ನಾಗಾಲ್ಯಾಂಡ್ ಕಣಿವೆಯಲ್ಲಿ ಕಾಡ್ಗಿಚ್ಚು; ಕೇಂದ್ರದ ನೆರವು ಯಾಚಿಸಿದ ಸಿಎಂ
ಕೊಹಿಮಾ, ಜನವರಿ 01: ನಾಗಾಲ್ಯಾಂಡ್ ಪ್ರಸಿದ್ಧ ಕಣಿವೆ, ಪ್ರವಾಸಿ ತಾಣ ಜುಕೋವ್ ಕಣಿವೆಯಲ್ಲಿ ಮೂರು ದಿನಗಳ ಹಿಂದೆ ಉಂಟಾಗಿರುವ ಕಾಡ್ಗಿಚ್ಚು ಅತಿ ವೇಗವಾಗಿ ವ್ಯಾಪಿಸುತ್ತಿದ್ದು, ಮಣಿಪುರದ ಅರಣ್ಯ ಪ್ರದೇಶಕ್ಕೂ ತಗುಲಿದೆ.
ಮಂಗಳವಾರ ಜುಕೋವ್ ಕಣಿವೆಯಲ್ಲಿ ಡಿ.29ರಂದು ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ದಿನೇ ದಿನೇ ಬೆಂಕಿಯ ವ್ಯಾಪ್ತಿ ಹೆಚ್ಚುತ್ತಿದೆ. ಗುರುವಾರ ಮಣಿಪುರದ ಸೇನಾಪತಿ ಪ್ರದೇಶದ ಅರಣ್ಯಕ್ಕೂ ಕಾಡ್ಗಿಚ್ಚು ಹಬ್ಬಿದ್ದು, ಮಣಿಪುರದ ಸಿಎಂ ಕೇಂದ್ರದಿಂದ ನೆರವು ಯಾಚಿಸಿದ್ದಾರೆ.
ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!
ಕಾಡ್ಗಿಚ್ಚು ಹಬ್ಬುತ್ತಿದ್ದಂತೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಣಿಪುರ ಹಾಗೂ ನಾಗಾಲ್ಯಾಂಡ್ ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಗುರುವಾರವಷ್ಟೇ ಸಿಎಂ ಬಿರೇನ್ ಸಿಂಗ್ ಸೇನಾಪತಿ ಜಿಲ್ಲೆಯ ಜುಕೋವ್ ಕಣಿವೆ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಆದರೆ ಪರಿಸ್ಥಿತಿ ಕೈ ಮೀರುತ್ತಿದ್ದು, ಎನ್ ಡಿಆರ್ ಎಫ್ ಹಾಗೂ ಸೇನಾ ಪಡೆಗಳನ್ನು ಕಳುಹಿಸಿಕೊಡುವಂತೆ ಮಣಿಪುರ ಸಿಎಂ ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.
ಕಾಡ್ಗಿಚ್ಚು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿ, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.