ಸಾರ್ವಜನಿಕ ಸ್ಥಳದ ಪುಕ್ಕಟೆ ವೈಫೈ ಬಳಸದಂತೆ ಎಚ್ಚರಿಕೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಕಂಪ್ಯೂಟರ್ ಸುರಕ್ಷತೆ ವಿಚಾರದಲ್ಲಿ ಪದೇ ಪದೇ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸೈಬರ್ ರಕ್ಷಣಾ ವಿಭಾಗವು, "ಸಾರ್ವಜನಿಕವಾಗಿ ಪುಕ್ಕಟೆ ದೊರೆಯುವ ವೈಫೈ ಬಳಸಬೇಡಿ" ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಸೈಬರ್ ಕ್ರೈಂನಲ್ಲಿ ಬೆಂಗಳೂರು ದೇಶಕ್ಕೇ ನಂಬರ್ ಒನ್

ಹ್ಯಾಕರ್ ಗಳು ವೈಫೈ ಪುಕ್ಕಟೆ ಸಿಗುವ ಪ್ರದೇಶಗಳಲ್ಲಿದ್ದು, ಪಾಸ್ ವರ್ಡ್ ಗಳನ್ನು ಕದಿಯಬಹುದು ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳಿಗೆ ಕನ್ನ ಹಾಕಬಹುದು. ಅದರಲ್ಲೂ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚು ಎಂಬ ಎಚ್ಚರಿಕೆ ನೀಡಲಾಗಿದೆ.

Wifi

ತಾಂತ್ರಿಕ ವಿಧಾನಗಳನ್ನು ಬಳಸುವ ಹ್ಯಾಕರ್ ಗಳು ಬಹಳ ಸಲೀಸಾಗಿ ಮಾಹಿತಿಗಳನ್ನು ಕದಿಯುತ್ತಾರೆ. ಆದ್ದರಿಂದ ವೈರ್ ಬಳಸಿದ ಅಂತರ್ಜಾಲ ಬಳಕೆ ಬಹಳ ಸುರಕ್ಷಿತ. ಏಕೆಂದರೆ ಅದರಿಂದ ಇಂಟರ್ ನೆಟ್ ಬಳಕೆಯ ದಟ್ಟಣೆಯನ್ನು ಗಮನಿಸಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಪುಕ್ಕಟೆ ಸಿಗುವ ಸಾರ್ವಜನಿಕ ಸ್ಥಳದಲ್ಲಿನ ವೈಫೈ ಬಳಸಬಾರದು ಎಂಬ ಸಲಹೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following a series of computer security incidents in recent days India’s cyber security agency has advised people to avoid Wi-Fi in public.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ