ದುಬಾರಿ ಬೆಲೆಗೆ ವಿದ್ಯುತ್ ಖರೀದಿ ಏಕೆ? ಮೋದಿಗೆ ರಾಹುಲ್ 3ನೇ ಪ್ರಶ್ನೆ
ಅಹಮದಾಬಾದ್, ಡಿಸೆಂಬರ್ 1: ಪ್ರಧಾನಿ ನರೇಂದ್ರ ಮೋದಿಯವರಿಗೆ ದಿನಕ್ಕೊಂದು ಪ್ರಶ್ನೆ ಕೇಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಜನರ ದುಡ್ಡಲ್ಲಿ ಖಾಸಗಿ ಕಂಪನಿಗಳಿಂದ ದುಬಾರಿ ಬೆಲೆಗೆ ಯಾಕೆ ವಿದ್ಯುತ್ ಖರೀದಿಸುತ್ತಿದ್ದೀರಿ? ಎಂದು ಗುಜರಾತ್ ಸರಕಾರವನ್ನು ಪ್ರಶ್ನಿಸಿದ್ದಾರೆ.
ರಾಹುಲ್ ತಮ್ಮ ದಿನಕ್ಕೊಂದು ಪ್ರಶ್ನೆ ಮಾಲಿಕೆಯಲ್ಲಿ ಈ ಪ್ರಶ್ನೆ ಎತ್ತಿದ್ದಾರೆ. "2002ರಿಂದ 2016ರ ವರೆಗೆ ನಾಲ್ಕು ಖಾಸಗೀ ಕಂಪನಿಗಳ ಬೊಕ್ಕಸಕ್ಕೆ (ಗುಜರಾತ್ ಸರಕಾರದಿಂದ) ರೂ. 62,549 ಕೋಟಿ ಏಕೆ ತುಂಬಿಸಲಾಯಿತು?," ಎಂದು ಅವರು ಪ್ರಶ್ನಿಸಿದ್ದಾರೆ.

"ರಾಜ್ಯದ ವಿದ್ಯುತ್ ಉತ್ಪಾದನೆಯನ್ನು ಶೇಕಡಾ 62ರಷ್ಟು, ಇಳಿಸಿ ರೂ. 3ರ ಬದಲಿಗೆ ಖಾಸಗಿ ಕಂಪನಿಗಳಿಗೆ ಯೂನಿಟ್ ಗೆ ರೂ. 24 ಬೆಲೆ ತೆತ್ತು ವಿದ್ಯುತ್ ಖರೀದಿಸುತ್ತಿರುವುದೇಕೆ? ಜನರ ದುಡ್ಡನ್ನು ದುಂದುವೆಚ್ಚ ಮಾಡುತ್ತಿರುವುದೇಕೆ?," ಎಂದು ರಾಹುಲ್ ಗಾಂಧಿ ಟ್ವಿಟ್ಟರಿನಲ್ಲಿ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.












Click it and Unblock the Notifications