ಏಪ್ರಿಲ್ 4ರ ಚಂದ್ರಗ್ರಹಣದ ಭಿನ್ನತೆಯೇನು?

ನವದೆಹಲಿ, ಏ. 2: ಏಪ್ರಿಲ್ 4, ಶನಿವಾರ ಚಂದ್ರಗ್ರಹಣ ಸಂಭವಿಸಲಿದ್ದು ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಚಂದ್ರ ಗ್ರಹಣ ವೀಕ್ಷಿಸಬಹುದಾಗಿದೆ. ಅಲ್ಲದೇ ಪ್ರಪಂಚದ ಅರ್ಧ ಭಾಗದಲ್ಲಿ ಚಂದ್ರಗ್ರಹಣ ನೋಡಬಹುದಾಗಿದೆ.

ಆದರೆ ಚಂದ್ರ ಗ್ರಹಣ ವೀಕ್ಷಿಸಲು ವಿಳಂಬ ಮಾಡಿವಂತಿಲ್ಲ. ಯಾಕೆಂದರೆ ಈ ಚಂದ್ರಗ್ರಹಣ ಶತಮಾನದ ಅತ್ಯಂತ ವೇಗದ ಗ್ರಹಣ ಎಂದು ಕರೆಸಿಕೊಳ್ಳುತ್ತಿದೆ. ಕೇವಲ 5 ನಿಮಿಷದ ಅವಧಿಯಲ್ಲಿ ಗ್ರಹಣ ಸಂಪೂರ್ಣವಾಗಿ ಬಿಡಲಿದೆ. ಅಲ್ಲದೇ ಸೂರ್ಯಾಸ್ತದ ಸಮಯವಾದ್ದರಿಂದ ಚಂದ್ರ ಹೊಂಬಣ್ಣದಲ್ಲಿ ಗೋಚರಿಸಲಿದ್ದಾನೆ.[2015ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ]

lunar

ಪೂರ್ವ ಉತ್ತರ ಅಮೆರಿಕ ಮತ್ತು ಪಶ್ಚಿಮ ದಕ್ಷಿಣ ಅಮೇರಿಕಾ. ಏಷ್ಯಾ, ಆಸ್ಟ್ರೇಲಿಯಾ, ಮತ್ತು ನ್ಯೂಜಿಲೆಂಡ್ ನಲ್ಲಿ ಸೂರ್ಯಾಸ್ತದ ನಂತರ ಗ್ರಹಣ ವೀಕ್ಷಿಸಲು ಸಾಧ್ಯವಾಗುತ್ತದೆ. ಯುರೋಪ್, ಆಫ್ರಿಕಾ ಭಾಗದಲ್ಲಿ ಗ್ರಹಣ ಗೋಚರಿಸುವುದು ಅನುಮಾನ ಎಂದು ನಾಸಾ(ನ್ಯಾಶನಲ್ ಏರಾನಾಟಿಕ್ಸ್ ಅಂಡ್ ಸ್ಪೇಸ್ ಅಡ್ ಮಿನಿಸ್ಟ್ರೇಶನ್)ತಿಳಿಸಿದೆ.

ಮಧ್ಯಾಹ್ನ 3.45 ರಿಂದ 7.15ರ ವರೆಗೆ ಚಂದ್ರಗ್ರಹಣ ಸಂಭವಿಸಲಿದೆ. ಮಧ್ಯಾಹ್ನವೇ ಗ್ರಹಣ ಆರಂಭವಾಗುವ ಕಾರಣ ಆರಂಭಿಕ ಹಂತ ನೋಡಲು ಸಿಗುವುದದಿಲ್ಲ. ಹಾಗಾಗಿ ರಾಜ್ಯ ಸೇರಿದಂತೆ ಹಲವೆಡೆ ಭಾಗಶಃ ಚಂದ್ರಗ್ರಹಣ ವೀಕ್ಷಿಸಲು ಮಾತ್ರ ಸಾಧ್ಯವಾಗುತ್ತದೆ.[ಏಪ್ರಿಲ್ 2015 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]

ಭಾರತದಲ್ಲಿ ಗ್ರಹಣ ಕಾಣಿಸುವುದೇ?
ದೇಶಾದ್ಯಂತ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಮಧ್ಯಾಹ್ನವೇ ಗ್ರಹಣ ಆರಂಭವಾಗಲಿದ್ದು ಸೂರ್ಯಾಸ್ತದ ವೇಳೆಗೆ ಸಂಪೂರ್ಣವಾಗಿ ನೋಡಬಹುದಾಗಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಯವರೆಗೂ ಗ್ರಹಣ ಇರುವುದರಿಂದ ಸುಲಭವಾಗಿ ವೀಕ್ಷಿಸಲು ಸಾಧ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+