ತಲ್ವಾರ್ ದಂಪತಿ ಖುಲಾಸೆಗೊಳ್ಳಲು ಕಾರಣವಾದ ಅಂಶಗಳೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಅಕ್ಟೋಬರ್ 12: ವಿದ್ಯಾರ್ಥಿನಿ ಆರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರುಷಿ ಅಪ್ಪ-ಅಮ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಅಲಹಾಬಾದ್ ಹೈಕೋರ್ಟ್​ ಗುರುವಾರದಂದು ಆರುಷಿ ತಂದೆ ತಾಯಿಯನ್ನು ಕೇಸಿನಿಂದ ಖುಲಾಸೆಗೊಳಿಸಿದೆ.

ಆರುಷಿ ಹಾಗೂ ಹೇಮರಾಜ್ ಕೊಲೆ ಮಾಡಿದ ಆರೋಪದಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರುಷಿ ತಂದೆ ರಾಜೇಶ್ ತಲ್ವಾರ್​ ಹಾಗೂ ತಾಯಿ ನೂಪುರ್ ತಲ್ವಾರ್ ಅವರನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಆರುಷಿ-ಹೇಮರಾಜ್ ಡಬ್ಬಲ್ ಮರ್ಡರ್ ಟೈಮ್ ಲೈನ್

ಸಿಬಿಐ ರಾಜೇಶ್​ ಮತ್ತು ನೂಪುರ್​ ದಂಪತಿಯೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಅಲಹಾಬಾದ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಕೆ. ನಾರಾಯಣ್ ಹಾಗೂ ಎ.ಕೆ. ಮಿಶ್ರಾ ನೇತೃತ್ವದ ಪೀಠ ಸಿಬಿಐ ಕೋರ್ಟ್​ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.

ಆರುಷಿಯನ್ನು ಆಕೆ ಪೋಷಕರು ಕೊಂದಿಲ್ಲ: ಕೋರ್ಟ್

ಮೇ 16, 2008ರಂದು ಜಲವಾಯು ವಿಹಾರದಲ್ಲಿರೋ ಆರುಷಿಗಳ ನಿವಾಸದಲ್ಲಿ ಮೇಲ್ಮಹಡಿಯಲ್ಲಿ ಆರುಷಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ಮನೆಗೆಲಸದಾಳು ಹೇಮರಾಜ್ ಮೇಲೆ ಸಂಶಯ ಮೂಡಿತ್ತು.

2013: ಆರುಷಿ ಹತ್ಯೆ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ

ಆರುಷಿ ಕೊಲೆಯಾದ ಮರುದಿನವೇ ಹೇಮರಾಜ್ ಶವವೂ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು. 2013ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ರಾಜೇಶ್ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಅವಳಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಇಲ್ಲ

ಅವಳಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಇಲ್ಲ

ಅವಳಿ ಕೊಲೆ ಪ್ರಕರಣದಲ್ಲಿ 'ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬಾರದು.ಈ ತೀರ್ಪಿನ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ನೂಪುರ್ ಪರ ವಕೀಲರು ಮಾಡಿದ ವಾದವನ್ನು ಅಲಹಾಬಾದ್ ಹೈಕೋರ್ಟ್ ಪುರಸ್ಕರ್ಇಸಿತು.

ಸಿಬಿಐ ವಾದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ

ಸಿಬಿಐ ವಾದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ

2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದಾರೆ ಎಂಬ ವಾದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ. ಸಾಂದರ್ಭಿಕ ಸಾಕ್ಷಿಗಳ ಮೇಲೆ ಆರೋಪ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದೆ.

ಅಪರೂಪದಲ್ಲಿ ಅಪರೂಪದ ಪ್ರಕರಣ

ಅಪರೂಪದಲ್ಲಿ ಅಪರೂಪದ ಪ್ರಕರಣ

ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬ ಲೇಬಲ್ ಕಳಚುವಂತೆ ನೋಡಿಕೊಳ್ಳುವುದು ವಕೀಲರ ಸವಾಲಾಗಿತ್ತು.ಇದು ಪೂರ್ವನಿಯೋಜಿತ ಕೊಲೆಯಲ್ಲ, ಇದು ಅಮಾನುಷ ಹತ್ಯೆ ಅಲ್ಲ ಎಂದು ಸಿಬಿಐ ತಂಡವೇ ಹೇಳಿಕೆ ನೀಡಿತ್ತು.

ಸಂಶಯದ ಲಾಭ ತಲ್ವಾರ್ ದಂಪತಿಗೆ ಸಿಕ್ಕಿದೆ

ಸಂಶಯದ ಲಾಭ ತಲ್ವಾರ್ ದಂಪತಿಗೆ ಸಿಕ್ಕಿದೆ

ಘಟನೆ ನಡೆದ ದಿನದಂದು ರಾಜೇಶ್ ಇದ್ದ ಪರಿಸ್ಥಿತಿ ಕುಡಿದಿದ್ದರೆ ಇಲ್ಲವೇ ಎಂಬುದರ ಬಗ್ಗೆ ಸಾಕ್ಷಿ ಸಿಕ್ಕಿಲ್ಲ. ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸಿ ಎಂದು ಮನವಿ ಸಲ್ಲಿಸಿರುವ ಸಿಬಿಐ ತನ್ನ ವಾದ ಪುಷ್ಟಿಕರಿಸಲು ಸೂಕ್ತ ಸಾಕ್ಷಿ ಒದಗಿಸುವಲ್ಲಿ ವಿಫಲವಾಗಿತ್ತು. ಸಂಶಯದ ಲಾಭ ತಲ್ವಾರ್ ದಂಪತಿಗೆ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Allahabad High Court on Thursday acquitted Dr Rajesh and Nupur Talwar in the Aaarushi-Hemraj murder case. The judge made five important points while acquitting the Talwars in the double murder case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ