) implementation, Union government announced biggest change in the GST slabs. Will AICC Vice President Rahul Gandhi take credit of cut in GST?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ