ಪತಿಯ ಕಿಡ್ನಿ ಮಾರಿದ ಹಣದೊಂದಿಗೆ ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆ
ಇತ್ತೀಚಿನ ದಿನಗಳಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಪ್ರೀತಿ ಮಾಡಿ ಮದುವೆಯಾದವರಲ್ಲಿ ಕೆಲವರು ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡಿಕೊಂಡು ಕೊಲೆ ಹಂತಕ್ಕೂ ಹೋಗಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಇದಕ್ಕೂ ಮಿಗಿಲಾಗಿ ಶಾಕಿಂಗ್ ಘಟನೆಯೊಂದು ಪಶ್ಛಿಮ ಬಂಗಾಳದಲ್ಲಿ ನಡೆದಿದೆ.
ಪತ್ನಿಯೊಬ್ಬಳು 10,00,000 ರೂಪಾಯಿಗಾಗಿ ತನ್ನ ಗಂಡನ ಕಿಡ್ನಿಯನ್ನ ಒತ್ತಾಯದಿಂದ ಮಾರಿಸಿ, ಅದೇ ಹಣ ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಈ ಶಾಕಿಂಗ್ ಘಟನೆ ಹೌರಾ ಜಿಲ್ಲೆಯ ಸಂಕ್ರೈಲ್ನಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಇನ್ನು ಪತ್ನಿಯ ಕಾಟ ತಾಳಲಾರದೆ ಆತ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಇದರಿಂದ ತನ್ನ ಮನೆಯ ಹಣಕಾಸಿನ ಸಮಸ್ಯೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿಕೆ ಇಟ್ಟಿದ್ದ. ಆದರೆ, ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ವಿವಾಹ ಮಾಡಬೇಕೆಂದುಕೊಂಡಿದ್ದ.
ಮತ್ತೊಂದೆಡೆ ಪತಿ ತನ್ನ ಕಿಡ್ನಿ ಮಾರಿ ಮನೆತನ ಬಡತನ ನಿರ್ಮೂಲನೆ ಆಗಬಹುದೆಂದು ಕನಸು ಕಾಣುತ್ತಿದ್ದ. ಆದರೆ ಅವನ ಪತ್ನಿ ಅದೇ ಹಣವನ್ನು ತೆಗೆದುಕೊಂಡು ಪೇಂಟ್ ಮಾರುತ್ತಿದ್ದ ರವಿ ದಾಸ್ ಎಂಬುವವನ ಜೊತೆ ಪ್ರೇಮಾಂಕುರದಲ್ಲಿ ಮುಳುಗಿ ಹೋಗಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದಂತಹ 10,00,000 ರೂಪಾಯಿ ಹಣವನ್ನು ನಂಬಿಕೆಯಿಟ್ಟು ಪತ್ನಿಯ ಕೈಗೆ ಕೊಟ್ಟಿದ್ದ. ಆದರೆ, ಆಕೆ ರವಿದಾಸ್ ಜೊತೆ ಅದೇ ಹಣದೊಂದಿಗೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ.
ಕೊನೆಗೆ ಪತ್ನಿಯ ನಿಜಬಣ್ಣ ಬಯಲಾದ ಬಳಿಕ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಕೊನೆಗೆ ಪತ್ನಿ ರವಿದಾಸ್ ಜೊತೆ ಇರುವ ಸುದ್ದಿ ತಿಳಿದಾಗ ಆ ಜೋಡಿಯಿದ್ದ ಮನೆಗೆ ಹೋಗಿ ತನ್ನ 10 ವರ್ಷದ ಮಗಳನ್ನು ಕರೆದುಕೊಂಡು ಬರಬೇಕೆಂದು ಹೋಗಿದ್ದಾನೆ. ಆದರೆ ಆತನ ಪತ್ನಿ ಮತ್ತು ರವಿದಾಸ್ ಬಾಗಿಲನ್ನೇ ತೆಗೆದಿಲ್ಲ. ನೀ ಏನು ಬೇಕಾದರೂ ಮಾಡಿಕೋ ನಾನು ನಿನಗೆ ಡಿವೋರ್ಸ್ ಲೆಟರ್ ಕಳುಹಿಸುತ್ತೇನೆ ಎಂದು ಹೇಳಿ ಮನೆಯಿಂದ ಆಚೆ ಒಂದು ಹೆಜ್ಜೆಯನ್ನು ಇಡದೇ ಆತನಿಗೆ ಆವಾಜ್ ಹಾಕಿದ್ದಾರೆ.
ಮತ್ತೊಂದೆಡೆ ವೈದ್ಯರು ಕೂಡಲೇ ಆತನಿಗೆ ಕಿಡ್ನಿಯನ್ನು ನೀಡುವಂತೆ ಹೇಳಿದ್ದಾರೆ. 1994ರಲ್ಲಿಯೇ ಭಾರತದಲ್ಲಿ ಮಾನವ ಅಂಗಗಳ ವ್ಯಾಪಾರವನ್ನು ನಿಷೇಧ ಮಾಡಲಾಗಿದೆ. ಆದರೂ ಕೂಡ ವೈದ್ಯರು ಕಿಡ್ನಿ ನೀಡಬೇಕು, ಕಸಿಗಾಗಿ ರೋಗಿ ಮತ್ತು ಆತನ ಮನೆಯವರು ಕಾಯುತ್ತಿದ್ದಾರೆ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications