ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಹಠಾತ್‌ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು?

|
Google Oneindia Kannada News

ನವದೆಹಲಿ, ಜೂ. 10: ಭಾರತದಲ್ಲಿ ಕೊರೊನಾ ಸೋಂಕು ಸಾವು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ದೇಶದಲ್ಲಿ ಒಂದೇ ದಿನ 6148 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈ ಭಾರೀ ಪ್ರಮಾಣದ ಕೊರೊನಾ ಸಾವುಗಳು ವರದಿಯಾಗಿರುವುದನ್ನು ನೋಡಿ ಜನರು ಆತಂಕ ಪಡಬೇಕಾಗಿಲ್ಲ. ಇದರ ಹಿಂದೆ ಬೇರೊಂದು ಕಾರಣವಿದೆ.

ದೇಶದಲ್ಲಿ ಬುಧವಾರ ಒಟ್ಟು 6,148 ಕೊರೊನಾ ಸಾವುಗಳು ವರದಿಯಾಗಿದೆ. ಬಿಹಾರದಲ್ಲೇ 3,951 ಸಾವುಗಳು ವರದಿಯಾಗಿದೆ. ಬಿಹಾರದಲ್ಲಿ ನಡೆಸಿದ ಪರಿಷ್ಕರಣೆಯ ಭಾಗವಾಗಿ ಪ್ರಕರಣಗಳು ದಾಖಲಾಗಿದೆ.

ಬಿಹಾರದಲ್ಲಿ ಕೋವಿಡ್‌ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು ದೃಢ ಬಿಹಾರದಲ್ಲಿ ಕೋವಿಡ್‌ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು ದೃಢ

ಇನ್ನು ಬಿಹಾರದಲ್ಲಿ ಈ ಕೊರೊನಾ ಸಾವು ಪ್ರಕರಣಗಳು ಯಾವ ಸಂದರ್ಭದಲ್ಲಿ ಸಂಭವಿಸಿದ್ದು ಎಂಬುವುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ. ಒಟ್ಟಾರೆಯಾಗಿ ಬಿಹಾರದಲ್ಲಿ 3,951 ಸಾವು ಸೇರ್ಪಡೆಯೊಂದಿಗೆ ಒಟ್ಟು ಕೊರೊನಾ ಸಾವು ಪ್ರಕರಣಗಳ ಸಂಖ್ಯೆ 9,429 ಕ್ಕೆ ಏರಿಕೆಯಾಗಿದೆ.

ಬಿಹಾರದಲ್ಲಿ ಮೊದಲ ಬಾರಿಗೆ ಕೊರೊನಾ ದತ್ತಾಂಶ ಪರಿಷ್ಕರಣೆ

ಬಿಹಾರದಲ್ಲಿ ಮೊದಲ ಬಾರಿಗೆ ಕೊರೊನಾ ದತ್ತಾಂಶ ಪರಿಷ್ಕರಣೆ

ಬಿಹಾರ ರಾಜ್ಯವು ತನ್ನ ಕೊರೊನಾ ಪ್ರಕರಣಗಳ ದತ್ತಾಂಶವನ್ನು ಪರಿಷ್ಕರಣೆ ಮಾಡಿದ್ದು ಇದೇ ಮೊದಲಾಗಿದೆ. ಆದ್ದರಿಂದ, ಬುಧವಾರ ಸೇರಿಸಲಾದ ಕೆಲವು ಸಾವುಗಳು ಕಳೆದ ವರ್ಷದಲ್ಲಿಯೂ ಸಂಭವಿಸುವ ಸಾವುಗಳು ಆಗಿರುವ ಸಾಧ್ಯತೆಯಿದೆ. ಮಹಾರಾಷ್ಟ್ರದಂತಹ ರಾಜ್ಯಗಳು ಪ್ರತಿ ತಿಂಗಳ ಕೊನೆಯಲ್ಲಿ ಇದೇ ರೀತಿ ಪರಿಷ್ಕರಣೆ ಮಾಡುತ್ತದೆ. ಈ ರಾಜ್ಯದ ಸಾವಿನ ಪ್ರಕರಣದಲ್ಲಿ ಹೆಚ್ಚಿನವುಗಳು ಕಳೆದ ಎರಡು ಮೂರು ವಾರಗಳಿಂದ ಸಂಭವಿಸಿರುವ ಸಾವುಗಳು ಆಗಿರುತ್ತದೆ.

ಬಿಹಾರದಲ್ಲಿ ಪರಿಷ್ಕರಣೆಗೂ ಮೊದಲು ಹಾಗೂ ನಂತರ

ಬಿಹಾರದಲ್ಲಿ ಪರಿಷ್ಕರಣೆಗೂ ಮೊದಲು ಹಾಗೂ ನಂತರ

ಬಿಹಾರದಲ್ಲಿ 5,500 ಕ್ಕಿಂತ ಕಡಿಮೆಯಾಗಿದ್ದ ಕೊರೊನಾ ಸಾವು ಪ್ರಕರಣಗಳು ಪರಿಷ್ಕರಣೆಯ ಬಳಿಕ 9,429 ಕ್ಕೆ ಏರಿದೆ. ಬುಧವಾರ ಪರಿಷ್ಕರಣೆಯ ಬಳಿಕ ದೇಶದ ಕೊರೊನಾ ಸಾವು ಪ್ರಕರಣಗಳ ದತ್ತಾಂಶ ಪಟ್ಟಿಯಲ್ಲಿ ಬಿಹಾರ 12 ನೇ ಸ್ಥಾನದಲ್ಲಿದೆ. ಇನ್ನು ಈ ಸಾವುಗಳ ಪೈಕಿ ಈ ಹೆಚ್ಚಿನವುಗಳು ಈ ಹಿಂದೆ ಚೇತರಿಸಿಕೊಂಡಿರುವ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಈ ಕಾರಣದಿಂದಾಗಿ ರಾಜ್ಯದಲ್ಲಿ ಚೇತರಿಕೆ ಸಂಖ್ಯೆಯು ಇಳಿಕೆ ಕಂಡಿದೆ. ಪರಿಷ್ಕರಣೆಗೂ ಮೊದಲು 7,01,234 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದ್ದು ಪರಿಷ್ಕರಣೆ ಬಳಿಕ ಈ ಅಂಕಿ ಅಂಶ 6,98,397 ಕ್ಕೆ ಕುಸಿದಿದೆ. ಈ ಮೂಲಕ ಶೇ 98.70 ರಷ್ಟಿದ್ದ ಚೇತರಿಕೆ ಪ್ರಮಾಣ ಪರಿಷ್ಕರಣೆಯ ನಂತರ ಶೇ 97.65 ಕ್ಕೆ ಇಳಿದಿದೆ. ಸಾವಿನ ಪ್ರಮಾಣವು ಶೇಕಡಾ 1.22 ರಿಂದ 1.23 ಕ್ಕೆ ಏರಿದೆ.

ಭಾರತದಲ್ಲಿ ಒಂದೇ ದಿನ 6148 ಜನರನ್ನು ಬಲಿ ತೆಗೆದುಕೊಂಡ ಕೊರೊನಾವೈರಸ್!ಭಾರತದಲ್ಲಿ ಒಂದೇ ದಿನ 6148 ಜನರನ್ನು ಬಲಿ ತೆಗೆದುಕೊಂಡ ಕೊರೊನಾವೈರಸ್!

ಹಾಗಾದರೆ ದೇಶದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವೇನು?

ಹಾಗಾದರೆ ದೇಶದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವೇನು?

ಬಿಹಾರದಲ್ಲಿ ಬುಧವಾರ ಕೊರೊನಾ ಸಾವು ಪ್ರಕರಣಗಳ ಪರಿಷ್ಕರಣೆ ಮಾಡಲಾಗಿದ್ದು ರಾಜ್ಯದಲ್ಲಿ ಸಾವು ಪ್ರಕರಣಗಳು ಏರಿಕೆಯಾಗಿದೆ. ದೇಶದಲ್ಲಿ ಬುಧವಾರ ಒಟ್ಟು 6,148 ಕೊರೊನಾ ಸಾವುಗಳು ವರದಿಯಾಗಿದ್ದು ಈ ಪೈಕಿ ಬಿಹಾರದಲ್ಲೇ 3,951 ಸಾವುಗಳು ವರದಿಯಾಗಿದೆ. ಆದರೆ ಇದು ಒಂದೇ ದಿನದಲ್ಲೇ ದಾಖಲಾದ ಪ್ರಕರಣಗಳಲ್ಲ. ಬಿಹಾರದಲ್ಲಿ ನಡೆಸಿದ ಪರಿಷ್ಕರಣೆಯ ಭಾಗವಾಗಿ ಈ ಸಾವುಗಳು ವರದಿಯಾಗಿದೆ. ದೇಶದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಏರಿಕೆಗೆ ಬಿಹಾರದಲ್ಲಿ ಮಾಡಲಾದ ಕೊರೊನಾ ದತ್ತಾಂಶ ಪರಿಷ್ಕರಣೆಯೇ ಕಾರಣವಾಗಿದೆ.

 ದೇಶದ ಕೊರೊನಾ ಪರಿಸ್ಥಿತಿ

ದೇಶದ ಕೊರೊನಾ ಪರಿಸ್ಥಿತಿ

ಕಳೆದ 24 ಗಂಟೆಗಳಲ್ಲಿ 94,052 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು ಇದೇ ಅವಧಿಯಲ್ಲಿ 1,51,367 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಒಟ್ಟು 2,91,83,121 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,76,55,493 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 3,59,676 ಜನರು ಸಾವನ್ನಪ್ಪಿದ್ದಾರೆ. 11,67,952 ಕೊರೊನಾವೈರಸ್ ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ವೇಗ ಸುಧಾರಿಸುತ್ತಿದೆ. ಕಳೆದ ಮೂರು ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. ಬುಧವಾರ ಲಭ್ಯವಾದ ಮಂಗಳವಾರದ ಕೊರೊನಾ ವರದಿ ಪ್ರಕಾರ ದೇಶದಲ್ಲಿ ಒಂದೇ ದಿನ 92,596 ಮಂದಿಗೆ ಸೋಂಕು ತಗುಲಿದೆ. ಆದರೆ ಸತತ ಮೂರು ದಿನವೂ ದೇಶದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗಿವೆ.

(ಒನ್‌ಇಂಡಿಯಾ ಸುದ್ದಿ)

English summary
Why the Covid death count has jumped all of a sudden in India? Explained here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X